Advertisement

ನಿಮ್ಮ ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಭೂ ವ್ಯವಹಾರದಲ್ಲಿ ಲಾಭ ಕಂಡು ಬಂದೀತು!

08:02 AM Mar 25, 2021 | Team Udayavani |

25-03-2021

Advertisement

ಮೇಷ: ನಿಮ್ಮ ಜೀವನದಲ್ಲಿ ಮೂಡಿಬಂದ ಗೊಂದಲಗಳು ಹಂತಹಂತವಾಗಿ ತಿಳಿಯಾಗಲಿದೆ. ಕೆಲವೊಮ್ಮೆ ನಿಮ್ಮ ಅದೃಷ್ಟದ ಬಗ್ಗೆ ನಿಮಗೆ ಆಶ್ಚರ್ಯವಾದೀತು. ಆದರೆ ಸಂಸಾರದಲ್ಲಿ ಮೂಡಿಬಂದ ಗೊಂದಲ ನಿವಾರಣೆಯಾಗಲಿದೆ.

ವೃಷಭ: ಸಾಂಸಾರಿಕವಾಗಿ ನೀವು ಹೊಂದಿಕೆ ಮಾಡಿದಂತೆ ಯಾರಿಂದಲೂ ಆಗದು. ಆದರೂ ಈಗ ಸೃಷ್ಟಿಯಾದ ಆರೋಗ್ಯ ಸಮಸ್ಯೆ ನಿಧಾನವಾಗಿ ಸರಿಯಾಗಲಿದೆ. ಸ್ವಲ್ಪ ತಾಳ್ಮೆಯ ಅವಶ್ಯಕತೆ ಇದೆ. ಅಧೈರ್ಯ ಬೇಡ.

ಮಿಥುನ: ಆರ್ಥಿಕ ಪರಿಸ್ಥಿತಿ ನಿಮ್ಮ ಲೆಕ್ಕಾಚಾರವನ್ನು ಹೊಂದಿಕೊಂಡು ಮಾಡಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಫ‌ಲಿತಾಂಶ ಸಿಗಲಿದೆ. ತುಂಬಾ ಸಂತೋಷವಾಗಲಿದೆ. ಪರಿಶ್ರಮಕ್ಕೆ ಉತ್ತಮ ಫ‌ಲವಿದೆ.

ಕರ್ಕ: ಬಂದ ಸಮಸ್ಯೆಗಳನ್ನು ಗುರುತಿಸಿಕೊಂಡು ಬುದ್ಧಿವಂತಿಕೆಯಿಂದ ಪರಿಹರಿಸುವುದು ಅಗತ್ಯವಿದೆ. ಆದಷ್ಟು ಮೌನ ವಹಿಸಿದರೆ ಉತ್ತಮ. ನಿಮ್ಮ ಮಾತು ನಿಮ್ಮನ್ನು ಪೇಚಿಗೆ ಸಿಲುಕಿಸಲಿದೆ. ಜಾಗ್ರತೆ ಮಾಡಿರಿ.

Advertisement

ಸಿಂಹ:ವಿಲಾಸೀ ವಸ್ತುಗಳ ಖರೀದಿಯಿಂದ ಹತ್ತುಹಲವು ಖರ್ಚುಗಳು ಬಂದೀತು. ಸಾವರಿಸಿಕೊಂಡು ಹೋಗಬೇಕಾದೀತು. ಖರ್ಚು ಮಿತಿ ಮೀರಲಿದೆ. ಜಾಗ್ರತೆಯಿಂದ ಮುನ್ನಡೆಯಿರಿ. ಕಷ್ಟಗಳನ್ನು ಎದುರಿಸುವುದು ಮುಖ್ಯ.

ಕನ್ಯಾ: ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತಿ ತೋರಿಬಂದು ಪ್ರಗತಿ ಕಾಣಲಿದೆ. ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆಯು ಕಂಡುಬಂದೀತು. ಕಾರ್ಯಕ್ಷೇತ್ರದಲ್ಲಿ ನಿಷ್ಠುರ ಕಟ್ಟಿಕೊಳ್ಳದೆ, ಸಮಾಧಾನದಿಂದ ಕಾರ್ಯಪ್ರವೃತ್ತರಾಗಿರಿ.

