Advertisement

ಅಪ್ಪ, ಅಪ್ಪ, ಅಪ್ಪಾ… ಅಮ್ಮನಿಗೆ ಏನಾಯ್ತಪ್ಪ?

03:55 AM May 01, 2018 | |

ಶಾರದಮ್ಮನವರು ನಿಷ್ಠುರವಾಗಿ ಹೇಳಿಬಿಟ್ಟರು: “ಗೀತಾ, ನಿನ್ನ ವರ್ತನೆ ನನಗಂತೂ ಇಷ್ಟವಾಗ್ತಾ ಇಲ್ಲ. ನೀನು ಸಣ್ಣ  ಹುಡುಗಿಯಲ್ಲ. ಡಿಗ್ರಿ ಮಾಡಿರೋಳು. ಮದುವೆ ವಯಸ್ಸಿಗೆ ಬಂದ ಹೆಣ್ಮಕ್ಕಳು ಗಂಭೀರವಾಗಿ ಇರಬೇಕು. ಜನ ನಮ್ಮನ್ನು ಗಮನಿಸ್ತಾ ಇರ್ತಾರೆ. ಅವಕಾಶ ಸಿಕ್ಕಿದ್ರೆ ಸಾಕು; ತಲೆಗೊಂದು ಮಾತಾಡ್ತಾರೆ. ಗಾಸಿಪ್‌ ಹುಟ್ಟಿಸ್ತಾರೆ. ಇದೆಲ್ಲ ಗೊತ್ತಿದ್ರೂ ನೀನು ಗಂಡುಬೀರಿ ಥರಾ ಓಡಾ ಡೋದಾ? ಮೊನ್ನೆ ನೋಡಿದ್ರೆ ಸಂಜೆ ಏಳೂವರೆಗೆ ಮನೆಗೆ ಬಂದೆ. ಇವತ್ತು ಮತ್ತೆ ಅದನ್ನೇ ರಿಪೀಟ್‌ ಮಾಡಿದೀಯ. ಬೇಡಮ್ಮಾ ಬೇಡ. ನೀನು ಓದಲಿಕ್ಕೆ, ಟ್ರೈನಿಂಗ್‌ಗೆ ಅಂತೆಲ್ಲಾ ಸಿಟಿಗೆ ಹೋಗೋದೂ ಸಾಕು. ನಾವು ನಿನ್ನ ಬಗ್ಗೆ ಯೋಚಿಸಿ ಬಿ.ಪಿ ಹೆಚ್ಚಿಸ್ಕೊಂಡು ಒದ್ದಾ ಡೋದೂ ಸಾಕು. ಈ ವರ್ಷ ಮದುವೆ ಮಾಡಿ ನಮ್ಮ ಜವಾಬ್ದಾರಿ ಕಳ್ಕೊತೇವೆ. ಆಮೇಲೆ ನಿನ್ನಿಷ್ಟ ಬಂದಂತೆ ಜೀವನ ಮಾಡು…’

Advertisement

ಆಗಷ್ಟೇ ಡ್ರೆಸ್‌ ಬದಲಿಸಿಕೊಂಡು ರೂಮಿನಿಂದ ಹೊರಗೆ ಬಂದಿದ್ದ ಗೀತಾ ಹೇಳಿದಳು: “ಅಮ್ಮಾ, ಸುಮ್‌ಸುಮ್ನೆ ಯಾಕೆ ಎಕ್ಸೆ„ಟ್‌ ಆಗ್ತಿàಯ? ಇದು ನಿಮ್ಮ ಕಾಲ ಅಲ್ಲ. ಈಗೇನಿದ್ರೂ 30 ವರ್ಷ ದಾಟಿದ ಮೇಲೇನೇ ಹೆಣ್ಮಕ್ಳು ಮದುವೆ ಬಗ್ಗೆ ಯೋಚಿ ಸೋದು. ನಾನೂ ಅಷ್ಟೇ, ಟ್ರೈನಿಂಗ್‌ಗೆ ಅಂತ ಶಿವಮೊಗ್ಗಕ್ಕೆ ಹೋಗ್ತಿ ದೀನಿ. ಆ ಕಡೆಯಿಂದ ಬಸ್ಸು ತಡವಾಗಿ ಬಂದ್ರೆ ನಾನೇನು ಮಾಡೋ ಕಾಗುತ್ತೆ? ಬರುವುದು ಸ್ವಲ್ಪ ತಡವಾಗುತ್ತೆ ಅಂತ ಮೊದಲೇ ಫೋನ್‌ ಮಾಡಿ ತಿಳಿಸಿದ್ದೆ ತಾನೇ? ಇಷ್ಟೆಲ್ಲ ಹೇಳಿದ ಮೇಲೂ ಯಾಕೆ ಏನೇನೋ ಕಲ್ಪಿಸಿಕೊಂಡು ಕಂಗಾಲಾಗ್ತಿàಯ?…’

