Advertisement
ನಗರದ ಟಿಎಂಎ ಪೈ ಸಭಾಂಗಣದಲ್ಲಿ ಶನಿವಾರ ಸಂಜೆ ಜರಗಿದ “ಕ್ಯಾಪ್ಟನ್ ಬ್ರಿಜೇಶ್ ಚೌಟ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರ ಅಭಿನಂದನಾ ಸಮಾರಂಭ’ದಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಜಾತಿ ರಾಜಕಾರಣವನ್ನು ಮುಂದಿರಿಸಿ ಚುನಾವಣೆ ಎದುರಿಸಲು ಹೋದರು, ಆದರೆ ನಮ್ಮ ನೆಲದಲ್ಲಿ ಧರ್ಮಕ್ಕೆ ಸದಾ ಗೆಲುವು ಎನ್ನುವುದನ್ನು ಕಾರ್ಯಕರ್ತರು ತೋರಿಸಿಕೊಟ್ಟಿದಿದೀರಿ. ಇದು ಹಿಂದುತ್ವದ ಅಸ್ಮಿತೆ ಇರುವ ನೆಲ. ಇದು ತುಳುನಾಡಿನ ನೆಲ, ಸತ್ಯಧರ್ಮ ನೆಲ. ಇಲ್ಲಿ ಹಿಂದುತ್ವಕ್ಕೆ ಗೆಲುವು ಎನ್ನುವುದನ್ನು ಎಲ್ಲರೂ ಒಂದಾಗಿ ತೋರಿಸಿಕೊಟ್ಟಿದ್ದೀರಿ. ಇದು ಯುವನಾಯಕತ್ವಕ್ಕೆ ಸಂದಿರುವ, ರಾಷ್ಟ್ರೀಯತೆಗೆ ಒಲಿದಿರುವ ಗೆಲುವು ಎಂದು ಕ್ಯಾ| ಚೌಟ ಬಣ್ಣಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಶಾಸಕರಾದ ವೇದವ್ಯಾಸ ಕಾಮತ್, ಡಾ| ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ, ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮಾಜಿ ಶಾಸಕ ಸಂಜೀವ ಮಠಂದೂರು, ವಿಧಾನ ಪರಿಷತ್ ಮಾಜಿ ಸದಸ್ಯ ಪ್ರತಾಪಸಿಂಹ ನಾಯಕ್, ನಿತಿನ್ ಕುಮಾರ್, ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ, ಕಿಶೋರ್ ಬೊಟ್ಯಾಡಿ ಹಾಜರಿದ್ದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ ಸ್ವಾಗತಿಸಿದರು. ರಾಕೇಶ್ ರೈ ನಿರೂಪಿಸಿದರು. ಯತೀಶ್ ಅರ್ವಾರ್ ವಂದಿಸಿದರು.
Related Articles
ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಹೊಸ ಪದಾಧಿಕಾರಿಗಳ ತಂಡವಿತ್ತು, ಹೊಸಬರ ಮುಂದೆ ಸವಾಲಿತ್ತು. ಆದರೆ ಮಾಜಿ ಸಂಸದ ನಳಿನ್ ಕುಮಾರ್, ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ ಅವರ ಸಹಕಾರದೊಂದಿಗೆ ಎಲ್ಲ ಪದಾಧಿಕಾರಿಗಳು, ಶಾಸಕರು ಹಾಗೂ ಕಾರ್ಯಕರ್ತರ ಶಕ್ತಿಯಿಂದ ಒಗ್ಗಟ್ಟಾಗಿ ಕ್ಯಾ| ಬ್ರಿಜೇಶ್ ಚೌಟ ಅವರಿಗೆ ಗೆಲುವು ಪ್ರಾಪ್ತವಾಗಿದೆ ಎಂದರು.
Advertisement
ಜಿಲ್ಲಾ ಲೋಕಸಭಾ ಚುನಾವಣ ಪ್ರಭಾರಿ ಕ್ಯಾ| ಗಣೇಶ್ ಕಾರ್ಣಿಕ್ ಮಾತನಾಡಿ, ಮುಂದಿನ ಐದು ವರ್ಷಗಳ ಕಾಲ ದೇಶದ ಮುಂದೆ ದೊಡ್ಡ ಸವಾಲಿದೆ. ಆದರೆ ನಮ್ಮ ಕಾರ್ಯಕರ್ತರ ತಂಡದ ಉತ್ಸಾಹ ಹಾಗೂ ಶಕ್ತಿಯನ್ನು ಶಬ್ದಗಳಲ್ಲಿ ವರ್ಣಿಸಲಾಗದು. ಮುಂದೆಯೂ ಅದೇ ಶಕ್ತಿ ಹಾಗೂ ಬದ್ಧತೆಯೊಂದಿಗೆ ಕೆಲಸ ಮಾಡುವ ಮೂಲಕ ದೇಶ ವಿಭಜಿಸುವ, ರಾಷ್ಟ್ರದ ಪ್ರಗತಿಗೆ ಅಡ್ಡಿಯಾಗುವ ಶಕ್ತಿಗಳನ್ನು ಸೋಲಿಸುವ ಕೆಲಸ ಮಾಡಬೇಕು ಎಂದರು.
ವಿಜಯೋತ್ಸವ-ಬೃಹತ್ ವಾಹನ ಜಾಥಾನೂತನ ಸಂಸದರಾಗಿ ಆಯ್ಕೆಯಾಗಿ, ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಕ್ಯಾ| ಬ್ರಿಜೇಶ್ ಚೌಟ ಅವರನ್ನು ಕಾರ್ಯಕರ್ತರ ಬೃಹತ್ ಪಡೆಯೇ ಮಂಗಳೂರು ವಿಮಾನ ನಿಲ್ದಾಣದಿಂದ ಟಿಎಂಎ ಪೈ ಸಭಾಂಗಣದ ವರೆಗೂ ಸ್ವಾಗತಿಸಿತು. ದಾರಿಯುದ್ದಕ್ಕೂ ವಾಹನ ಜಾಥಾ ನಡೆದಿದ್ದು, ಕಾವೂರು, ಕೆಪಿಟಿ, ಯೆಯ್ನಾಡಿ, ಪದವಿನಂಗಡಿ, ಬಿಜೈ ಮುಂತಾದೆಡೆಗಳಲ್ಲಿ ಸ್ವಾಗತ ಕಾರ್ಯಕ್ರಮ ನಡೆಯಿತು. ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮಿಸಿದರು. ಶ್ರದ್ಧಾಂಜಲಿ
ತಮ್ಮ ಮಾತು ಆರಂಭಿಸು ವುದಕ್ಕೂ ಮೊದಲು ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ಪ್ರಾಕೃತಿಕ ವಿಕೋಪದಿಂದ ಕೆಲವು ದಿನಗಳಲ್ಲಿ ಜೀವ ಕಳೆದುಕೊಂಡವರಿಗೆ ತಮ್ಮ ಶ್ರದ್ಧಾಂಜಲಿ ಸಲ್ಲಿಸಿದರು.