Advertisement

ದಕ್ಷಿಣ ಕನ್ನಡ ಜಿಲ್ಲೆ: ಕಚ್ಚಾ ರಸ್ತೆಗಳದ್ದೇ ಸಾಮ್ರಾಜ್ಯ!

02:09 AM May 18, 2022 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ 4,592 ಜನವಸತಿ ಪ್ರದೇಶ ಗಳು ಇನ್ನೂ ಸರ್ವಋತು ರಸ್ತೆ ಸಂಪರ್ಕದಿಂದ ವಂಚಿತವಾಗಿಯೇ ಇವೆ. ಒಟ್ಟು 7,655 ಜನವಸತಿ ಪ್ರದೇಶಗಳ ಪೈಕಿ 3,063 ಜನವಸತಿ ಪ್ರದೇಶಗಳು ಸರ್ವಋತು ಸಂಪರ್ಕ ರಸ್ತೆಗಳನ್ನು ಹೊಂದಿವೆ.

Advertisement

ವರ್ಷ ಪೂರ್ತಿ ಸಂಚಾರಕ್ಕೆ ಯೋಗ್ಯ ವಾಗಿರುವ ರಸ್ತೆ ಗಳನ್ನು ಸರ್ವಋತು ರಸ್ತೆಗಳೆನ್ನುತ್ತಾರೆ. ಮಳೆಗಾಲದಲ್ಲಿ ಸಂಚಾರ ಸ್ಥಗಿತ ಗೊಳ್ಳುವ ಅಥವಾ ಸಂಚಾರಕ್ಕೆ ಯೋಗ್ಯವಲ್ಲದ ರಸ್ತೆಗಳಿರುವ ಜನವಸತಿ ಪ್ರದೇಶಗಳು ಸರ್ವಋತು ಸಂಪರ್ಕವಿರದ ಪ್ರದೇಶಗಳಲ್ಲಿ ಒಳಗೊಳ್ಳುತ್ತವೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅಂಕಿ-ಅಂಶದಂತೆ ಬಂಟ್ವಾಳ ತಾಲೂಕಿನಲ್ಲಿ 2,077 ಜನವಸತಿ ಪ್ರದೇಶಗಳು (ಸರ್ವಋತು ಸಂಪರ್ಕವಿರುವ ಜನವಸತಿ ಪ್ರದೇಶಗಳು 560), ಬೆಳ್ತಂಗಡಿ ತಾಲೂಕಿನಲ್ಲಿ 1,440, (653) ಕಡಬದಲ್ಲಿ 162 (390), ಮಂಗಳೂರಿನಲ್ಲಿ 2, ಮೂಡುಬಿದಿರೆಯಲ್ಲಿ 405 (148) ಪುತ್ತೂರಿನಲ್ಲಿ 20 (350) ಸುಳ್ಯದಲ್ಲಿ 486 (370) ಜನವಸತಿ ಪ್ರದೇಶಗಳು ಸರ್ವಋತು ಸಂಪರ್ಕ ರಸ್ತೆಗಳನ್ನು ಹೊಂದಿಲ್ಲ.