 ಈ ಮಾತುಗಳನ್ನು ಕೇಳಿ ಸುಂದರರಾಯರಿಗೆ ರೇಗಿತು. ಅವರು ಅಸಹನೆಯಿಂದ- “ಶುರುವಾಯ್ತಾ ನಿಮುª ರಗಳೆ? ಸೈಲೆಂಟಾಗಿ ರೋಕೆ ಇಬ್ರೂ ಏನ್‌ ತಗೋತೀರಿ? ದಿನಾ ಒಬ್ಬರ ಮೇಲೊಬ್ಬರು ಎಗರಾಡೋದೇ ಆಗೋಯ್ತು’ ಅಂದರು. ಈ ಮಾತಿಗೆ ಉತ್ತರವೆಂಬಂತೆ, ಅಮ್ಮ-ಮಗಳಿಬ್ಬರೂ ತಮ್ಮಷ್ಟಕ್ಕೇ ಗೊಣಗಿ ಕೊಂಡು ರೂಂ ಸೇರಿಕೊಂಡರು.

ಸುಂದರ್‌ ರಾವ್‌-ಶಾರದಮ್ಮ ದಂಪತಿ ತೀರ್ಥಹಳ್ಳಿಯಲ್ಲಿದ್ದರು. ಅವರ ಒಬ್ಬಳೇ ಮಗಳು ಗೀತಾ. ಸದಾ ಮೊಬೈಲ್‌ನಲ್ಲೇ ಮುಳುಗಿರುವುದು, ತಡವಾಗಿ ಮನೆಗೆ ಬರುವುದು, ಯಾಕಮ್ಮಾ ಲೇಟು ಎಂದು ಕೇಳಿದರೆ ಏನಾದರೂ ನೆಪ ಹೇಳುವುದು…ಇದೆಲ್ಲಾ ಅವಳಿಗೆ ಅಭ್ಯಾಸವಾಗಿ ಹೋಗಿತ್ತು. ಇದನ್ನೆಲ್ಲಾ ಗಮನಿಸಿಯೇ, ನೀನು ಸುತ್ತಾಡೋದು ಸಾಕು ಎಂದು ಶಾರದಮ್ಮ ರೇಗಿದ್ದರು.

