Advertisement

ದಕ್ಷಿಣ ಕನ್ನಡ: ಡೆಂಗ್ಯೂ ಇಳಿಕೆ

01:33 AM Aug 01, 2019 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ಪ್ರಕರಣ ಇಳಿಕೆಯಾಗುತ್ತಿದ್ದು, ಸದ್ಯ ಯಾರೂ ಆಸ್ಪತ್ರೆಗಳಲ್ಲಿ ದಾಖಲಾಗಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಡೆಂಗ್ಯೂ ಸೊಳ್ಳೆ ಉತ್ಪತ್ತಿಗೆ ಪೂರಕವಾದ ತಾಣಗಳ ಪರಿಶೀಲನಾ ಕಾರ್ಯ ಮುಂದುವರಿದಿದ್ದು, ಬುಧವಾರ 20 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ.

Advertisement

ಎಚ್ಚರ ವಹಿಸಲು ದೇವಸ್ಥಾನಗಳಿಗೆ ಸೂಚನೆ
ಹಿಂದೂ ಧಾರ್ಮಿಕ ಸಂಸ್ಥೆಗಳ ಅಧೀನಕೊಳಪಟ್ಟ ದೇವಸ್ಥಾನಗಳಲ್ಲೂ ಸ್ವತ್ಛತೆ ಕಾಪಾಡುವಂತೆ ಇಲಾಖೆ ತಿಳಿಸಿದೆ. ದಿನನಿತ್ಯ ಮತ್ತು ವಿಶೇಷ ಸಂದರ್ಭ ನಡೆಯುವ ಸೀಯಾಳ ಸಹಿತ ವಿವಿಧ ರೀತಿಯ ಅಭಿಷೇಕ ಸಂದರ್ಭ ಸೀಯಾಳದ ನೀರು ಸರಿಯಾಗಿ ಹರಿದು ಹೋಗುವಂತೆ ಹಾಗೂ ದೇವಸ್ಥಾನದಲ್ಲಿ ಉಪಯೋಗಿಸುವ ತಟ್ಟೆ-ಲೋಟಗಳು ಹಾಗೂ ಇನ್ನಿತರ ಸಾಮಗ್ರಿಗಳನ್ನು ಆಡಳಿತದಾರರು ಪರಿಶೀಲನೆ ನಡೆಸಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಸೊಳ್ಳೆಗಳ ಸಂತಾನೋತ್ಪತ್ತಿಗೆ ಪೂರಕವಾಗುವ ನೀರು ನಿಲ್ಲುವ ಪ್ರದೇಶಗಳನ್ನು ದೇವಸ್ಥಾನದ ಹಿಂಭಾಗ, ಮುಂಭಾಗಗಳಲ್ಲಿ ಪರಿಶೀಲಿಸಿ ಕೂಡಲೇ ನಿವಾರಿಸಬೇಕು.

ನಿರ್ಲಕ್ಷ್ಯದಿಂದಾಗಿ ಲಾರ್ವಾ ಉತ್ಪತ್ತಿಯಾಗಿರುವುದು ಕಂಡುಬಂದಲ್ಲಿ ಕಾರಣರಾದ ದೇವಾಲಯದ ಆಡಳಿತದಾರರ, ಕಾರ್ಯನಿರ್ವಹಣಾಧಿಕಾರಿಯವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next