Advertisement
ಉಡುಪಿ ಜಿಲ್ಲೆಯಲ್ಲಿ 6ರಿಂದ 14 ವರ್ಷದ 98, 14ರಿಂದ 16 ವರ್ಷದ 179 ಮಕ್ಕಳ ಸಹಿತ 277 ಮಕ್ಕಳು ಶಾಲಾ ಶಿಕ್ಷಣದಿಂದ ದೂರವಿದ್ದಾರೆ. ದ.ಕ. ಜಿಲ್ಲೆಯಲ್ಲಿ 6ರಿಂದ 14 ವರ್ಷದ 82, 14ರಿಂದ 16 ವರ್ಷದ 293 ಮಕ್ಕಳು ಸೇರಿ 375 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಉಡುಪಿ ಜಿಲ್ಲೆಯ 146 ಮತ್ತು ದ.ಕ.ದಲ್ಲಿ 159 ಮಕ್ಕಳನ್ನು ಶಿಕ್ಷಣದ ಮುಖ್ಯ ವಾಹಿನಿಗೆ ತರಲಾಗಿದೆ.
ಶಾಲಾ ಶಿಕ್ಷಣದಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯನ್ನು ಪ್ರತೀ ವರ್ಷವೂ ಶಾಲಾ ಹಂತದಲ್ಲಿ ಮಾಡಲಾಗುತ್ತದೆ. ಇದಕ್ಕಾಗಿ ಶಿಕ್ಷಣ ಸಂಯೋಜಕರನ್ನು ಹಾಜರಾತಿ ಪ್ರಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಪ್ರತೀ ತಿಂಗಳು ಜಿಲ್ಲಾ ಉಪನಿರ್ದೇಶಕರ ಹಂತದಲ್ಲಿ ಪರಿಶೀಲನೆಯೂ ನಡೆಯುತ್ತದೆ. ಸರಕಾರದಿಂದ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆದರೂ ಶಾಲಾ ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳನ್ನು ಪೂರ್ಣ ಪ್ರಮಾಣದಲ್ಲಿ ಪತ್ತೆ ಹಚ್ಚು ಸಾಧ್ಯವಾಗುತ್ತಿಲ್ಲ. ವಲಸಿಗ ಕುಟುಂಬದ ಸಮಸ್ಯೆ
ಶಾಲಾ ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳಲ್ಲಿ ಬಹುತೇಕರು ವಲಸೆ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಬೇರೆ ಜಿಲ್ಲೆಗಳಿಂದ ಕೂಲಿ ಕಾರ್ಮಿಕರಾಗಿ ಇಲ್ಲಿಗೆ ಬರುವ ಕುಟುಂಬದವರು ತಮ್ಮ ಜತೆಗೆ ಮಕ್ಕಳನ್ನು ಕರೆದುಕೊಂಡು ಬರುತ್ತಾರೆ. ಆದರೆ ಅವರಿಗೆ ಅಗತ್ಯವಿರುವ ಶಿಕ್ಷಣವನ್ನು ನೀಡುವುದಿಲ್ಲ. ಶಾಲೆಯ ಎಸ್‌ಎಟಿಎಸ್ ಸಂಖ್ಯೆಯಲ್ಲಿ ಯಾವ ಜಿಲ್ಲೆಯಿಂದ ಯಾವ ಜಿಲ್ಲೆಗೆ ವಿದ್ಯಾರ್ಥಿ ಹೋಗಿದ್ದಾನೆ ಎಂಬುದಷ್ಟೇ ತಿಳಿಯುತ್ತದೆ. ಆದರೆ ವಲಸೆ ಬಂದವರು ಇಲ್ಲಿ ಶಾಲೆಗೆ ಸೇರದೆ ಇದ್ದಾಗ ಶಾಲಾ ಶಿಕ್ಷಣದಿಂದ ಹೊರಗುಳಿದ ಮಕ್ಕಳಾಗಿ ಗುರುತಿಸಿಕೊಳ್ಳುತ್ತಾರೆ.