ಶಾರದಮ್ಮನವರ ಆಸೆಯಂತೆ ಏನೂ ನಡೆಯಲಿಲ್ಲ. ಬೆಂಗಳೂ ರಿಗೆ ಹೋಗಿ ನೌಕರಿಗೆ ಸೇರುವುದಾಗಿ ಗೀತಾ ಪಟ್ಟು ಹಿಡಿದಳು. ಇಂಟರ್ನೆಟ್‌ನಿಂದ ಐದಾರು ಪಿ.ಜಿಗಳ ವಿಳಾಸ, ವಿವರವನ್ನೆಲ್ಲ ಸಂಗ್ರಹಿಸಿ ಪೋಷಕರ ಮುಂದಿಟ್ಟಳು. ಬೆಂಗಳೂರಲ್ಲಿ ನನ್ನಂಥಾ ಸಾವಿರಾರು ಹುಡುಗೀರು ಇದ್ದಾರೆ. ಅವರೆಲ್ಲ ಜೀವನ ಮಾಡ್ತಾ ಇಲ್ವಾ? ಮಕ್ಕಳನ್ನು ಪಿ.ಜಿಲಿ ಬಿಟ್ಟು ಅವರ ಪೋಷಕರು ನೆಮ್ಮದಿ ಯಾಗಿ ಬದುಕಿಲ್ವಾ? ಎಂದೆಲ್ಲಾ ಕ್ರಾಸ್‌ಕ್ವೆಶ್ವನ್‌ ಹಾಕಿದಳು. ಹೆತ್ತವರು, ಬೇರೇನೂ ಹೇಳಲು ತೋಚದೆ, ಹೋಗಿದ್‌ ಬಾ, ನಿನಗೆ ಒಳ್ಳೆಯದಾಗಲಿ ಎಂದರು.

Advertisement

ಬೆಂಗಳೂರು, ಅಲ್ಲಿನ ಝಗಮಗ, ಸಾಕೋ ಸಾಕು ಅನ್ನುವಷ್ಟು ಸ್ವಾತಂತ್ರ್ಯ, ತಿಂಗಳಿಗೊಮ್ಮೆ ಕೈ ಸೇರುವ ಸಂಬಳದ ಹಣ, ಬೇಕು ಅನ್ನಿಸಿದಾಗೆಲ್ಲ ಪಿಕ್‌ನಿಕ್‌ಗೊà, ಟ್ರಿಪ್‌ಗೊà ಹೋಗಿ ಬರಲು ಸಿದ್ಧವಾಗಿರುತ್ತಿದ್ದ ಗೆಳತಿಯರು…ಇದನ್ನೆಲ್ಲ ನೋಡಿ ಗೀತಾಗೆ ಖುಷಿಯಾಯಿತು. ಅವಳು ಯಾವ ಸಂದರ್ಭದಲ್ಲೂ ಕೆಟ್ಟವರ ಸಹವಾಸ ಮಾಡಲಿಲ್ಲ. ಆದರೆ ಮೊಬೈಲ್‌ ಫೋನ್‌ಗೆ ಅತೀ ಅನ್ನುವಷ್ಟು ಅಡಿಕ್ಟ್ ಆಗಿಬಿಟ್ಟಳು. 

ಇತ್ತ, ತೀರ್ಥಹಳ್ಳಿಯ ಮನೆಯಲ್ಲಿ ಶಾರದಮ್ಮನವರ ಚಡಪಡಿ ಕೆಯನ್ನು ಹೇಳಲಾಗದು. ಮಗಳು ದೂರದ ಊರಿನಲ್ಲಿದ್ದಾಳೆ. ಅಲ್ಲಿ ಅವಳಿಗೆ ಹೇಳುವವರಿಲ್ಲ, ಕೇಳುವವರಿಲ್ಲ. ಅಕಸ್ಮಾತ್‌ ಕೆಟ್ಟವರ ಫ್ರೆಂಡ್‌ಶಿಪ್‌ ಆಗಿಬಿಟ್ಟರೆ? ರಾತ್ರಿ ಆಫೀಸಿನಿಂದ ಪಿ.ಜಿ.ಗೆ ಬರು ವಾಗ ಯಾವುದಾದ್ರೂ ವಾಹನ ಡಿಕ್ಕಿ ಹೊಡೆದುಬಿಟ್ರೆ? ಬೆಂಗ ಳೂರಿನ ಹವಾ ಒಗ್ಗದೆ ಅವಳು ಪೇಷಂಟ್‌ ಆಗಿಬಿಟ್ರೆ… ಹೀಗೆಲ್ಲಾ ಯೋಚಿಸುವರು. ಟಿ.ವಿಯಲ್ಲಿ, ಪತ್ರಿಕೆಗಳಲ್ಲಿ ಕಾಣಿಸುವ ಕ್ರೈಂ ಸುದ್ದಿಗಳನ್ನು ನೋಡಿದಾಗೆಲ್ಲ, ಪ್ರತಿ ಸುದ್ದಿಯ ಹಿಂದೆಯೂ ಮಗಳ ಮುಖವೇ ಕಂಡಂತಾಗಿ ಬೆಚ್ಚುವರು.

