Advertisement

ಕುಗ್ರಾಮದ ಹೈನುಗಾರರ ಬದುಕು ಹಸನಾಗಿಸಿದ ಸಂಸ್ಥೆ

11:21 PM Feb 19, 2020 | Sriram |

ಕುಗ್ರಾಮದ ಜನರಲ್ಲೂ ಹೈನುಗಾರಿಕೆ ಮೂಲಕ ಸುಸ್ಥಿರ ಅಭಿವೃದ್ಧಿ ಕುರಿತಾಗಿ ಹೊಸ ಆಶಾವಾದವನ್ನು ಸೃಷ್ಟಿಸಿದ್ದು ಜಡ್ಕಲ್‌ ಹಾಲು ಉತ್ಪಾದಕರ ಸಹಕಾರಿ ಸಂಘ. ಹೈನುಗಾರಿಕೆಗೆ ಬೆಂಬೆಲ ಮೂಲಕ ಸ್ಥಳೀಯವಾಗಿ ದೊಡ್ಡ ಮಟ್ಟದ ಬದಲಾವಣೆಯನ್ನೇ ಈ ಸಂಘ ಮಾಡಿದೆ.

Advertisement

ಜಡ್ಕಲ್‌: ಕುಗ್ರಾಮವೆಂದು ಗುರುತಿಸಲ್ಪಟ್ಟಿದ್ದ ಪ್ರದೇಶವೊಂದರಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘ ಹೈನುಗಾರಿಕೆಗೆ ನೀಡಿದ ಪ್ರೋತ್ಸಾಹ, ಸ್ಥಳೀಯ ಆರ್ಥಿಕತೆಗೆ ನೀಡಿದ ಉತ್ತೇಜನದಿಂದಾಗಿ ಹೈನುಗಾರಿಕೆಯಿಂದ ಜನರು ಜೀವನ ಕಟ್ಟಿಕೊಳ್ಳುವಂತಾಗಿದೆ. ಇಂತಹ ಯಶೋಗಾಥೆಯೊಂದಕ್ಕೆ ಸಾಕ್ಷಿಯಾಗಿದ್ದು ಜಡ್ಕಲ್‌ ಹಾಲು ಉತ್ಪಾದಕರ ಸಹಕಾರಿ ಸಂಘ.

ಪ್ರೇರಣೆ
ಇಲ್ಲಿನ ಸೈಂಟ್‌ ಜಾರ್ಜ್‌ ಚರ್ಚಿನ ಧರ್ಮಗುರುಗಳಾದ ಫಾ|ಥೋಮಸ್‌ ಅವರು ಹಾಲು ಉತ್ಪಾದಕರ ಸಹಕಾರಿ ಸಂಘದ ಸ್ಥಾಪನೆಯ ಮುಖ್ಯ ರೂವಾರಿ. ಒಂದು ಸಂಘದ ಸ್ಥಾಪನೆಗೆ ಬಹಳಷ್ಟು ಶ್ರಮಿಸಿ ಅಲ್ಲಿನ ಜನರನ್ನು ಸಂಘಟಿಸಿ ಸಂಸ್ಥೆಯ ಅಭಿವೃದ್ಧಿಗಾಗಿ ಶ್ರಮಿಸಿದ್ದರು. ಜತೆಗೆ ಇಲ್ಲಿನ ಚರ್ಚ್‌ನಲ್ಲಿ ಸಂಘ ಸ್ಥಾಪನೆಗೆ ಉಚಿತ ಕೊಠಡಿಯನ್ನೂ ನೀಡಲಾಗಿತ್ತು.

1987ರಲ್ಲಿ ಆರಂಭ
1987ರಲ್ಲಿ ಆರಂಭಗೊಂಡಿದ್ದ ಹಾಲು ಉತ್ಪಾದಕರ ಸಂಘವು ಈದೀಗ 33 ವರುಷಗಳ ಅಂತರದಲ್ಲಿ ಬೃಹತ್‌ ಆಗಿ ಬೆಳೆದಿದೆ. ಬೀಸಿನಪಾರೆ, ಕಾನಿR ಹಾಗೂ ಹಾಲ್ಕಲ್‌ ನಲ್ಲಿ ಪ್ರತ್ಯೇಕ 3 ಶಾಖೆ ತೆರೆಯಲಾಗಿದೆ. 5 ವರ್ಷಗಳ ಹಿಂದೆ ಇಲ್ಲಿ 3 ಸಾವಿರ ಲೀ. ಸಾಮರ್ಥ್ಯದ ಶೀತಲೀಕರಣ ಘಟಕವನ್ನು ಅಳವಡಿಸಲಾಗಿದೆ.

