Advertisement
ನಡುನಡುವೆ ಬಿಸಿಲು ಕೂಡ ಇತ್ತು. ನಗರ- ಗ್ರಾಮೀಣ ಭಾಗದಲ್ಲಿ ಸಂಜೆ – ರಾತ್ರಿ ವೇಳೆ ಮಳೆ ತುಸು ಹೆಚ್ಚಾಗಿದ್ದು, ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆ ಕಾರ್ಯಕ್ರಮಗಳಿಗೆ ಸ್ವಲ್ಪ ಸಮಸ್ಯೆಯಾಯಿತು.
ಸುಳ್ಯ: ತಾಲೂಕಿನಲ್ಲಿ ವಿವಿಧೆಡೆ ಸೋಮವಾರ ದಿನವಿಡೀ ಸಾಧಾರಣ ಮಳೆಯಾಗಿದೆ. ಬೆಳಗ್ಗಿನಿಂದಲೇ ಆರಂಭಗೊಂಡಿದ್ದ ಮಳೆ ಆಗಾಗ ಬಿರುಸು ಪಡೆದಿತ್ತು. ಸುಳ್ಯ ನಗರ, ಜಾಲೂÕರು, ಮಂಡೆಕೋಲು, ಬೆಳ್ಳಾರೆ, ಪಂಜ, ಗುತ್ತಿಗಾರು, ಅರಂತೋಡು, ಸಂಪಾಜೆ, ಕೊಲ್ಲಮೊಗ್ರು ಹಾಗೂ ಸುಬ್ರಹ್ಮಣ್ಯ, ಬಳ್ಪ, ಎಡಮಂಗಲ, ಬಿಳಿನೆಲೆ ಪರಿಸರದ ವಿವಿಧೆಡೆ ದಿನವಿಡೀ ಸಾಧಾರಣ ಮಳೆಯಾಗಿದೆ.
Related Articles
ಉಡುಪಿ: ಜಿಲ್ಲೆಯಲ್ಲಿ ಸೋಮವಾರ ಬಿಟ್ಟುಬಿಟ್ಟು ಸಾಮಾನ್ಯ ಮಳೆಯಾಗಿದೆ. ಉಡುಪಿ, ಬೈಂದೂರು, ಕಾರ್ಕಳ, ಕುಂದಾಪುರ, ಹೆಬ್ರಿ, ಕಾಪು ಸುತ್ತಮುತ್ತಲಿನ ಭಾಗದಲ್ಲಿ ಬಿಸಿಲು ಮೋಡ ಕವಿದ ವಾತಾವರಣ ನಡುವೆ ಕೆಲಕಾಲ ಉತ್ತಮ ಮಳೆಯಾಗಿದೆ. ರವಿವಾರ ತಡರಾತ್ರಿ, ಸೋಮವಾರ ಉಡುಪಿ, ಮಣಿಪಾಲ ಸುತ್ತಮುತ್ತ ಆಗಾಗ ಧಾರಾಕಾರ ಮಳೆ ಸುರಿದಿದೆ.
Advertisement