ಹೀಗಿದ್ದಾಗಲೇ, ನಾಲ್ಕು ದಿನ ರಜೆ ಸಿಕ್ಕಿದ್ದರಿಂದ ಗೀತಾ ಊರಿಗೆ ಬಂದಳು. ತಮ್ಮ ಅನುಮಾನಗಳನ್ನು ಮಗಳ ಮುಂದಿಡಬೇಕು. ಅವಳಿಂದ ಖಚಿತ ಉತ್ತರ ಪಡೆಯಬೇಕು. ಈ ವರ್ಷವೇ ಮದುವೆ ಆಗುವಂತೆ ಒತ್ತಾಯಿಸಬೇಕು ಎಂದೆಲ್ಲಾ ಶಾರದಮ್ಮ ಯೋಚಿಸಿ ದರು. ಆದರೆ ಗೀತಾ ಮಾತಿಗೇ ಸಿಗುತ್ತಿರಲಿಲ್ಲ. ಬೆಳಗ್ಗೆ ತಿಂಡಿ ತಿಂದು ರೂಂ ಸೇರಿಕೊಂಡರೆ, ಸುಸ್ತಾಗಿದೆ ಮಲ್ಕೋತೀನಿ ಎಂದು ಒಳಗಿ ನಿಂದ ಲಾಕ್‌ ಮಾಡಿಕೊಳ್ಳುತ್ತಿದ್ದಳು. ಇಲ್ಲವೇ ಫೋನ್‌ನಲ್ಲಿ ಬ್ಯುಸಿ ಆಗಿಬಿಡುತ್ತಿದ್ದಳು. ಮಗಳು ಹೀಗೆಲ್ಲಾ ತಮ್ಮನ್ನು ಅವಾಯ್ಡ ಮಾಡುತ್ತಿರುವುದನ್ನು ಕಂಡು ಶಾರದಮ್ಮ ಸಿಟ್ಟಾದರು. “ನೀನು ಸಂಪಾದನೆ ಮಾಡಿ ತಂದು ಹಾಕೋದೇನೂ ಬೇಡ. ತೆಪ್ಪಗೆ ಇನ್ಮುಂದೆ ಮನೇಲಿರು’ ಅಂದುಬಿಟ್ಟರು. ಅಮ್ಮನಿಗೆ ತಿರುಗಿಬಿದ್ದ ಗೀತಾ- ಅಮ್ಮಾ, ಈ ಥರ ಹೆಜ್ಜೆಹೆಜ್ಜೆಗೂ ಕಂಡೀಷನ್ಸ್‌ ಹಾಕ್ತೀಯಲ್ಲ. ಇದು ನನಗೆ ಮನೆ ಅನ್ಸಲ್ಲ. ಜೈಲು ಅನ್ನಿಸ್ತಿದೆ. ನಾನು ನಾಳೇನೇ ಹೋಗ್ತೀನೆ’ ಎಂದು ಅಬ್ಬರಿಸಿದ್ದು ಮಾತ್ರವಲ್ಲ; ಒಂದು ದಿನ ಮೊದಲೇ ಬೆಂಗಳೂರಿಗೆ ಹೋಗಿಯೇಬಿಟ್ಟಳು.

