Advertisement

ದ.ಕ.: 162 ಮಂದಿಗೆ ಕೋವಿಡ್ ದೃಢ ಐವರ ಸಾವು; ಸಾವಿನ ಸಂಖ್ಯೆ 76ಕ್ಕೇರಿಕೆ; 69 ಮಂದಿ ಬಿಡುಗಡೆ

12:39 PM Jul 23, 2020 | mahesh |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ 162 ಮಂದಿಗೆ ಕೋವಿಡ್ ದೃಢಪಟ್ಟಿದೆ. ಇದೇ ವೇಳೆ ಸೋಮವಾರ ಮತ್ತು ಮಂಗಳವಾರ ಮೃತಪಟ್ಟ ಐವರಿಗೆ ಕೊರೊನಾ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಮೃತರ ಸಂಖ್ಯೆ 76ಕ್ಕೇರಿದೆ.

Advertisement

ಕೋವಿಡ್ ದೃಢಪಟ್ಟವರಲ್ಲಿ 13 ಮಂದಿಗೆ ಸೋಂಕಿತರ ಪ್ರಾಥಮಿಕ ಸಂಪರ್ಕ ದಿಂದ, 70 ಮಂದಿಗೆ ಇನ್‌ಫ್ಲೂಯೆನಾl ಲೈಕ್‌ ಇಲ್‌ನೆಸ್‌, 18 ಮಂದಿಗೆ ತೀವ್ರ ಉಸಿರಾಟದ ತೊಂದರೆಯಿಂದ, ಓರ್ವರಿಗೆ ಅಂತಾರಾಷ್ಟ್ರೀಯ ಪ್ರಯಾಣದ ಹಿನ್ನೆಲೆಯಿಂದ ಸೋಂಕು ದೃಢಪಟ್ಟಿದೆ. 60 ಮಂದಿಯ ಸಂಪರ್ಕ ಪತ್ತೆ ಹಚ್ಚ ಲಾಗುತ್ತಿದೆ. 69 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಮೃತಪಟ್ಟ ಐವರಿಗೆ ಕೋವಿಡ್ ದೃಢ
ಮಂಗಳೂರು ನಿವಾಸಿ 60 ವರ್ಷದ ಮಹಿಳೆ ಜು. 18ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಜು. 21ರಂದು ಮೃತ ಪಟ್ಟಿದ್ದರು. ಅವರು ಹೈಪರ್‌ಟೆನ್ಶನ್‌, ತೀವ್ರ ಉಸಿರಾಟದ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿದ್ದರು. ಪುತ್ತೂರಿನ 70 ವರ್ಷದ ಮಹಿಳೆ ಜು. 8ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, 21ರಂದು ಮೃತಪಟ್ಟಿದ್ದರು. ಅವರು ಹೃದಯ ಸಂಬಂಧಿ ಕಾಯಿಲೆ, ಹೆಪಟೈಟಿಸ್‌-ಬಿ ಮತ್ತಿತರ ಕಾಯಿಲೆಗಳಿಂದ ಬಳಲು ತ್ತಿದ್ದರು. ಮಂಗಳೂರಿನ 75 ವರ್ಷದ ವೃದ್ಧೆ ಜು.19ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ 21ರಂದು ಮೃತಪಟ್ಟಿದ್ದರು. ಅವರು ಅಕ್ಯೂಟ್‌ ಕೊರೊನರಿ ಸಿಂಡ್ರೋಮ್‌, ಕಿಡ್ನಿ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು. ದಾವಣಗೆರೆ ಮೂಲದ 54 ವರ್ಷದ ವ್ಯಕ್ತಿ ಜೂ. 14ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಜು. 21ರಂದು ಮೃತ ಪಟ್ಟಿದ್ದರು. ಅವರು ಹೃದಯ ಸಂಬಂಧಿ ಕಾಯಿಲೆ, ಹೈಪರ್ಲಾಲೇಮಿಯಾ, ಕಿಡ್ನಿ ಸಂಬಂಧಿ ಕಾಯಿಲೆ, ತೀವ್ರ ಉಸಿರಾಟದ ಕಾಯಿಲೆ ಗಳಿಂದ ಬಳಲುತ್ತಿದ್ದರು. ಮಂಗಳೂರಿನ 66 ವರ್ಷದ ಮಹಿಳೆ ಜು. 19ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಜು. 20ರಂದು ಮೃತಪಟ್ಟಿದ್ದರು. ಅವರು , ಸೆಪ್ಟಿಕ್‌ ಶಾಕ್‌, ಬ್ಯಾಕ್ಟೀರಿಯಲ್‌ ಇನ್‌ಫೆಕ್ಷನ್‌ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿದ್ದರು. ಮೃತಪಟ್ಟ ಐವರ ಗಂಟಲು ದ್ರವ ಮಾದರಿಯ ಪರೀಕ್ಷಾ ವರದಿ ಬುಧವಾರ ಆರೋಗ್ಯ ಇಲಾಖೆಯ ಕೈ ಸೇರಿದ್ದು, ಐವರಿಗೂ ಸೋಂಕು ಇರುವುದು ದೃಢಪಟ್ಟಿದೆ. ಆದರೆ ಮರಣದ ಕಾರಣ ನಿರ್ಧರಿಸಲು ಜಿಲ್ಲಾ ಮಟ್ಟದ ತಜ್ಞರ ಸಮಿತಿಯಿಂದ ವರದಿ ಸ್ವೀಕೃತವಾಗಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.

