ಹೋರಾಟಗಾರನಂತೆ ಇರುತ್ತಾನೆ. ಅಪ್ಪನ ಪ್ರೀತಿ ಅರಿಯದ ವಯಸ್ಸಿಗೆ ಭಯ; ಅರಿತ ವಯಸ್ಸಿಗೆ ಪ್ರೀತಿ. ನುರಿತ ಮೇಲೆ ನಂಬಿಕೆ. ಒಂದು ಬಗೆಯಲ್ಲಿ ನಮ್ಮ ಸಾಧನೆ ಮೊದಲ ಮೆಟ್ಟಿಲು ಅಪ್ಪ.
Advertisement
ಅಪ್ಪ ಎನ್ನುವಾಗ ನನ್ನಲ್ಲೊಂದು ಶಕ್ತಿ ಎಚ್ಚರಗೊಳ್ಳುತ್ತದೆ. ಬದುಕಿನ ಬವಣೆಗಳನ್ನು ಅಪ್ಪ ಕ್ಷಣಾರ್ಧದಲ್ಲಿ ದೂರ ಮಾಡಿ ಸಾಧನೆಗೆ ಮಾರ್ಗವಾಗುತ್ತಾನೆ. ಅಪ್ಪನ ಜತೆ ನಾನು ಮಾತನಾಡಿದ್ದು ಕಡಿಮೆಯೇ, ಆದರೆ ನಮ್ಮಿಬ್ಬರಿಗೂ ಸೇತುವೆಯಾದವರು ಅಮ್ಮ. ನನ್ನೆಲ್ಲ ಬೇಕು ಬೇಡಗಳನ್ನು ಅಮ್ಮನ ಮೂಲಕವೇ ಅಪ್ಪನಿಂದ ಈಡೇರಿಸಿಕೊಳ್ಳುತ್ತಿದ್ದೆ. ಒಂದು ಬಗೆಯಲ್ಲಿ ಅಮ್ಮ ಸೂತ್ರಧಾರಿ, ಅಪ್ಪ ಪಾತ್ರಧಾರಿ. ನಾನು ಚಿಕ್ಕವನಿದ್ದಾಗ ಕಾಲು ಎಡವಿ ರಕ್ತ ಬಂದಿರುವುದನ್ನ ಕಂಡ ಅಪ್ಪ ಔಷಧಕ್ಕಾಗಿ ತಡಕಾಡುತಿದ್ದ ಆ ಘಟನೆ ನೆನೆದರೆ ಕಣ್ಣಂಚಲಿ ನೀರು ಜಾರುತ್ತದೆ. ಆದರೂ ಅವರ ವ್ಯಕ್ತಿತ್ವ, ಪ್ರೀತಿ ಮಮತೆಯನ್ನು ಅರಿಯಲು ನನಗೆ ಇಷ್ಟು ವರ್ಷಗಳು ಬೇಕಾದವು. ಅಂದು ಶತ್ರುವಿನಂತಿದ್ದ ಅಪ್ಪ ಇಂದು ನನ್ನ ಜೀವನದ ಮಿತ್ರನಾಗಿದ್ದಾನೆ. ತಂದೆ ಸದಾ ಕಾಲ ಕುಟಂಬದ ನೇಕಾರನಂತೆ ದುಡಿಮೆಯಲ್ಲೇ ತನ್ನ ಜೀವನದ ಸುಖ -ದುಃಖಗಳನ್ನ ದೂರವಿರಿಸಿ ಮಕ್ಕಳ ಏಳಿಗೆಗಾಗಿ ಹಪಹಪಿಸುತ್ತಾನೆ. ಪ್ರತಿಯೊಬ್ಬ ತಂದೆ ಮಗುವಿನ ಜೀವನ ರೂಪಿಸುವಲ್ಲಿ ಹಿಂಜರಿಯಲಾರ. ಅಪ್ಪ ಗಡುಸು ಮುಖವುಳ್ಳ ಮಮತೆಯ ಮನಸ್ಸು. ತಂದೆ ತಾಯಿಯರ ಮುಪ್ಪಿನ ಕಾಲದಲ್ಲಿ ಅವರಿಗೆ ಸದಾ ಚಿರಋಣಿಯಾಗಿರೋಣ. ಅವರನ್ನು ಯಾವತ್ತೂ ದೂರ ಮಾಡದಿರೋಣ. ವೃದ್ಧಾಶ್ರಮದಂತಹ ಕೇಂದ್ರಗಳತ್ತ ನಮ್ಮ ತಂದೆ ತಾಯಿಯರನ್ನ ಕೊಂಡೊಯ್ಯದಿರೋಣ.
ವಿರೇಶ ಹಾರೊಗೇರಿ , ಧಾರವಾಡ ವಿಶ್ವವಿದ್ಯಾನಿಲಯ