ಸದಸ್ಯರ ಸಂಖ್ಯಾ ಬಲ
ಆರಂಭದ ಹಂತದಲ್ಲಿ ಕೇವಲ 20-30 ಸದಸ್ಯರನ್ನು ಹೊಂದಿದ್ದ ಹಾಲು ಉತ್ಪಾದಕರ ಸಂಘವು ಈದೀಗ 569 ಸದಸ್ಯರನ್ನು ಹೊಂದಿದೆ. ಹೈನುಗಾರರಿಗೆ ಪ್ರೇರಣೆಯಾಗುವ ಹಲವು ಕಾರ್ಯಕ್ರಮಗಳನ್ನೂ ಸಂಘವು ಸಂಘಟಿಸುತ್ತದೆ. ಸದಸ್ಯರಿಗೆ ಪ್ರೋತ್ಸಾಹ ಅತಿ ಹೆಚ್ಚು ಹಾಲು ನೀಡುವವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಎಂದು ಪ್ರೋತ್ಸಾಹ ಧನ, ಸಮ್ಮಾನ ಕಾರ್ಯಕ್ರಮ, ಸಂಘದ ವ್ಯಾಪ್ತಿಯಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಚಿಕಿತ್ಸೆಗಾಗಿ ಆರ್ಥಿಕ ಸಹಕಾರ ನೀಡಲಾಗಿದೆ.

Advertisement

ಅತ್ಯಧಿಕ 2200 ಲೀ. ಸಂಗ್ರಹ
ಸಂಘ ಆರಂಭದ ಕಾಲದಲ್ಲಿ ಕೇವಲ 50 ಲೀ. ಹಾಲು ಸಂಗ್ರಹವಾಗುತ್ತಿತ್ತು. ಅನಂತರ 1650 ಲೀ. ಸಂಗ್ರಹವಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ 2200 ಲೀ. ಹಾಲು ಸಂಗ್ರಹವಾಗುತ್ತಿದೆ.

ಮಿಶ್ರ ತಳಿ ಜಾನವರು ಸಾಕಣೆಗೆ ಪ್ರೇರಣೆ, ಬಂಜೆತನ ನಿವಾರಣೆ ಶಿಬಿರ, ಕಾಲು ಬಾಯಿ ರೋಗ ನೀರೋಧಕ ಚುಚ್ಚುಮದ್ದು ನೀಡಿಕೆ, ಕೃತಕ ಗರ್ಭಧಾರಣೆ, ಜಾನುವರು ಸಾಕಣೆ ಮಾಹಿತಿ ಶಿಬಿರಗಳು, ಜಾನುವಾರು ಪ್ರದರ್ಶನ, ಹಸಿರು ಹುಲ್ಲಿನ ಮಾಹಿತಿ, ಶುದ್ಧ ಹಾಲಿನ ಉತ್ಪಾದನೆ ಮಾಹಿತಿ ಸದಸ್ಯರಿಗೆ ನೀಡಲಾಗುತ್ತಿದೆ.

ಜಡ್ಕಲ್‌ ಹಾಲು ಉತ್ಪಾದಕರ ಸಹಕಾರಿ ಸಂಘ ಆರಂಭಿಸುವ ಹಂತದಲ್ಲಿ ಬಹಳಷ್ಟು ಮಂದಿ ಶ್ರಮಿಸಿದ್ದಾರೆ. ಅಂದಿನ ಆ ಕಾಲಘಟ್ಟದಲ್ಲಿ ಕುಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘ ಆರಂಭಿಸಿ ಹೈನು ಗಾರಿಕೆಗೆ ಪೋ›ತ್ಸಾಹ ನೀಡಿದ ಹಿನ್ನಲೆಯಲ್ಲಿ ಇಂದು ಅವರ ಶ್ರಮದ ಪರಿಣಾಮ ಇಂದು ಈ ಭಾಗದ ಹೈನುಗಾರರ ಬದುಕಿಗೆ ಹೊಸ ಚೈತನ್ಯ ತುಂಬಿದೆ.
-ಸತ್ಯನಾರಾಯಣ ಅಡಿಗ,
ಹಾಲಿ ಅಧ್ಯಕ್ಷರು

ಹೈನುಗಾರಿಕೆ
ಬಗ್ಗೆ ಹೇಳುವು ದೆಂದರೆ ಗ್ರಾಮೀಣ ಆರ್ಥಿಕತೆಯ ಪ್ರಮುಖ ಚಕ್ರ. ಈ ದಿಸೆಯಲ್ಲೇ ನಮ್ಮ ಕ್ಷೀರಕಥನ.

ಅಧ್ಯಕ್ಷರು:
ಬಾಬು ಕುರಿಯನ್‌, ಅಗಸ್ಟಿನ್‌, ಲೀಲಮ್ಮ ಜಾರ್ಜ್‌, ಕೆ.ಜೆ.ಕುರಿಯ ಕೋಸ್‌, ಕೆ.ಕೆ.ಕುರಿಯ ಕೋಸ್‌, ಜೇಕಬ್‌, ಸತ್ಯನಾರಾಯಣ ಅಡಿಗ (ಹಾಲಿ)
ಕಾರ್ಯದರ್ಶಿಗಳು:
ಬಿಜು ಕುರಿಯನ್‌, ಜಾಯ್‌, ಸೆ„ಮನ್‌ ಜೋಸೆಫ್‌, ಮಂಜುನಾಥ ಶೆಟ್ಟಿ, ಹಿರಿಯಣ್ಣ ಶೆಟ್ಟಿ ಹಾಗೂ ಶ್ರೀಮತಿ ಆರ್‌. (ಹಾಲಿ)

-ಡಾ|ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next