ವೆನ್ಲಾಕ್‌ನಲ್ಲಿ ಪಾಸಿಟಿವ್‌, ಖಾಸಗಿಯಲ್ಲಿ ನೆಗೆಟಿವ್‌!
ಮಂಗಳೂರು: ತೀವ್ರ ತಲೆನೋವಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿಯೋರ್ವರಿಗೆ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪಾಸಿಟಿವ್‌ ಹಾಗೂ ಎರಡು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ನೆಗೆಟಿವ್‌ ಬಂದ ಘಟನೆ ವರದಿಯಾಗಿದೆ.

ತಲೆನೋವಿನ ಹಿನ್ನೆಲೆಯಲ್ಲಿ ಗಂಜಿಮಠದ ವ್ಯಕ್ತಿಯೋರ್ವರು ಕಳೆದ ಗುರುವಾರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಗಂಟಲ ದ್ರವ ಮಾದರಿಯನ್ನು ವೆನ್ಲಾಕ್‌ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದ್ದು ಪಾಸಿಟಿವ್‌ ವರದಿ ಬಂದಿತ್ತು. ಆದರೆ ತಲೆನೋವು ಕಡಿಮೆಯಾಗಿದ್ದಲ್ಲದೆ ಕೊರೊನಾದ ಇತರ ಯಾವುದೇ ಲಕ್ಷಣಗಳು ಇರದಿದ್ದ ಕಾರಣ ಆ ವ್ಯಕ್ತಿ ಗಂಟಲ ದ್ರವ ಮಾದರಿಯನ್ನು ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ನೆಗೆಟಿವ್‌ ಬಂದಿದೆ. ಇದನ್ನು ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಅಲ್ಲಿಯೂ ನೆಗೆಟಿವ್‌ ವರದಿ ಬಂದಿದೆ.
ವೆನಾÉಕ್‌ನಲ್ಲಿ ಪರೀಕ್ಷಿಸಿದಾಗ ಪಾಸಿಟಿವ್‌ ಬರುತ್ತಿದ್ದಂತೆಯೇ ವ್ಯಕ್ತಿಯ ಮನೆಯನ್ನು ಸೀಲ್‌ಡೌನ್‌ ಮಾಡಲಾಗಿತ್ತು. ಇದೀಗ ನೆಗೆಟಿವ್‌ ಬಂದಿರುವ ಬಗ್ಗೆ ಆರೋಗ್ಯ ಇಲಾಖೆ ಸಹಿತ ಸಂಬಂಧಪಟ್ಟ ಎಲ್ಲರಿಗೂ ಮಾಹಿತಿ ನೀಡಲಾಗಿ ದ್ದರೂ ಇನ್ನೂ ಸೀಲ್‌ಡೌನ್‌ ತೆರವು ಮಾಡಿಲ್ಲ ಎನ್ನಲಾಗಿದೆ.

Advertisement

ವೆನ್ಲಾಕ್‌ ಆಸ್ಪತ್ರೆಯ ಕೋವಿಡ್‌ ಟೆಸ್ಟ್‌ ಲ್ಯಾಬ್‌ನಲ್ಲಿ ಪರೀಕ್ಷೆಗೆ ಸಂಬಂಧಿಸಿ ಯಾವುದೇ ಅನುಮಾನ ಅಗತ್ಯವಿಲ್ಲ. ಈ ಲ್ಯಾಬ್‌ ಸರಿಯಾಗಿಯೇ ಕಾರ್ಯ ನಿರ್ವಹಿಸುತ್ತಿದೆ. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷಿಸುವಾಗ ವ್ಯಕ್ತಿಯಲ್ಲಿ ವೈರಲ್‌ ಲೋಡಿಂಗ್‌ ಕಡಿಮೆ ಇದ್ದಿರಬಹುದು. ಹಾಗಾಗಿ ನೆಗೆಟಿವ್‌ ಬಂದಿರುವ ಸಾಧ್ಯತೆಯಿದೆ. ಆದರೂ ಕೊನೆಯ ಪರೀಕ್ಷೆಯಲ್ಲಿ ಬಂದ ವರದಿಯನ್ನೇ ನಾವು ಪರಿಗಣಿಸುತ್ತೇವೆ.
-ಡಾ| ರತ್ನಾಕರ್‌, ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next