Advertisement
ರಾಜ್ಯದಲ್ಲಿ ಈಗ ಬಿಜೆಪಿ ಸರಕಾರ ಇರುವುದರಿಂದ ಐವನ್ ಅವರ ಪುನರ್ ನಾಮ ನಿರ್ದೇಶನವಾಗಲಿ, ಅವರಿಂದ ತೆರವಾಗುವ ಸ್ಥಾನಕ್ಕೆ ಬೇರೊಬ್ಬ ಕಾಂಗ್ರೆಸಿಗರ ನಾಮ ನಿರ್ದೇಶನ ಕಷ್ಟಸಾಧ್ಯ. ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ಬಲ ಹೆಚ್ಚಿರುವುದರಿಂದ ಚುನಾವಣೆ ನಡೆಯುವ 11 ಸ್ಥಾನಗಳ ಪೈಕಿ ಕಾಂಗ್ರೆಸಿಗರಿಗೆ ಗೆಲ್ಲುವ ಅವಕಾಶ 2 ಸ್ಥಾನಕ್ಕೆ ಮಾತ್ರ. ಐವನ್ ಸ್ಥಾನಕ್ಕೆ ಬಿಜೆಪಿಯಿಂದ ನಾಮ ನಿರ್ದೇಶನ ಮಾಡುವ ಬಗ್ಗೆಯೂ ಚಿಂತನೆ ಆರಂಭವಾಗಿದೆ. ಮೋನಪ್ಪ ಭಂಡಾರಿ ಸಹಿತ 3-4 ಮಂದಿ ಆಕಾಂಕ್ಷಿಗಳ ಹೆಸರು ಬಿಜೆಪಿಯಿಂದಲೂ ಕೇಳಿ ಬರುತ್ತಿದೆ.
ಪರಿಷತ್ ಚುನಾವಣೆ ಸಂಬಂಧ ಬಿಜೆಪಿ ಹೈಕಮಾಂಡ್ ಮತ್ತು ಕೋರ್ ಕಮಿಟಿ ಚರ್ಚೆ ನಡೆಸಲಿದೆ. ಅದರಲ್ಲಿ ದ.ಕ ಜಿಲ್ಲೆಯ ಅವಕಾಶಗಳ ಬಗೆಗೂ ಪ್ರಸ್ತಾವವಾಗಲಿದೆ.
– ನಳಿನ್ ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ ಮರು ಆಯ್ಕೆ ಪಕ್ಷಕ್ಕೆ ಬಿಟ್ಟಿದ್ದು
ಕಳೆದ 6 ವರ್ಷಗಳಲ್ಲಿ ನಾನು ಸದನದಲ್ಲಿ ಜಿಲ್ಲೆಯ ಪರವಾಗಿ ವಿವಿಧ ರೀತಿಯಲ್ಲಿ ಹೋರಾಟ ನಡೆಸಿದ್ದೇನೆ. ನನಗೆ ಲಭಿಸಿದ ಅನುದಾನವನ್ನು ಜಿಲ್ಲೆಯ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಗೆ ವಿನಿಯೋಗಿಸಿದ್ದೇನೆ. ಸಿಎಂ ಪರಿಹಾರ ನಿಧಿಯಿಂದ ನೂರಾರು ಮಂದಿಗೆ ವೈದ್ಯಕೀಯ ಸೌಲಭ್ಯ ಪಡೆಯಲು ನೆರವಾಗಿದ್ದೇನೆ. ನನ್ನ ಮರು ಆಯ್ಕೆ ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ.
– ಐವನ್ ಡಿ’ಸೋಜಾ, ವಿಧಾನ ಪರಿಷತ್ ಸದಸ್ಯರು