ತುಲಾ: ದೂರ ಸಂಚಾರದಲ್ಲಿ ಸಂತಸವಿದ್ದರೂ ಮನೆಯಿಂದ ದೂರವಿರಬೇಕಾದೀತು. ಕಾರ್ಯರಂಗದಲ್ಲಿ ಕಿರಿಕಿರಿ ತೋರಿಬರುವುದು. ಅವೆಲ್ಲವನ್ನೂ ದಾಟಿ ಮುನ್ನಡೆದರೆ ದಡ ಸೇರುವಿರಿ. ಪ್ರಯತ್ನ ಬಲದ ಅಗತ್ಯವಿರುತ್ತದೆ.

ವೃಶ್ಚಿಕ: ನಿಮ್ಮ ಅಭಿವೃದ್ಧಿ ಹಾಗೂ ಉನ್ನತಿ ಕಂಡು ಇತರರು ಹೊಟ್ಟೆ ಉರಿಸಿಕೊಂಡಾರು. ಕೌಟುಂಬಿಕ ಸಮಸ್ಯೆಗಳನ್ನು ಬದಿಗೊತ್ತಿ ನಿಮ್ಮ ಕೆಲಸವನ್ನು ನೀವು ಮಾಡಿರಿ. ಪ್ರತಿಫ‌ಲದ ಅಪೇಕ್ಷೆಯನ್ನು ಮಾಡದಿರಿ.

ಧನು: ವಿದ್ಯಾರ್ಥಿಗಳ ಪ್ರಯತ್ನ ಬಲಕ್ಕೆ ತಕ್ಕಫ‌ಲ ಸಿಗದೆ ಬೇಸರವಾದೀತು. ಆದರೆ ಅದರ ಬೆನ್ನಹಿಂದೆ ಬಿದ್ದರೆ ನೀವು ಯಶಸ್ಸು ಸಾಧಿಸುವಿರಿ. ನಿಮ್ಮ ಪ್ರಯತ್ನ, ಆತ್ಮವಿಶ್ವಾಸ, ಸಹನೆ ನಿಮ್ಮನ್ನು ಮುನ್ನಡೆಸಲಿದೆ.

ಮಕರ: ಪ್ರವಾಸವು ಕೂಡಿ ಬಂದೀತು. ಆದರೆ ಪ್ರವಾಸದಿಂದ ಉತ್ತಮ ಫ‌ಲ ದೊರಕಲಿದೆ. ಸಂತಸವು ಲಭಿಸಲಿದೆ. ಯಶಸ್ಸು ನಿಶ್ಚಿತ. ಭೂ ವ್ಯವಹಾರದಲ್ಲಿ ಲಾಭ ಕಂಡು ಬಂದೀತು. ಗೃಹ ಯಾ ನಿವೇಶನದ ಖರೀದಿ ಇದ್ದೀತು.

ಕುಂಭ: ಧಾರಾಳ ಅವಕಾಶಗಳು ಕಂಡು ಯಾವುದನ್ನು ಆರಿಸಲು ಅರಿಯದಂತಾಗುವಿರಿ. ಸೂಕ್ತ ಸಲಹೆಗಳಿಂದ ಮುನ್ನಡೆಯಿರಿ. ಆರೋಗ್ಯದಲ್ಲಿ ಏರುಪೇರು ಕಂಡು ಬಂದರೂ ಸುಧಾರಿಸಿಕೊಳ್ಳುವಿರಿ. ಪತ್ನಿಯ ನಿರ್ಧಾರ ಸರಿಯಾಗಿರುತ್ತದೆ.

ಮೀನ: ಮನಸ್ಸಿಗೆ ನೆಮ್ಮದಿ ಕಡಿಮೆಯಾದೀತು. ಆರ್ಥಿಕ ಅಡಚಣೆಗಳು ಕಂಡು ಬಂದಾವು. ಮನೆಯಲ್ಲಿ ಶುಭ ಮಂಗಲ ಕಾರ್ಯದ ಚಿಂತನೆಯಿಂದ ಗೊಂದಲಗಳು ಉದ್ಭವಿಸಲಿದೆ. ಆದರೆ ಸಮಾಧಾನದಿಂದ ಆಲೋಚನೆ ಮಾಡಿರಿ.

ಎನ್.ಎಸ್.ಭಟ್

Advertisement

Udayavani is now on Telegram. Click here to join our channel and stay updated with the latest news.

Next