ಕಚ್ಚಾರಸ್ತೆಗಳೇ ಹೆಚ್ಚು
ಜಿಲ್ಲೆಯಲ್ಲಿ ಒಟ್ಟು 8,768.55 ಕಿ.ಮೀ. ಗ್ರಾ. ಪಂಚಾಯತ್‌ರಾಜ್‌ ಇಲಾಖಾ ಅಧೀನ ರಸ್ತೆಗಳಿದ್ದು ಅದರಲ್ಲಿ 5,098.83 ಕಿ.ಮೀ. ರಸ್ತೆ ಕಚ್ಚಾರಸ್ತೆ, 3,499.68 ಕಿ.ಮೀ. ಪಕ್ಕಾ ಹಾಗೂ 170.04 ಕಿ.ಮೀ.ಜಲ್ಲಿ ರಸ್ತೆ., ಬಂಟ್ವಾಳ ತಾಲೂಕಿನಲ್ಲಿ 1,025.66 ಕಿ.ಮೀ. ಪಕ್ಕಾ, 37.41 ಕಿ.ಮೀ. ಜಲ್ಲಿ ಹಾಗೂ 970.57 ಕಚ್ಚಾ ರಸ್ತೆ ಸೇರಿದಂತೆ 2,033.64 ಕಿ.ಮೀ.,
ಬೆಳ್ತಂಗಡಿ ತಾಲೂಕಿನಲ್ಲಿ 573.34 ಪಕ್ಕಾ, 48.84ಜಲ್ಲಿ ಹಾಗೂ 1,359.84 ಕಿ.ಮಿ. ಕಚ್ಚಾ ಸೇರಿ ದಂತೆ 1,982 ಕಿ.ಮೀ., ಕಡಬದಲ್ಲಿ 217.95 ಪಕ್ಕಾ,12.38 ಜಲ್ಲಿ ಹಾಗೂ 553.22 ಕಚ್ಚಾ ಸೇರಿದಂತೆ 783.55 ಕಿ.ಮೀ., ಮಂಗಳೂರಿನಲ್ಲಿ 611.09 ಕಿ.ಮೀ. ಪಕ್ಕಾ, 14.1 ಜಲ್ಲಿ, 397.87 ಕಿ.ಮೀ. ಕಚ್ಚಾಸೇರಿದಂತೆ 1,023.06 ಕಿ.ಮೀ., ಮೂಡುಬಿದಿರೆ ಯಲ್ಲಿ 325.42 ಪಕ್ಕಾ, 5.54 ಕಿ.ಮೀ. ಜಲ್ಲಿ, 274.68 ಕಿ.ಮೀ. ಕಚ್ಚಾ ರಸ್ತೆ ಸೇರಿದಂತೆ 605.64 ಕಿ.ಮೀ., ಪುತ್ತೂರಿನಲ್ಲಿ 425.19 ಕಿ.ಮೀ. ಪಕ್ಕಾ,25.85 ಜಲ್ಲಿ, 781.64 ಕಚ್ಚಾ ಸೇರಿದಂತೆ 1232.68 ಕಿ.ಮೀ., ಸುಳ್ಯದಲ್ಲಿ 321.03 ಪಕ್ಕಾ, 25.92 ಕಿ.ಮೀ.ಜಲ್ಲಿ ಹಾಗೂ 761.01 ಕಚ್ಚಾ ಸೇರಿದಂತೆ 1,107.96 ಕಿ.ಮೀ. ರಸ್ತೆಗಳಿವೆ.

2,132.25 ಕಿ.ಮೀ. ಪಿಡಬ್ಲ್ಯೂ ಡಿ ರಸ್ತೆ
ಪಂಚಾಯತ್‌ ರಾಜ್‌ ಇಲಾಖಾ ಅಧೀನದ ರಸ್ತೆಗಳ ಜತೆಗೆ ಜಿಲ್ಲೆಯಲ್ಲಿ 686.99 ಕಿ.ಮೀ. ರಾಜ್ಯ ಹೆದ್ದಾರಿ ಹಾಗೂ 1,445.26 ಕಿ.ಮೀ. ಜಿಲ್ಲಾ ಮುಖ್ಯರಸ್ತೆ ಸೇರಿದಂತೆ 2,132.25 ಕಿ.ಮೀ. ಲೋಕೋಪಯೋಗಿ ಇಲಾಖಾ ರಸ್ತೆಗಳಿವೆ. ಮಂಗಳೂರಿನಲ್ಲಿ 135.70 ಕಿ.ಮೀ. ರಾಜ್ಯ ಹೆದ್ದಾರಿ ಹಾಗೂ 367.28 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆ ಸೇರಿ 502.98 ಕಿ.ಮೀ., ಬಂಟ್ವಾಳದಲ್ಲಿ 145.75 ರಾಜ್ಯ ಹೆದ್ದಾರಿ, 264.82 ಕಿ.ಮೀ. ಸೇರಿ 410.57 ಕಿ.ಮೀ., ಪುತ್ತೂರಿನಲ್ಲಿ 55.75 ಕಿ.ಮೀ. ರಾಜ್ಯ ಹೆದ್ದಾರಿ ಹಾಗೂ 123.70 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆ ಸೇರಿ 179.20 ಕಿ.ಮೀ., ಕಡಬದಲ್ಲಿ 108.10 ಕಿ.ಮೀ. ರಾಜ್ಯ ಹೆದ್ದಾರಿ ಸುಳ್ಯದಲ್ಲಿ 100.44 ಕಿ.ಮೀ. ರಾಜ್ಯ ಹೆದ್ದಾರಿ ಹಾಗೂ ಬೆಳ್ತಂಗಡಿಯಲ್ಲಿ 141.50 ಕಿ.ಮೀ. ರಾಜ್ಯ ಹೆದ್ದಾರಿ ಹಾಗೂ 334.05 ಕಿ.ಮೀ. ಜಿಲ್ಲಾ ಮುಖ್ಯರಸ್ತೆ ಸೇರಿ 475.55 ಕಿ.ಮೀ. ರಸ್ತೆಗಳಿವೆ.

