Advertisement

ಉತ್ತಮ ನಟ, ನಟಿ ಯಾರು? ಶಿವಣ್ಣ, ರಕ್ಷಿತ್ ಶೆಟ್ಟಿಗೆ ದಾದಾ ಸಾಹೇಬ್ ಫಾಲ್ಕೆ ಸೌತ್ ಪ್ರಶಸ್ತಿ

04:21 PM Jan 02, 2021 | Team Udayavani |

ನವದೆಹಲಿ: ಹೊಸ ವರ್ಷದ ಸಂಭ್ರಮದ ನಡುವೆ 2020ನೇ ಸಾಲಿನ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ದಕ್ಷಿಣ (ಸೌತ್) ಪ್ರಶಸ್ತಿ ಶನಿವಾರ(ಜನವರಿ 02) ಘೋಷಣೆಯಾಗಿದ್ದು, ಕನ್ನಡ ಚಿತ್ರರಂಗದ  ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣಗೆ ಈ ಪ್ರಶಸ್ತಿ ಲಭಿಸಿದೆ.

Advertisement

ತಮಿಳು, ಮಲಯಾಳಂ, ತೆಲುಗು ಹಾಗೂ ಕನ್ನಡ ಸೇರಿದಂತೆ ನಾಲ್ಕು ಚಿತ್ರರಂಗದಲ್ಲಿನ ಪ್ರತಿಭಾವಂತ ನಟರನ್ನು ಗುರುತಿಸಿ ಈ ಫೌಂಡೇಶನ್ ಪ್ರಶಸ್ತಿಗೆ ಆಯ್ಕೆ ಮಾಡುತ್ತಿದೆ ಎಂದು ವರದಿ ತಿಳಿಸಿದೆ.

ಈ ಬಾರಿ ಕನ್ನಡ ಚಿತ್ರರಂಗದ ಡಾ.ಶಿವರಾಜ್ ಕುಮಾರ್, ತಮಿಳಿನ ಧನುಷ್, ಮಲಯಾಳಂನ ಮೋಹನ್ ಲಾಲ್ ಹಾಗೂ ಅಜಿತ್ ಕುಮಾರ್ ಗೆ ದಾದಾ ಸಾಹೇಬ್ ಸೌತ್ 2020ನೇ ಸಾಲಿನ ಪ್ರಶಸ್ತಿ ದೊರೆತಿದೆ.

ಅವನೇ ಶ್ರೀಮನ್ನಾನಾರಾಯಣ ಚಿತ್ರಕ್ಕಾಗಿ ರಕ್ಷಿತ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದು, ನಟಿ ತಾನ್ಯಾ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಪ್ರೀಮಿಯರ್ ಪದ್ಮಿನಿ ಸಿನಿಮಾಕ್ಕಾಗಿ ರಮೇಶ್ ಇಂದಿರಾ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ಮೂಕಜ್ಜಿಯ ಕನಸುಗಳು ಅತ್ಯುತ್ತಮ ಸಿನಿಮಾ, ವಿ.ಹರಿಕೃಷ್ಣ ಅತ್ಯುತ್ತಮ ಸಂಗೀಗ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ.

ಇದನ್ನೂ ಓದಿ:ಶೀಘ್ರದಲ್ಲಿಯೇ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಐ ಪೋನ್ -13

Advertisement

ಮಲಯಾಳಂನ ಆ್ಯಂಡ್ರಾಯ್ಡ್ ಕುಂಜಪ್ಪನ್ ವರ್ಷನ್ 5.25 ಸಿನಿಮಾದಲ್ಲಿನ ಅಭಿನಯಕ್ಕಾಗಿ ಸೂರಜ್ ವೆಂಜರಾಮೂಡು ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಮಲಯಾಳಂ ಉಯಾರೆ ಚಿತ್ರದ ನಟನೆಗಾಗಿ ಪಾರ್ವತಿ ತಿರುವೊತ್ತು ಅತ್ಯುತ್ತಮ ನಟಿ ಪ್ರಶಸ್ತಿ, ಕುಂಬಲಂಗಿ ನೈಟ್ಸ್ ನ ಮಧು ಸಿ ನಾರಾಯಣ್ ಅತ್ಯುತ್ತಮ ನಿರ್ದೇಶಕ, ಉಯಾರೆ ಅತ್ಯುತ್ತಮ ಸಿನಿಮಾ, ದೀಪಕ್ ದೇವ್ ಅತ್ಯುತ್ತಮ ಸಿನಿಮಾ ನಿರ್ದೇಶಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅಸುರನ್ ಸಿನಿಮಾದಲ್ಲಿನ ನಟನೆಗಾಗಿ ಧನುಶ್ ಗೆ ಅತ್ಯುತ್ತಮ ನಟ ಪ್ರಶಸ್ತಿ, ಜ್ಯೋತಿಕಾ ಅತ್ಯುತ್ತಮ ನಟಿ ಪ್ರಶಸ್ತಿ, ಆರ್.ಪಾರ್ತಿಬನ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ಟು ಲೆಟ್ ಅತ್ಯುತ್ತಮ ಸಿನಿಮಾ, ಅನಿರುದ್ಧ ರವಿಚಂದರ್ ಅತ್ಯುತ್ತಮ ಸಂಗೀತ ನಿರ್ದಶಕ ಪ್ರಶಸ್ತಿ ದೊರೆತಿದೆ.

ತೆಲುಗಿನ ಅಕ್ಕಿನೇನಿ ನಾಗಾರ್ಜುನ್ ಅತ್ಯುತ್ತಮ ಬಹುಮುಖ ಪ್ರತಿಭೆ ನಟ, ನವೀನ್ ಪೋಲಿ ಶೆಟ್ಟಿ ಅತ್ಯುತ್ತಮ ನಟ, ರಶ್ಮಿಕಾ ಮಂದಣ್ಣ ಅತ್ಯುತ್ತಮ ನಟಿ ಪ್ರಶಸ್ತಿ, ಜೆರ್ಸಿ ಅತ್ಯುತ್ತಮ ಸಿನಿಮಾ, ಸುಜೀತ್ (ಸಾಹೋ ಚಿತ್ರ) ಅತ್ಯುತ್ತಮ ನಿರ್ದೇಶಕ.

Advertisement

Udayavani is now on Telegram. Click here to join our channel and stay updated with the latest news.

Next