Advertisement

ಬೋಗಸ್‌ ಡೈರಿ ಹಿಡಿದು ಅಪಪ್ರಚಾರ

12:53 PM Mar 05, 2017 | Team Udayavani |

ದಾವಣಗೆರೆ: ಈ ಹಿಂದೆ ತಾವು ಮುಖ್ಯಮಂತ್ರಿ ಆಗಿದ್ದಾಗ ಎಷ್ಟು ಕೋಟಿ ಹೊಡೆದೆ ಎಂಬುದನ್ನು ಹೇಳದ ಬಿ.ಎಸ್‌. ಯಡಿಯೂರಪ್ಪ, ಯಾವುದೋ ಡೈರಿ ಬಗ್ಗೆ ಹೇಳಿಕೊಂಡು ಕಾಂಗ್ರೆಸ್‌ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಶಾಸಕ ಶಾಮನೂರುಶಿವಶಂಕರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Advertisement

ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಶನಿವಾರ ರಾಜ್ಯ ಸರ್ಕಾರದ ದೆಹಲಿ ಹೆಚ್ಚುವರಿ ಪ್ರತಿನಿಧಿ ಸಲೀಂ ಅಹಮದ್‌ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ಬಿ.ಎಸ್‌ .ಯಡಿಯೂರಪ್ಪನವರಿಗೆ ಆದಷ್ಟು ಬೇಗ ಹಣ ಮಾಡಬೇಕಿದೆ. ಅದಕ್ಕಾಗಿ ಅವರು ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ. 

ಇದು ಸಾಧ್ಯವಾಗದ ಮಾತು ಎಂದರು. ಬಿಜೆಪಿಯವರಿಗೆ ರಾಜ್ಯದ ಅಭಿವೃದ್ಧಿ ಬೇಕಾಗಿಲ್ಲ. ಅದಕ್ಕಾಗಿಯೇ ಸ್ಟೀಲ್‌ ಬ್ರಿಡ್ಜ್ ನಿರ್ಮಾಣ ವಿರೋಧಿಸಿದರು. ಆ ಪಕ್ಷದವರ ನಡವಳಿಕೆ ದಾವಣಗೆರೆ ಜಿಲ್ಲೆಯಲ್ಲೂ ಭಿನ್ನವಾಗಿಲ್ಲ. ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದರೂ ಪ್ರತಿಭಟನೆ ನಡೆಸುತ್ತಾರೆ.

ಅಲ್ಲದೆ, ರೈಲ್ವೆ ಮೇಲ್ಸೇತುವೆ ನಿರ್ಮಾಣದ ಪ್ಲಾನ್‌ ಅವೈಜ್ಞಾನಿಕವಾಗಿರುವುದರಿಂದ ಆ ಕಾರ್ಯ ವಿಳಂಬವಾಗಿದೆ. ಆದರೆ, ವಿಪಕ್ಷದವರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹೇಳಿದ್ದಾರೆ. ಬೇಕಿದ್ದಲ್ಲಿ ಅವರು ಸೇತುವೆ ನಿರ್ಮಾಣ ಆಗುವ ತಕನ ಉಪವಾಸ ಕೂರಲಿ ಎಂದರು.  ಈ ಹಿಂದೆ ಬಿಜೆಪಿಯವರು ಕೂಡ ಅಧಿಕಾರ ನಡೆಸಿದ್ದಾರೆ.

ಅವರ ಅವಧಿಯಲ್ಲಿ ಏನೇನು ಅಭಿವೃದ್ಧಿ ನಡೆದಿದೆ ಎಂಬುದು ಜನರಿಗೆ ಗೊತ್ತಿದೆ. ಹಾಗೆಯೇ ನಮ್ಮ ಅವಧಿಯಲ್ಲಿ ಯಾವ್ಯಾವ ಕಾಮಗಾರಿ ಪ್ರಗತಿಯಲ್ಲಿವೆ ಎಂಬುದನ್ನೂ ಜನ ಗಮನಿಸಿದ್ದಾರೆ. ಶಕ್ತಿ ಇದ್ದರೆ ಚುನಾವಣೆಯಲ್ಲಿ ಪ್ರದರ್ಶಿಸಲಿ. ಸುಮ್ಮನೆ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಒಳ್ಳೆಯ ಕೆಲಸ ಮಾಡಿ ವಿಶ್ವಾಸ ಗಳಿಸಬೇಕು.

Advertisement

ಪೇಪರ್‌ನಲ್ಲಿ ಹೇಳಿಕೆ ಕೊಡುವ ಮೂಲಕ ಯಾರೂ ದೊಡ್ಡವರಾಗುವುದಿಲ್ಲ ಎಂದು ಯಾರ ಹೆಸರೂ ಪ್ರಸ್ತಾಪಿಸದೇ ಶಾಮನೂರು ಶಿವಶಂಕರಪ್ಪ ತರಾಟೆ ತೆಗೆದುಕೊಂಡರು. ಈ ಹಿಂದೆ ಬಿಹಾರ ಚುನಾವಣೆ ಫಲಿತಾಂಶದಿಂದ ಬಿಜೆಪಿಯವರು ಬುದ್ಧಿ ಕಲಿತಂತೆ ಕಾಣುತ್ತಿಲ್ಲ.

ಇದೀಗ ಉತ್ತರ ಪ್ರದೇಶ, ಗೋವಾ ಸೇರಿದಂತೆ ಪಂಚ ರಾಜ್ಯಗಳ ಚುನಾವಣೆ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹುಚ್ಚರಂತೆ ಮಾತನಾಡುತ್ತಿದ್ದಾರೆ. ಈ ರಾಜ್ಯಗಳ ಚುನಾವಣಾ ಫಲಿತಾಂಶ ಹೊರ ಬಿದ್ದ ಮೇಲೆ ಬಿಜೆಪಿಯವರು ಮನೆ ಸೇರಲಿದ್ದಾರೆ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next