ಶಾರದಮ್ಮನವರಿಗೆ ಸಿಟ್ಟು ಮತ್ತು ಸಂಕಟ ಒಟ್ಟಿಗೇ ಜೊತೆ ಯಾಯಿತು. “ಅವಳನ್ನು ನೀವೂ ತರಾಟೆಗೆ ತಗೋಬೇಕಿತ್ತು. ನೀವು ಸುಮ್ನೆ ಇದ್ದಿದ್ದರಿಂದಲೇ ಅವಳು ಹಾಗೆಲ್ಲಾ ಹಾರಾಡೋದು..’ ಎಂದೆಲ್ಲಾ ಗಂಡನ ಮೇಲೆ ರೇಗಿದರು. “ಶಾರದಾ, ಅವರವರ ಹಣೇಲಿ ಬರೆದಂತೆ ಆಗುತ್ತೆ. ಅದನ್ನು ನಾನೋ, ನೀನೋ ತಪ್ಪಿಸೋಕೆ ಆಗಲ್ಲ. ನಿನ್ನ ಜೊತೆ ನಾನೂ ಸೇರಿಕೊಂಡು ರೇಗಿದ್ದನ್ನೇ ನೆಪ ಮಾಡ್ಕೊಂಡು ಅವ್ಳು ದೊಡ್ಡ ತಪ್ಪನ್ನೇ ಮಾಡಿಬಿಟ್ರೆ ಗತಿಯೇನು?’ ಎಂದು ಸುಂದರರಾಯರು ಹೆಂಡತಿಗೇ ಬುದ್ಧಿ ಹೇಳಿದರು.

“ಈ ಬೆಂಗ್ಳೂರಲ್ಲಿ ನನ್ನ ಥರಾ ಸಾವಿರಾರು ಹುಡುಗೀರು ದುಡೀತಾ ಇದಾರೆ. ಅವರೆಲ್ಲಾ ಸೇಫ್ ಆಗಿದಾರೆ ಅಲ್ವ? ಅದನ್ಯಾಕೆ ನಮ್ಮಮ್ಮ ಅರ್ಥ ಮಾಡ್ಕೊಳ್ಳೋದಿಲ್ವೋ ಕಾಣೆ. ಯಾರಿಗೋ ತೊಂದ್ರೆ ಆದ್ರೆ ನನಗೇ ಆಗಿದೆ ಅಂದೊRಳ್ಳೋದು, ಅರ್ಧ ಗಂಟೆ ಫೋನ್‌ ಬ್ಯುಸಿ ಇದ್ರೆ ಯಾರ ಜೊತೆ ಹರಟಿ¤ದೀಯ ಅನ್ನೋದು, ಪಿಕ್‌ನಿಕ್‌ ಹೋಗ್ತೀನೆ ಅಂದ್ರೆ ಜೊತೆಗೇ ಯಾರಿರ್ತಾರೆ ಅನ್ನೋದು… ಹೀಗೆಲ್ಲಾ ಮಾಡ್ತಾರೆ ಅಮ್ಮ. ಅಮ್ಮನ ಉಪದೇಶ ಕೇಳ್ತಾ ಇದ್ರೆ ತಲೆ ಚಿಟ್ಟು ಹಿಡಿಯುತ್ತೆ. ಒಂದಷ್ಟು ದಿನ ಅಮ್ಮನ ಫೋನ್‌ನ ಅವಾಯ್ಡ ಮಾಡ್ತೇನೆ. ಹೇಗಿದ್ರೂ ಅಮ್ಮನನ್ನು ನೋಡಿಕೊಳ್ಳಲು ಅಪ್ಪ ಇದ್ದಾರೆ. ಹಾಗಾಗಿ ಏನೂ ಸಮಸ್ಯೆಯಿಲ್ಲ. ಸ್ವಲ್ಪ ದಿನ ಮಗಳ ವಾಯ್ಸ ಕೇಳಲಿಲ್ಲ ಅಂದ್ರೆ ಅಮ್ಮ ಸಾಫ್ಟ್ ಆಗ್ತಾಳೆ. ಅಷ್ಟಾದ್ರೆ ಎಲ್ಲಾ ಸರಿ ಹೋಗುತ್ತೆ ಎಂದುಕೊಂಡಳು ಗೀತಾ. 

