Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 237 ಮಂದಿಗೆ ಕೋವಿಡ್ ಪಾಸಿಟಿವ್‌

08:24 PM Jul 18, 2020 | sudhir |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ 237 ಮಂದಿಗೆ ಕೋವಿಡ್ ದೃಢಪಟ್ಟಿದೆ. ಇದೇ ವೇಳೆ ನಾಲ್ವರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

Advertisement

ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ಪುತ್ತೂರಿನ 74 ವರ್ಷದ ವೃದ್ಧೆ ಶುಕ್ರವಾರ ಹಾಗೂ ಮಂಗಳೂರಿನ 67 ವರ್ಷದ ವೃದ್ಧ, ಮಂಗಳೂರಿನ 49 ವರ್ಷದ ಮಹಿಳೆ, ಮಂಗಳೂರಿನ 61 ವರ್ಷದ ಮಹಿಳೆ ಶನಿವಾರ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 109 ಮಂದಿ ಕೋವಿಡ್ ಮುಕ್ತರಾಗಿ ಶನಿವಾರ ಬಿಡುಗಡೆಗೊಂಡಿದ್ದಾರೆ.

ಸೋಂಕಿತರ ಕುಟುಂಬಕ್ಕೆ ಮಾತ್ರೆ
ಮುಂದಿನ ದಿನಗಳಲ್ಲಿ ಯಾವುದೇ ಆರೋಗ್ಯ ಸಂಸ್ಥೆಯಲ್ಲಿ ಕೋವಿಡ್‌ ಸಂಶಯಾಸ್ಪದ ವ್ಯಕ್ತಿಯ ಗಂಟಲು ದ್ರವ ಮಾದರಿಯನ್ನು ತೆಗೆದ ಸಂದರ್ಭ ಅಂತಹ ವ್ಯಕ್ತಿ ಹಾಗೂ ಆತನ ಮನೆಯಲ್ಲಿರುವ ಇತರರಿಗೆ ಪರೀಕ್ಷೆ ವರದಿ ಪ್ರಕಟವಾಗುವ ತನಕ ವಿಟಮಿನ್‌ 500 ಎಂಜಿ ಮಾತ್ರೆಗಳು ಬೆಳಗ್ಗೆ, ರಾತ್ರಿ ತಲಾ ಒಂದರಂತೆ ಹಾಗೂ ಝಿಂಕ್‌ 50ಎಂಜಿ ಮಾತ್ರೆ ಮಧ್ಯಾಹ್ನ 1ರಂತೆ ತೆಗೆದುಕೊಳ್ಳಲು ಸೂಚಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿಯವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next