Advertisement
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇ. 88 ಮಂದಿ ಪ್ರಥಮ ಹಾಗೂ ಶೇ. 51 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಸರಕಾರದ ವಿವಿಧ ಇಲಾಖೆ, ಸಂಘ ಸಂಸ್ಥೆಗಳ ಸಹಕಾರದಿಂದ ಇದು ಸಾಧ್ಯವಾಗಿದೆ. ಲಸಿಕೆ ಪಡೆಯಲು ಹಿಂಜರಿಯುತ್ತಿದ್ದವರೂ ಕೂಡ ಈಗ ಪಡೆದುಕೊಳ್ಳುತ್ತಿದ್ದಾರೆ ಎಂದರು.
ಪ್ರಾಥಮಿಕ ಶಾಲೆಗಳ ಪುನರಾರಂಭ ಸಂದರ್ಭ ಜಿಲ್ಲಾಡಳಿತದಿಂದಲೇ ಶಾಲೆಗಳಿಗೆ ಸ್ಯಾನಿಟೈಸ್ ಒದಗಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಸುರಕ್ಷತೆಗಾಗಿ ಅಗತ್ಯ ಕ್ರಮ ಕೈಗೊಳ್ಳ ಲಾಗುವುದು ಎಂದರು. ಕಾನೂನು ರೀತಿಯಲ್ಲಿ ಮರಳುಗಾರಿಕೆ
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಜಿಲ್ಲೆಯಲ್ಲಿ ಮರಳುಗಾರಿಕೆ ನಡೆಸುವ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಸಚಿವರೊಂದಿಗೆ ಸಭೆ ನಡೆಸಲಾಗಿದೆ. ಈಗಾಗಲೇ ನ್ಯಾಯಾಲಯವು 32 ಮಂದಿಗೆ ಮರುಳುಗಾರಿಕೆಗೆ ಅನುಮತಿ ನೀಡಿದೆ ಎಂದರು.
Related Articles
Advertisement
ಅಹಿತಕರ ಘಟನೆ ತಡೆಯಲು ಕ್ರಮ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜಿಲ್ಲೆಯಲ್ಲಿ ಅಹಿತಕರ ಘಟನೆಗೆ ಯತ್ನಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಪೊಲೀಸರ ಕರ್ತವ್ಯ ನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಎಲ್ಲ ಇಲಾಖೆಗಳು ಕೂಡ ಉತ್ತಮ ರೀತಿಯಲ್ಲಿ ಆಡಳಿತ ನಡೆಸಲು ಮುಕ್ತ ಅಧಿಕಾರ ನೀಡಲಾಗಿದೆ ಎಂದು ತಿಳಿಸಿದರು. ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, “ಮುಡಾ’ ಅಧ್ಯಕ್ಷ ರವಿಶಂಕರ ಮಿಜಾರು, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಉಪಾಧ್ಯಕ್ಷ ಈಶ್ವರ ಕಟೀಲು, ಜಿಲ್ಲಾ ವಕ್ತಾರರಾದ ಜಗದೀಶ್ ಶೇಣವ, ರಾಧಾಕೃಷ್ಣ ಉಪಸ್ಥಿತರಿದ್ದರು. ಮೋದಿ ನಾಯಕತ್ವದಿಂದ ಯಶಸ್ವಿ ನಿರ್ವಹಣೆ
ಸುಳ್ಯ: ಮೋದಿ ನಾಯಕತ್ವದಿಂದ ದೇಶದಲ್ಲಿ ಕೋವಿಡ್ ಯಶಸ್ವಿ ನಿರ್ವಹಣೆಯಾಗಿದೆ. ಲಸಿಕೆ ಕೂಡ 100 ಕೋಟಿ ಗುರಿ ತಲುಪಿರುವುದು ಅದಕ್ಕೆ ಸಾಕ್ಷಿ ಎಂದು ಸಚಿವ ಎಸ್.ಅಂಗಾರ ಹೇಳಿದ್ದಾರೆ. ಈ ಸಾಧನೆಗೆ ಕಾರಣಕರ್ತರಾದ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು, ಸಿಬಂದಿ ಮತ್ತು ಇತರ ಇಲಾಖೆಯ ಅಧಿಕಾರಿಗಳನ್ನು ಸಚಿವರ ನೇತೃತ್ವದಲ್ಲಿ ತಾಲೂಕು ಆಸ್ಪತ್ರೆಯಲ್ಲಿ ಅವರು ಸಮ್ಮಾನಿಸಿದರು. ಲಸಿಕೆಗೆ ಆರಂಭದಲ್ಲಿ ಇದ್ದ ಎಲ್ಲ ತೊಂದರೆಗಳನ್ನು ಎದುರಿಸಿಕೊಂಡು ಈ ಗುರಿ ಸಾಧಿಸಲಾಗಿದೆ. ಅಪಹಾಸ್ಯ ಮಾಡಿದವರೂ ಕೂಡ ಇಂದು ಸಾಧನೆಯನ್ನು ಹೊಗಳುತ್ತಿದ್ದಾರೆ ಎಂದು ಹೇಳಿದರು.