Advertisement

ಹಸನ್ಮಾಳದ ಗೌಳಿವಾಡದಲ್ಲಿ ಸಂಭ್ರಮದಿಂದ ಜರುಗಿದ ದನಗರ ಗೌಳಿಗರ ಶಿಲಾಂಗಣ

05:41 PM Nov 07, 2021 | Team Udayavani |

ದಾಂಡೇಲಿ:  ಹಿಂದು ಧರ್ಮದ ಹಬ್ಬ ಹರಿದಿನಗಳನ್ನು ತಮ್ಮದೇ ಆದ ಸಂಸ್ಕೃತಿಯಡಿಯಲ್ಲಿ ಆಚರಿಸಿಕೊಂಡು ನಾಡಿನ ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ದನಗರ ಗೌಳಿ ಸಮುದಾಯವು ದೀಪಾವಳಿ ಹಬ್ಬದ ನಿಮಿತ್ತ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುವುದನ್ನು ರೂಢಿ ಮಾಡಿಕೊಂಡಿದೆ.

Advertisement

ಅಂತೆಯೆ ನಗರದ ಸಮೀಪದಲ್ಲಿರುವ ಹಸನ್ಮಾಳದ ಗೌಳಿವಾಡದಲ್ಲಿ ವಾಡದಲ್ಲಿರುವ ಎಲ್ಲ ಗೌಳಿ ಸಮುದಾಯವರು ಸೇರಿ ಸಾಮೂಹಿಕವಾಗಿ ಶಿಲಾಂಗಣ ಕಾರ್ಯಕ್ರಮವನ್ನು ಶುಕ್ರವಾರದಿಂದ ಆರಂಭಿಸಿ ಭಾನುವಾರ ಸಂಪನ್ನಗೊಳಿಸಿದರು. ಈ ಕಾರ್ಯಕ್ರಮದಲ್ಲಿ ದನಗರ ಗೌಳಿ ಸಮುದಾಯದವರ ಬುಡಕಟ್ಟು ಸಂಸ್ಕತಿಯ ನೃತ್ಯಗಳು ಎಲ್ಲರ ಗಮನ ಸೆಳೆದವು. ತಮ್ಮದೇ ವಿಶಿಷ್ಟ ಸಂಸ್ಕೃತಿಯ ಉಡುಗೆಯನ್ನು ತೊಟ್ಟು ನೃತ್ಯ ಹಾಗೂ ವಿವಿಧ ಧಾರ್ಮಿಕ ಮೌಲ್ಯಗಳನ್ನು ಜನಮಾನಸಕ್ಕೆ ಪರಿಚಯಿಸುವ ಕಾರ್ಯಕ್ರಮಗಳು ಜನಾಕರ್ಷಣೆಗೆ ಪಾತ್ರವಾಯಿತು.

ದನಗರ ಗೌಳಿ ಸಮುದಾಯದ ವಿಶಿಷ್ಟ ರೀತಿಯ ಶಿಲಾಂಗಣ ಕಾರ್ಯಕ್ರಮವನ್ನು ನೋಡಲು ಸುತ್ತಮುತ್ತಲಿನ ಜನರು ಆಗಮಿಸಿದ್ದರು. ಈ ಪೂಜಾ ಕಾರ್ಯಕ್ರಮದ ನಿಮಿತ್ತ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಯಶಸ್ಸಿಗೆ ದನಗರ ಗೌಳಿ ಸಮುದಾಯದ ಬಾಂಧವರು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next