Advertisement

ಬರಗಾಲದಲ್ಲೂ ಕ್ಷೀರ ಸಾಗರ 

04:54 PM Sep 22, 2018 | Team Udayavani |

ಕುಷ್ಟಗಿ: ತಾಲೂಕಿನ ಚಳಗೇರಿ ಗ್ರಾಮದ ಮಹಿಳಾ ಹಾಲು ಉತ್ಪಾದಕ ಸಹಕಾರ ಸಂಘವು ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ವ್ಯಾಪ್ತಿಯಲ್ಲಿ 2017-18ನೇ ಸಾಲಿನ ಏಕೈಕ ಅತ್ಯುತ್ತಮ ಸಂಘ ಎಂಬ ಹೆಗ್ಗಳಿಗೆ ಪಾತ್ರವಾಗಿದೆ.

Advertisement

ತಾಲೂಕಿನ ಬರಗಾಲ ಎದುರಾಗಿದ್ದು, ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಇಂತಹ ಪರಿಸ್ಥಿತಿಯಲ್ಲೂ ಚಳಗೇರಿಯ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘವು ಗಣನೀಯ ಸಾಧನೆ ಮಾಡಿದೆ. ಬರಗಾಲದಲ್ಲೂ ಹಾಲಿನ ಉತ್ಪಾದನೆಯಲ್ಲಿ ಸೈ ಎನಿಸಿಕೊಂಡಿದೆ. ಕಳೆದ ಮೂರು ವರ್ಷಗಳಲ್ಲಿ ಈ ಸಂಘದ ಪ್ರತಿ ದಿನದ 1,100 ನಿಂದ 1,200 ಲೀಟರ್‌ ಹಾಲು ಉತ್ಪಾದನೆ ಮಾಡುತ್ತಿದೆ. 283 ಶೇರುದಾರರನ್ನು ಹೊಂದಿದ್ದು, ಇವರಲ್ಲಿ 131 ರೈತ ಕುಟುಂಬಗಳಿಗೆ ಹೈನುಗಾರಿಕೆ ಉಪಕಸುಬಾಗಿದೆ.

ಸಂಘಕ್ಕೆ ಹಾಲು ಉತ್ಪಾದಕ ಸದಸ್ಯರಿಗೆ ಪ್ರತಿ 15 ದಿನಕ್ಕೊಮ್ಮೆ ತಪ್ಪದೇ ಹಾಲಿನ ಮೊತ್ತವನ್ನು ಅವರ ಬ್ಯಾಂಕ್‌ ಖಾತೆಗೆ ಜಮಾ ಮಾಡುತ್ತಿದೆ. ಹಾಲು ಹಾಕುವವರಿಗೆ ಸಂಘದಿಂದ ಹಾಲಿನ ಪ್ರಮಾಣ ಆಧರಿಸಿ ಸ್ಟೀಲ್‌ ಕ್ಯಾನ್‌, ಬೋನಸ್‌ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಸಂಘ ಸ್ವಂತ ಕಟ್ಟಡ ಹೊಂದುವ ಅಭಿಲಾಷೆಯ ಹಿನ್ನೆಲೆಯಲ್ಲಿ 9,24,192 ರೂ. ಬೋನಸ್‌ ಹಣವನ್ನು ಸ್ವಂತಕ್ಕೆ ಬಳಸಿಕೊಳ್ಳದೇ ಕಟ್ಟಡದ ನಿಧಿಗೆ ಕಾಯ್ದಿರಿಸಿದೆ.

