Advertisement
ರಾಜ್ಯದ ಮೆರಿಟೈಂ ಮಂಡಳಿಯವರು ಸಿದ್ಧಪಡಿಸಿದ ಒಟ್ಟು 29.62 ಕೋಟಿ ರೂ. ವೆಚ್ಚದ ಯೋಜನೆಗೆ ಸಾಗರಮಾಲಾ ದಿಂದ ಅಂತಿಮ ಅನುಮೋ ದನೆ ಬಂದಿದ್ದು, ಶೀಘ್ರ ಕೆಲಸ ಆರಂಭವಾಗಲಿದೆ.
ಎನ್‌ಡಬ್ಲ್ಯು 43ರಲ್ಲಿ ಹೊಯ್ಗೆ ಬಜಾರ್ ಮತ್ತು ಕೂಳೂರು -ಈ ಎರಡು ಕಡೆ ಫಲ್ಗುಣಿ ನದಿಯಲ್ಲಿ ರ್‍ಯಾಂಪ್ ಜೆಟ್ಟಿ ನಿರ್ಮಾಣ ಮಾಡಲಾಗುತ್ತದೆ. ಲಾರಿಗಳು ಅಥವಾ ಪ್ರಯಾಣಿಕರ ವಾಹನಗಳು ಬಾರ್ಜ್‌ಗೆ ಏರಲು ಇದು ಸಹಾಯಕ.
ಮಂಗಳೂರಿನ ವಾಣಿಜ್ಯ ಕೇಂದ್ರವಾದ ಬಂದರಿಗೆ ಹಲವು ಸರಕು ಲಾರಿಗಳು, ಮೀನಿನ ಟ್ರಕ್‌ಗಳು ಬಂದು ಹೋಗುತ್ತಿರುತ್ತವೆ.
Related Articles
Advertisement
ಇಲಾಖೆಯಿಂದಲೇ ಬಾರ್ಜ್ ಯೋಜನೆಗೆ ಸಂಬಂಧಿಸಿ ಅಗತ್ಯ ವಿರುವ ಬಾರ್ಜ್ ಖರೀದಿಸ ಲಾಗು ತ್ತದೆ, ಇದಕ್ಕಾಗಿ 6.45 ಕೋಟಿ ರೂ. ಮೀಸಲಿರಿಸಲಾಗಿದೆ. ಆರಂಭದಲ್ಲಿ 4 ಟ್ರಕ್ ನಿಲ್ಲಬಲ್ಲಂತಹ ಬಾರ್ಜ್ ಬರಲಿದೆ. ಸ್ಪಂದನೆ ಉತ್ತಮವಾಗಿದ್ದು, ಬೇಡಿಕೆ ಇದ್ದಲ್ಲಿ ಬಾರ್ಜ್ ಗಳ ಸಂಖ್ಯೆ ಹೆಚ್ಚಿಸುವುದಕ್ಕೆ ಅವಕಾಶಗಳಿವೆ ಎಂದು ಮೂಲಗಳು ತಿಳಿಸಿವೆ.
ಸರಕು ವಾಹನಗಳಿಗೆ ಕನಿಷ್ಠ ದರಗಳನ್ನು ವಿಧಿಸಲಾಗುವುದು, ನಿರಂತರವಾಗಿ ಹೋಗುವ ವಾಹನಗಳು ಹೆಚ್ಚಿರುವ ಕಾರಣ ಬಾರ್ಜ್ ಅನ್ನು ಲಾಭದಾಯಕವಾಗಿ ನಿರ್ವಹಣೆ ಮಾಡಿಕೊಂಡು ಹೋಗುವುದು ಸಾಧ್ಯ ಎನ್ನುವುದು ಇಲಾಖೆಯ ಲೆಕ್ಕಾಚಾರ. ಸದ್ಯ ಬಂದರು ಭಾಗದ ಅಗಲ ಕಿರಿದಾದ ಮಾರ್ಗಗಳಲ್ಲಿ ಸರಕು ಲಾರಿಗಳ ಸಂಚಾರ ಕಷ್ಟಕರವಾಗಿದೆ. ಬಾರ್ಜ್‌ನಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಕೂಳೂರು ವರೆಗೆ ಸಾಗಿ ದರೆ ಮುಂದೆ ಪ್ರಯಾಣ ಸರಾಗವಾಗಲಿದೆ.
ಒಳನಾಡು ಜಲಸಾರಿಗೆ ಇಲಾಖೆಯ ಸದ್ಯದ ಮಾಹಿತಿ ಪ್ರಕಾರ ಬಾರ್ಜ್ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೂ ಉದ್ದೇಶಿಸಲಾಗಿದೆ.
ಯೋಜನೆಗೆ ಮರು ಜೀವಭಾರತೀಯ ಒಳನಾಡು ಜಲಮಾರ್ಗ ಪ್ರಾಧಿಕಾರವು ರಾಜ್ಯದಲ್ಲಿ ಗುರುತಿಸಿರುವ 11 ವಾಟರ್‌ವೆàಗಳಲ್ಲಿ ಫಲ್ಗುಣಿ, ನೇತ್ರಾವತಿ ಸೇರಿದಂತೆ ಕಬಿನಿ, ಕಾಳಿ, ಶರಾವತಿ ನದಿಗಳನ್ನು ಸರಕು ಸಾಗಣೆಗಾಗಿ ಅಭಿವೃದ್ಧಿ ಪಡಿಸಲು 2016-17ನೇ ಸಾಲಿನಲ್ಲಿ “ಇನ್‌ಲ್ಯಾಂಡ್ ವಾಟರ್‌ವೆàಸ್ ಅಥಾರಿಟಿ ಆಫ್ ಇಂಡಿಯಾ’ (ಐಡಬ್ಲ್ಯುಎಐ)ವಿಸ್ತೃತ ಯೋಜನಾ ವರದಿ ಸಲ್ಲಿಸಿತ್ತು. ಆದರೆ ಸರಕು ಸಾಗಣೆಗೆ ಇವು ಅಷ್ಟಾಗಿ ಸೂಕ್ತವಲ್ಲ ಎಂಬ ವರದಿಯ ಹಿನ್ನೆಲೆ ಯಲ್ಲಿ ಯೋಜನೆಗೆ ಹಿನ್ನಡೆಯಾಗಿತ್ತು. ಈಗ ಮತ್ತೆ ಬಾರ್ಜ್ ಯೋಜನೆಗೆ ಜೀವ ಬಂದಿದೆ. ಇದು ಕಾರ್ಯರೂಪಕ್ಕೆ ಬಂದಾಗ ಈ ಪ್ರದೇಶದ ಮೊದಲ ಯೋಜನೆ ಇದಾಗಲಿದೆ. ನಗರದಲ್ಲಿ ಸರಕು ಸಾಗಣೆ ವಾಹನಗಳು, ಪ್ರಯಾಣಿಕರ ವಾಹನಕ್ಕೆ ಅವಕಾ ಶವಿದೆ. ಯೋಜನೆ ಟೆಂಡರ್ ಹಂತದಲ್ಲಿದೆ.
– ಕ್ಯಾ| ಸಿ. ಸ್ವಾಮಿ
ಬಂದರು ಮತ್ತು ಒಳನಾಡು ಜಲಸಾರಿಗೆ ನಿರ್ದೇಶಕರು
-ವೇಣುವಿನೋದ್ ಕೆ.ಎಸ್.