Advertisement

ಕೃಷಿಯೊಂದಿಗೆ ಹೈನುಗಾರಿಕೆ ಮಾಡಿ: ಶಶಿಕಲಾ

07:55 PM Sep 26, 2020 | Suhan S |

ಚಿತ್ರದುರ್ಗ: ರೈತರು ಕೃಷಿಯ ಜತೆಗೆ ಉಪಕಸುಬಾಗಿ ಹೈನುಗಾರಿಕೆಯಂತಹ ಮಾಡಿದರೆ ಹೆಚ್ಚುಲಾಭವಾಗುತ್ತದೆ ಎಂದು ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶಬಾಬು ಸಲಹೆ ನೀಡಿದರು.

Advertisement

ಜಿಪಂ ಮಿನಿ ಸಭಾಂಗಣದಲ್ಲಿ ನಡೆದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಸೌಲಭ್ಯಗಳ ಕುರಿತು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷಿ ಕೆಲಸದ ಜತೆಗೆ ಹೈನುಗಾರಿಕೆ, ಕುರಿ ಕೋಳಿ ಸಾಗಾಣಿಕೆ ಮತ್ತಿತರ ಉಪಕಸುಬು ಅನುಸರಿಸಬೇಕು. ಇದರಿಂದ ಕುಟುಂಬಕ್ಕೆ ಮತ್ತಷ್ಟು ಆರ್ಥಿಕ ಲಾಭ ಸಿಗುವುದರಿಂದ ಉತ್ತಮ ಬದುಕು ಕಟ್ಟಿಕೊಳ್ಳಬಹುದು. ಒಂದು ವೇಳೆ ಒಂದು ಬೆಳೆಯಲ್ಲಿ ನಷ್ಟ ಅನುಭವಿಸಿದರೆ ಮತ್ತೂಂದರಲ್ಲಿ ಲಾಭ ಸಿಗುತ್ತದೆ ಎಂದು ತಿಳಿಸಿದರು.

ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ.ಕೃಷ್ಣಪ್ಪ ಮಾತನಾಡಿ, ರೈತರು ಕೃಷಿ ಜತೆಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ ಮಾಡಬೇಕು. ಇತ್ತೀಚೆಗೆ ಕುರಿ ಸಾಗಾಣಿಕೆ ಉಪ ಕಸುಬಿಗಿಂತ ಉದ್ಯಮವಾಗಿ ಬದಲಾಗುತ್ತಿರುವುನ್ನು ಗಮನಿಸಬಹುದು ಎಂದರು.

ಕೋವಿಡ್‌-19 ಬಂದಂಹ ಸಂದರ್ಭದಲ್ಲಿ ವಲಸೆ ಹೋದವರು ಮತ್ತೆ ತಮ್ಮ ತಮ್ಮ ಗ್ರಾಮಗಳಿಗೆ ಆಗಮಿಸಿ ಸಾಕಷ್ಟು ಜನರು ಹೈನುಗಾರಿಕೆಯಲ್ಲಿ ತೊಡಗಿರುವುದನ್ನು ಕಾಣಬಹುದಾಗಿದೆ. ಇದು ನಿರುದ್ಯೋಗ ಸಮಸ್ಯೆಗೆ ಪರ್ಯಾಯವಾಗಿದೆ ಎಂದು ಹೇಳಿದರು.

ಭಾರತ ಹಾಲು ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸಿನಂತೆ ಒಬ್ಬ ಮನುಷ್ಯ ಆರೋಗ್ಯವಾಗಿರಲು ದಿನಕ್ಕೆ 300 ಗ್ರಾಂ ನಷ್ಟು ಹಾಲು, ವರ್ಷಕ್ಕೆ 11 ಕೆಜಿ ಮಾಂಸ, 190 ಮೊಟ್ಟೆ ಸೇವನೆ ಮಾಡಬೇಕು ಎಂದು ಹೇಳಿದೆ ಎಂದರು.

Advertisement

ಜಿಲ್ಲೆಯಲ್ಲಿ ಒಟ್ಟು 2,15,566 ಜಾನುವಾರುಗಳಿದ್ದು, ಇದರಲ್ಲಿ 3.39 ಲಕ್ಷ ದನ, ಎಮ್ಮೆಗಳಿವೆ. 17.5 ಲಕ್ಷ ಕುರಿ, ಮೇಕೆಗಳಿವೆ. 20,70,000 ಕೋಳಿಗಳಿದ್ದು, ಇವುಗಳ ಆರೋಗ್ಯ ಸಂರಕ್ಷಣೆಗೆ ರೋಗಗಳ ನಿಯಂತ್ರಣಕ್ಕೆ ಇಲಾಖೆಯು ಜಿಲ್ಲೆಯಾದ್ಯಂತ ಪಶುಚಿಕಿತ್ಸಾ ಕೇಂದ್ರಗಳು, ಪಶು ಆಸ್ಪತ್ರೆ, ಪಶು ಚಿಕಿತ್ಸಾಲಯಗಳು, ಜಿಲ್ಲಾ ಮಟ್ಟದಲ್ಲಿ ಸಂಚಾರಿ ಪಶು ಚಿಕಿತ್ಸಾಲಯಗಳು, ಪಾಲಿ ಕ್ಲಿನಿಕ್‌ನಲ್ಲಿ ತಜ್ಞ ವೈದ್ಯರು ಇಲಾಖೆಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.

2020-21ನೇ ಸಾಲಿನಲ್ಲಿ ಏಪ್ರಿಲ್‌ನಿಂದ ಈವರೆಗೆ ಗಳಲೆ ರೋಗದ ವಿರುದ್ಧ 2.8 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಿದ್ದೇವೆ. ಚಪ್ಪೆ ರೋಗದ ವಿರುದ್ಧ ದನಗಳಿಗೆ 46 ಸಾವಿರ ಜಾನುವಾರುಗಳಿಗೆ, ಕುರಿಸಿಡುಬು ವಿರುದ್ಧ 48,919 ಕುರಿಗಳಿಗೆ ಲಸಿಕೆ, ಪಿಪಿಆರ್‌ ವಿರುದ್ಧ 7.29 ಲಕ್ಷ ಕುರಿ ಮತ್ತು ಮೇಕೆಗೆ ಲಸಿಕೆ ಹಾಕಲಾಗಿದೆ ಎಂದು ಮಾಹಿತಿ ನೀಡಿದರು. ಪಶುಪಾಲನಾ ಇಲಾಖೆ ಹಾಗೂ ಜಿಪಂ ಅಧಿಕಾರಿ,ಸಿಬ್ಬಂದಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next