ಆನಂತರದಲ್ಲಿ, ಅಮ್ಮನ ಫೋನ್‌ಗಳನ್ನು ಅವಾಯ್ಡ ಮಾಡು ವುದು ಗೀತಾಗೆ ಅಭ್ಯಾಸವಾಗಿ ಹೋಯಿತು. ಕೆಲವೊಮ್ಮೆ, ಬ್ಯುಸಿ ಇದೀನಮ್ಮಾ, ರಾತ್ರಿಗೆ ನಾನೇ ಕಾಲ್‌ ಮಾಡ್ತೀನಿ ಎಂದು ಹೇಳಿ, ನಂತರ ಅದನ್ನು ಮರೆತುಬಿಡುತ್ತಿದ್ದಳು. ಈ ಮಧ್ಯೆ ಟ್ರೆಕ್ಕಿಂಗ್‌, ಫ್ರೆಂಡ್‌ ಮದುವೆ, ವೀಕೆಂಡ್‌ ಪಾರ್ಟಿ ಬಂದಿದ್ದರಿಂದ ಪೂರ್ತಿ ಎರಡು ತಿಂಗಳು ಊರಿಗೂ ಹೋಗಲಿಲ್ಲ. ಅದೊಮ್ಮೆ ಇವಳೇನೋ ಹೊರಟುನಿಂತಳು. ಆದರೆ ಕಡೇ ಕ್ಷಣದಲ್ಲಿ ಹೊಸದೊಂದು ಪ್ರಾಜೆಕ್ಟ್ ಬಂದದ್ದರಿಂದ ರಜೆಯೇ ಕ್ಯಾನ್ಸಲ್‌ ಆಯಿತು. ಈ ವೇಳೆಯಲ್ಲೇ ಅತಿಯಾದ ದುಡಿಮೆಯ ಕಾರಣಕ್ಕೆ ಗಂಟಲು- ಬೆನ್ನುನೋವು ಶುರುವಾಯಿತು. ಅದೊಂದು ಮಧ್ಯಾಹ್ನ ತಲೆ ನೋವು ಬಂದಿದ್ದರಿಂದ ರಜೆ ಹಾಕಿ ಪಿ.ಜಿಗೆ ಬಂದವಳು, ಮಲಗುವ ಮುನ್ನ ಮೊಬೈಲ್‌ ನೋಡಿ ಬೆಚ್ಚಿಬಿದ್ದಳು. ಕಾರಣ, ಅಪ್ಪನ ಮೊಬೈಲಿನಿಂದ 42 ಬಾರಿ ಮಿಸ್‌ಕಾಲ್‌ ಬಂದಿತ್ತು. ಮೊಬೈಲನ್ನು ಸೈಲೆಂಟ್‌ ಮೋಡ್‌ಗೆ ಇಟ್ಟಿದ್ದರಿಂದ ಹೀಗಾಗಿದೆ ಅಂದುಕೊಂಡಳು. ಆ ಕ್ಷಣದಿಂದಲೇ ಯಾಕೋ ಭಯವಾಗತೊಡಗಿತು. 42 ಬಾರಿ ಮಿಸ್‌ಕಾಲ್‌ ಬಂದಿದೆಯೆಂದರೆ, ಏನಾದ್ರೂ ಮಹತ್ವದ ಸುದ್ದಿ ಯಿರಬೇಕು. ಅಪ್ಪನಿಗೆ ಅಥವಾ ಅಮ್ಮನಿಗೆ ಏನಾದ್ರೂ ಅನಾಹುತ ವಾಯಿತಾ? ಅಂದುಕೊಂಡಳು. ಅವತ್ತು ರಾತ್ರಿ ಬರೀ ಕೆಟ್ಟ ಕನಸುಗಳೇ ಬಿದ್ದವು. ಮುಂಜಾನೆಯೇ ತೀರ್ಥಹಳ್ಳಿಯ ಬಸ್‌ ಹತ್ತಿದಳು ಗೀತಾ.

