Advertisement
ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮೆಸ್ಕಾಂನ ಭಾರೀ ವಿದ್ಯುತ್ ಶುಲ್ಕದ ಕುರಿತಂತೆ ಪ್ರಸ್ತಾವಿಸಿದ ಅವರು, ತಿಂಗಳಿಗೆ 250 ರೂ. ಬಿಲ್ ಬರುತ್ತಿದ್ದ ಹಲವು ಮನೆಗಳಿಗೆ ದುಪ್ಪಟ್ಟು ಬಿಲ್ ಬಂದಿದೆ.
ಈ ವೇಳೆ ಮೆಸ್ಕಾಂ ಅಧಿಕಾರಿ ಮಾತನಾಡಿ, ಲಾಕ್‌ಡೌನ್ ಸಂದರ್ಭ ಗೃಹ ಬಳಕೆ ವಿದ್ಯುತ್ ಹೆಚ್ಚಿಗೆ ಬಳಕೆಯಾಗಿದೆ. ಎಪ್ರಿಲ್, ಮೇ ತಿಂಗಳಿಗೆ ಒಂದೇ ಬಿಲ್ ನೀಡಲಾಗಿದೆ. ಗೃಹ ಬಳಕೆಯ ವಿದ್ಯುತ್ ದರವನ್ನು ಪರಾಮರ್ಶೆ ಮಾಡಿ ನೀಡಲಾಗುತ್ತಿದೆ.
Related Articles
Advertisement
ಶಾಸಕ ಯು.ಟಿ. ಖಾದರ್ ಮಾತನಾಡಿ, ಸಬ್ ಡಿವಿಜನ್‌ಗಳಲ್ಲಿ ಈ ಬಗ್ಗೆ ಅದಾಲತ್ ಮಾಡುವಂತೆ ಆಗ್ರ ಹಿಸಿದರು. ಶಾಸಕ ರಾಜೇಶ್ ನಾೖಕ್ ಮಾತನಾಡಿ, ಮೀಟರ್ ರೀಡಿಂಗ್ ಟೆಂಡರ್ ರದ್ದು ಮಾಡಿ ಸಬ್‌ಡಿವಿಜನ್‌ಗೆ ಕೊಡಿ ಎಂದು ಆಗ್ರಹಿಸಿದರು. ಸಚಿವ ಕೋಟ ಮಾತನಾಡಿ, ಇ-ಟೆಂಡರ್ ರದ್ದುಗೊಳಿಸಿ ಸಬ್‌ಡಿವಿಜನ್ ಆಧಾರದಲ್ಲಿ ಮೀಟರ್ ರೀಡಿಂಗ್ ಟೆಂಡರ್ ಮಾಡಿಸುವಂತೆ ಸೂಚಿ ಸಿದರು.
ಎಂಡಿಯನ್ನು ಕರೆಸಿದ ಸಂಸದಸಭೆಯಲ್ಲಿ ಮೆಸ್ಕಾಂ ಎಂಡಿ ಅವರ ಗೈರುಹಾಜರಿಯನ್ನು ಪ್ರಶ್ನಿಸಿದ ಸಂಸದ ನಳಿನ್ ಕುಮಾರ್ ಕಟೀಲು ಅವರು ಕೂಡಲೇ ಸಭೆಗೆ ಹಾಜರಾಗುವಂತೆ ಸೂಚಿಸಿದರು. ಸ್ವಲ್ಪ ಸಮಯದ ಬಳಿಕ ಎಂಡಿ ಆಗಮಿಸಿದರು. ಸಚಿವ ಕೋಟ ಅವರು ಜೂನ್ ವರೆಗೆ ಮನೆಗಳ ವಿದ್ಯುತ್ ಕಡಿತ ಮಾಡದಂತೆ ಎಂಡಿಗೂ ತಾಕೀತು ಮಾಡಿದರು. ವರ್ಷದ ಕಡಿಮೆ ಬಿಲ್‌ನ ಆಧಾರದಲ್ಲಿ ಸರಾಸರಿ ಬಿಲ್ ಮಾಡಬೇಕು ಎಂದು ಸೂಚಿಸಿದರು.