Advertisement

3,054ರಡಿ ಅನುದಾನ ಇಲ್ಲ
3054 ಲೆಕ್ಕಶೀರ್ಷಿಕೆ ಅಡಿಯಲ್ಲಿ ಜಿ.ಪಂ.ಗೆ ಬಿಡುಗಡೆಯಾಗುತ್ತಿದ್ದ ಅನುದಾನದಲ್ಲಿ ಗ್ರಾಮೀಣ ರಸ್ತೆಗಳ ನಿರ್ವಹಣೆ, ದುರಸ್ತಿ ಕೈಗೊಳ್ಳಲಾಗುತ್ತಿತ್ತು. ಈ ಅನುದಾನ 3 ವರ್ಷಗಳಿಂದ ಸ್ಥಗಿತಗೊಂಡಿದೆ.ಇದರಿಂದಾಗಿ ಗ್ರಾಮೀಣ ರಸ್ತೆಗಳ ನಿರ್ವಹಣೆಗೆ ತೊಡಕಾಗಿದೆ.

ಆದ್ಯತೆಯಲ್ಲಿ ಉನ್ನತೀಕರಣ
ಸರಕಾರದ ವಿವಿಧ ಯೋಜನೆಗಳ ಮೂಲಕ ಗ್ರಾಮೀಣ ರಸ್ತೆಗಳ ಅಭಿವೃದ್ಧಿಯನ್ನು ಆದ್ಯತೆ ಮೇರೆಗೆ ಕೈಗೆತ್ತಿ ಕೊಳ್ಳಲಾಗುತ್ತಿದೆ. ಸ್ಥಳೀಯವಾಗಿ ಜನಪ್ರತಿನಿಧಿಗಳು ಆದ್ಯತೆಯ ಮೇರೆಗೆ ರಸ್ತೆ ಉನ್ನತೀಕರಣ ಯೋಜನೆಗಳನ್ನು ನಿರ್ಧರಿಸುತ್ತಾರೆ. ಕೆಲವು ಕಡೆಗಳಲ್ಲಿ ಬೇರೆ ಬೇರೆ ಕಾರಣ ಗಳಿಂದಾಗಿ ರಸ್ತೆಗಳ ಉನ್ನತೀಕರಣ ಕೆಲಸ ಬಾಕಿಯುಳಿ ದಿರುತ್ತವೆ. ಸರಕಾರ ರಸ್ತೆಗಳ ಅಭಿವೃದ್ಧಿಗೆ ಗರಿಷ್ಠ ಮೊತ್ತದ ಅನುದಾನ ನೀಡುತ್ತಿದೆ.
– ಸುನಿಲ್‌ ಕುಮಾರ್‌,
ಜಿಲ್ಲಾ ಉಸ್ತುವಾರಿ ಸಚಿವ

-ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next