Advertisement

ಡೆಲ್ಲಿ ಓಟಕ್ಕೆ ಗುಜರಾತ್‌ ಬ್ರೇಕ್‌

02:51 AM Aug 02, 2019 | Sriram |

ಮುಂಬಯಿ: ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ ದೈತ್ಯ ಶಕ್ತಿಯಾಗಿ ಬೆಳೆಯುತ್ತಿದ್ದ ದಬಾಂಗ್‌ ಡೆಲ್ಲಿ ಮೇಲೆ ಸವಾರಿ ಮಾಡಿದ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ 31-26 ಅಂತರದಿಂದ ಗೆಲುವು ಸಾಧಿಸಿದೆ. ಹ್ಯಾಟ್ರಿಕ್‌ ಜಯಭೇರಿ ಬಾರಿಸಿ ಮುನ್ನಡೆದಿದೆ. ಇದು ಈ ಕೂಟದಲ್ಲಿ ದಬಾಂಗ್‌ ಡೆಲ್ಲಿಗೆ ಎದುರಾದ ಮೊದಲ ಆಘಾತ.

Advertisement

ಗುರುವಾರ ಮುಂಬಯಿ ಚರಣದ ಪಂದ್ಯದಲ್ಲಿ ಗುಜರಾತ್‌ ಆಟಗಾರರು ಮಿಂಚಿನ ಆಟವಾಡಿದರು. ಇದಕ್ಕುತ್ತರವಾಗಿ ದಬಾಂಗ್‌ ಡೆಲ್ಲಿಯೂ ತೀವ್ರ ಹೋರಾಟ ಪ್ರದರ್ಶಿಸಿತು. ಆದರೆ ರಕ್ಷಣಾ ವಿಭಾಗದಲ್ಲಿ ಭಾರೀ ವೈಫ‌ಲ್ಯ ಅನುಭವಿಸಿದ ಡೆಲ್ಲಿಗೆ ಹಿನ್ನಡೆಯಾಯಿತು.

ಹ್ಯಾಟ್ರಿಕ್‌ ಬಳಿಕ ಡೆಲ್ಲಿಗೆ ಕಹಿ
ದಬಾಂಗ್‌ ಡೆಲ್ಲಿ ಕೂಟದ ಆರಂಭ ದಿಂದಲೂ ಉತ್ತಮ ಪ್ರದರ್ಶನ ನೀಡು ತ್ತ ಬಂದಿತ್ತು. ಎಲ್ಲ ಪಂದ್ಯದಲ್ಲೂ ಜಯ ಗಳಿಸಿ ಅಜೇಯವಾಗಿತ್ತು. ಸತತ ಮೂರು ಗೆಲುವು ಡೆಲ್ಲಿಗೆ ಭಾರೀ ಆತ್ಮವಿಶ್ವಾಸ ತಂದುಕೊಟ್ಟಿತ್ತು. ಆದರೆ ಗುಜರಾತ್‌ ವಿರುದ್ಧದ ಪಂದ್ಯದಲ್ಲಿ ಡೆಲ್ಲಿಯ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾದವು.

ಡೆಲ್ಲಿ ಪರ ನವೀನ್‌ ಕುಮಾರ್‌ ರೈಡಿಂಗ್‌ನಲ್ಲಿ 10 ಅಂಕವನ್ನು ತಂದುಕೊಟ್ಟು ಶ್ರೇಷ್ಠ ರೈಡರ್‌ ಎನಿಸಿಕೊಂಡರು. ಉಳಿದಂತೆ ಚಂದ್ರನ್‌ ರಂಜಿತ್‌ (5 ಅಂಕ) ಆಲ್ರೌಂಡರ್‌ ಆಟ ಪ್ರದರ್ಶಿಸಿದರು.

ತಾರಾ ಆಟಗಾರ ಮೆರಾಜ್‌ ಶೇಖ್‌ ಅನುಪಸ್ಥಿತಿಯಲ್ಲಿ ಕಣಕ್ಕೆ ಇಳಿದ ಡೆಲ್ಲಿ ಜೋಶ್‌ ಮರೆತು ಆಡಿತು. ಅದರಲ್ಲೂ ರಕ್ಷಣಾ ವಿಭಾಗದಲ್ಲಿ ರವೀಂದರ್‌ ಪಾಹಲ್ (2 ಅಂಕ), ಜೋಗಿಂದರ್‌ ನರ್ವಾಲ್ (2 ಅಂಕ) ಹಾಗೂ ವಿಶಾಲ್ ಮಾನೆ (1 ಅಂಕ) ಸಂಪೂರ್ಣ ವೈಫ‌ಲ್ಯ ಅನುಭವಿಸಿದ್ದು ದೊಡ್ಡ ಹೊಡೆತವಾಗಿ ಪರಿಣಮಿಸಿತು.

Advertisement

ಗುಜರಾತ್‌ ಜಯದ ಓಟ
ಗುಜರಾತ್‌ ಹ್ಯಾಟ್ರಿಕ್‌ ಜಯ ದೊಂದಿಗೆ ನಾಗಾಲೋಟ ಮುಂದು ವರಿಸಿದೆ. ಜಿ.ಬಿ. ಮೋರೆ (9 ಅಂಕ) ಹಾಗೂ ರೋಹಿತ್‌ ಗುಲಿಯಾ (8 ಅಂಕ) ಆಲ್ರೌಂಡರ್‌ ಸಾಹಸ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ರೈಡಿಂಗ್‌ನಲ್ಲಿ ಸಚಿನ್‌ 4 ಅಂಕ ತಂದರು. ಆದರೆ ಡಿಫೆಂಡರ್‌ಗಳಾದ ಪರ್ವೇಶ್‌ (2 ಅಂಕ) ಹಾಗೂ ಸುನಿಲ್ ಕುಮಾರ್‌ (1 ಅಂಕ) ಕ್ಲಿಕ್‌ ಆಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next