ಕುಷ್ಟಗಿ ತಾಲೂಕಿನಲ್ಲಿ ಹೈನೋದ್ಯಮಕ್ಕೆ ಉತ್ತೇಜನ ನೀಡಿ ಶ್ರೇಯಸ್ಸು ದಿ. ಗೋಪಾಲಪ್ಪಯ್ಯ ದೇಸಾಯಿ ಅವರಿಗೆ ಸಲ್ಲುತ್ತದೆ. ಅವರ ಇಚ್ಛಾಶಕ್ತಿಯ ಹಿನ್ನೆಲೆಯಲ್ಲಿ ಸ್ಟೆಪ್‌ (ಸಪೋರ್ಟ್‌ ಟ್ರೇನ್ಸ್‌ ಎಂಪ್ಲಾಯಿಮೆಂಟ್‌ ಪ್ರೋಗ್ರಾಂ) ಯೋಜನೆಯನ್ವಯ 2000-2001ರಲ್ಲಿ ಚಳಗೇರಾದಲ್ಲಿ ಮಹಿಳಾ ಸಂಘಟನೆ ಸ್ಥಾಪಿಸಿದ್ದು, ಆರಂಭದಲ್ಲಿ 50-60 ಲೀಟರ್‌ ಇದ್ದ ಹಾಲಿನ ಉತ್ಪಾದನೆ ಈಗ 1,200 ರಷ್ಟಾಗಿದೆ. ಅಲ್ಲದೇ ಇವರ ಹೆಸರು ಚಿರಸ್ಥಾಯಿಯಾಗಿ ಉಳಿಸುವ ಉದ್ದೇಶದಿಂದ ಅವರ ಪುತ್ರ ವೆಂಕಪ್ಪಯ್ಯ ದೇಸಾಯಿ ಅವರು, ಚಳಗೇರಾ ಗ್ರಾಮದಲ್ಲಿ ಎರಡು ಗುಂಟೆ ಜಾಗೆಯನ್ನು ದಾನವಾಗಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶೀಘ್ರವೇ ಸಂಘದ ಸ್ವಂತ ಕಟ್ಟಡಕ್ಕೆ ಅಡಿಗಲ್ಲು ನೆರವೇರಿಸಲಾಗುತ್ತದೆ. 

ಪ್ರತಿದಿನ 1,200 ಲೀಟರ್‌ ಹಾಲು ಉತ್ಪಾದಿಸುವ ಹಿನ್ನೆಲೆಯಲ್ಲಿ ಈ ಸಂಘಕ್ಕೆ ಸ್ವಂತ ಕಟ್ಟಡ ಹೊಂದಲು 2 ಗುಂಟೆ ಜಮೀನು ದಾನವಾಗಿ ಸಿಕ್ಕಿದೆ. ಇಲ್ಲಿನ ಹಾಲಿನ ಉತ್ಪಾದನೆ ಆಧರಿಸಿ ಬಿಎಂಸಿ (ಬಲ್ಕ ಮಿಲ್ಕ್ ಕೂಲರ್‌) ಆರಂಭಿಸುವ ಉದ್ದೇಶ ಹೊಂದಲಾಗಿದೆ.
∙ಬಸವರಾಜ್‌ ಯರದೊಡ್ಡಿ, ವಿಸ್ತೀರ್ಣಾಧಿಕಾರಿ ಕೆಎಂಎಫ್‌.

Advertisement

ಸಂಘದ ಶೇರುದಾರರಿಗೆ ಲಾಭಾಂಶ, ಹಾಲು ಹಾಕುವವರಿಗೆ ಬೋನಸ್‌ ನೀಡಲಾಗುತ್ತಿದೆ. ಸಂಘದ ನಿರ್ದೇಶಕರಿಗಾಗಿ ಅಧ್ಯಯನ ಪ್ರವಾಸ, ವೃತ್ತಿ ನೈಪುಣ್ಯತೆ ಹೆಚ್ಚಿಸಲು ತರಬೇತಿ ಕಾರ್ಯಕ್ರಮ, ಕೃಷಿ ಮೇಳಕ್ಕೆ ಕಳುಹಿಸಿ ಕಾರ್ಯಕ್ಷಮತೆ ಹೆಚ್ಚಿಸಲಾಗಿದೆ.
∙ಕಲಾವತಿ ಕೋನಾಪುರ,
ಹಾಲು ಉತ್ಪಾದಕರ ಮಹಿಳಾ ಸಂಘ
ಚಳಗೇರಿ.

Advertisement

Udayavani is now on Telegram. Click here to join our channel and stay updated with the latest news.

Next