ಮನೆಗೆ ಬೀಗ ಹಾಕಿತ್ತು. ಎದುರು ಮನೆಯವರು- ನಿಮ್ಮಮ್ಮ ಆಸ್ಪತ್ರೆ ಸೇರಿ ಆಗಲೇ ನಾಲ್ಕು ದಿನವಾಯ್ತು. ಸೀರಿಯಸ್ಸಂತೆ. ಐಸಿಯೂಲಿ ಇದಾರಂತೆ…ಉಳಿದ ಮಾತನ್ನು ಕೇಳಿಸಿಕೊಳ್ಳದೇ ಒಂದೇ ಓಟಕ್ಕೆ ಆಸ್ಪತ್ರೆ ತಲುಪಿದ್ದಳು ಗೀತಾ. ಯಾವುದೋ ರಿಜಿಸ್ಟರ್‌ಗೆ ಸಹಿ ಮಾಡಿಸಿಕೊಂಡ ಡಾಕ್ಟರು ಹೇಳುತ್ತಿದ್ದರು: ಕಂಡೀಷನ್‌ ಕ್ರಿಟಿಕಲ್‌ ಆಗಿದೆ ರಾಯರೇ. ನಮ್ಮ ಪ್ರಯತ್ನ ನಾವು ಮಾಡ್ತೀವಿ. ಫ‌ಲಿತಾಂಶ ದೇವರಿಗೆ ಬಿಟ್ಟಿದ್ದು. ನೀವು ಎಲ್ಲದಕ್ಕೂ ರೆಡಿಯಾಗಿರಿ..ಗೀತಾ ಅಂದ್ರೆ ಯಾರು? ಮಗಳಾ? ಅವರನ್ನು ಮತ್ತೆ ಮತ್ತೆ ನೆನಪಿಸಿಕೊಳ್ತಾನೇ ಕೋಮಾಕ್ಕೆ ಹೋಗಿಬಿಟ್ಟಿದ್ದಾರೆ. ಲೋ ಬಿಪಿ ಕಂಟ್ರೋಲ್‌ಗೆ ಬರಿ¤ಲ್ಲ…’

“ಅಪ್ಪ, ಅಪ್ಪ, ಅಪ್ಪ, ಅಪ್ಪಾ..ಏನಾಗೋಯ್ತಪ್ಪ ಅಮ್ಮನಿಗೆ? ಯಾಕಪ್ಪಾ ನನಗೆ ಹೇಳಲಿಲ್ಲ?’ ಬಿಕ್ಕಳಿಸುತ್ತಲೇ ಕೇಳಿದಳು ಗೀತಾ. ರಾಯರು, ನೋವಿನಿಂದ ಹೇಳಿದರು: ಮಗಳು ಶಿಸ್ತು ಕಲಿಯಲಿ. ಮದುವೆಯಾಗಿ ಒಳ್ಳೇ ಫ್ಯಾಮಿಲಿ ಸೇರಲಿ ಅಂತ ಎಲ್ಲ ಅಮ್ಮಂದಿರೂ ಬಯಸ್ತಾರೆ. ನಿಮ್ಮಮ್ಮ ಮಾಡಿದ್ದೂ ಅದನ್ನೇ. ಆದರೆ ಅದನ್ನೆಲ್ಲ ನೀನು ನೆಗೆಟಿವ್‌ ಆಗಿ ತಗೊಂಡೆ. ಹೆಣ್ಣುಮಕ್ಕಳಿಗೆ ಯಾವತ್ತೂ ಹಠ ಮತ್ತು ಅಹಂಕಾರ ಬರಬಾರದು. ನಿನಗೆ ಈ ಗುಣ ಜಾಸ್ತೀನೇ ಬಂದುಬಿಡು¤. ಪಾಪ, ನಿಮ್ಮಮ್ಮ ನಿನ್ನ ಬಗ್ಗೆ ಯೋಚನೆ ಮಾಡಿ ಮಾಡಿ ಹಾಸಿಗೆ ಹಿಡಿದುಬಿಟುÛ. ನಾವು ದಿನಾಲೂ ಫೋನ್‌ ಮಾಡ್ತಾನೇ ಇದ್ವಿ. ಆದ್ರೆ ನೀನು ಪಿಕ್‌ ಮಾಡ್ತಾ ಇರಲಿಲ್ಲ…

ರಾಯರು ಇನ್ನೂ ಹೇಳುವವರಿದ್ದರು. ಅಷ್ಟರಲ್ಲಿ ಹೆಡ್‌ನ‌ರ್ಸ್‌ ಹಾಗೂ ಡಾಕ್ಟರ್‌ ಧಾವಿಸಿ ಬಂದು ರಾಯರ ಕೈ ಹಿಡಿದು
ಕೊಂಡು ಹೇಳಿದರು: ಸಾರಿ.. ದೇವರು ನಿಮಗೆ ಮೋಸ ಮಾಡಿಬಿಟ್ಟ…’ 

ಯೆಸ್‌, ಅಮ್ಮನ ವಿರುದ್ಧ ನಾನು ಹಠ ಸಾಧಿಸಿದ್ದು ನಿಜ. ಅಮ್ಮನನ್ನು ತುಂಬಾ ಸಲ ಅವಾಯ್ಡ ಮಾಡಿದ್ದು, ದ್ವೇಷಿಸಿದ್ದು ನಿಜ. ನನ್ನ ಈ ದುಡುಕಿನಿಂದ ಎಷ್ಟೊಂದು ದೊಡ್ಡ ಲಾಸ್‌ ಆಗೋಯ್ತು…ಈ ಕ್ಷಣದಿಂದಲೇ ನಾನೂ, ಅಪ್ಪನೂ ತಬ್ಬಲಿ ಆಗಿಬಿಟ್ವಿ. ನಾನು ಎಷ್ಟೇ ದುಡಿದ್ರೂ, ಸಂಪಾದನೆ ಮಾಡಿದ್ರೂ ಅಮ್ಮ ಕೊಡ್ತಿದ್ದ ರಕ್ಷಣೆ ಹಾಗೂ ಸಮಾಧಾನವನ್ನು ಕೊಡಲು ಸಾಧ್ಯವೇ ಇಲ್ಲ. ಅಪ್ಪ, ಅಮ್ಮನ ನೆನಪಲ್ಲೇ ಕೊರಗಿ, ಕರಗಿ ಹೋಗ್ತಾರೆ. ಉಹುಂ, ಹಾಗಾಗಲು ಬಿಡಬಾರ್ಧು. ಇನ್ಮುಂದೆ ಅಪ್ಪನಲ್ಲೇ ಅಮ್ಮನನ್ನು ಕಾಣೆºàಕು. ಅಪ್ಪನನ್ನು ಚೆನ್ನಾಗಿ ನೋಡ್ಕೊಬೇಕು…

ಹೀಗೆಲ್ಲಾ ಯೋಚಿಸಿದ ಗೀತಾ- “ಅಪ್ಪಾ…ಅಮ್ಮ ಇಲ್ಲ ಅಂದೊRಂಡ್ರೆ ತುಂಬಾ ಭಯ ಆಗುತ್ತೆ. ಅಳು ಬರುತ್ತೆ. ಸತ್ತು ಹೋಗ್ಬೇಕು ಅನ್ಸುತ್ತೆ. ಇನ್ಮೆಲೆ ನೀನೇ ನನಗೆ ಅಮ್ಮ. ಇನ್ಯಾವತ್ತೂ ನಾನು ತಪ್ಪು ಮಾಡಲ್ಲ. ತಿರುಗಿ ಮಾತಾಡಲ್ಲ. ನನ್ನನ್ನು ಕ್ಷಮಿಸ್ತೀಯ ಅಲ್ವೇನಪ್ಪ..ಅಮ್ಮಾ..’ ಅಂದಳು.
ರಾಯರು ಏನೂ ಮಾತಾಡಲಿಲ್ಲ. ಮಗಳ ಕೈ ಹಿಡಿದು ಹೆಜ್ಜೆ ಮುಂದಿಟ್ಟರು.

ಎ.ಆರ್‌. ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next