“ಎಲ್ಲ ಅಂದುಕೊಂಡಂತೆ ಆಗಿದ್ದರೆ,ಈತಿಂಗಳಲ್ಲಿ ನನ್ನ ಒಂದು ಸಿನಿಮಾವಾದ್ರೂ ರಿಲೀಸ್ ಆಗಬೇಕಿತ್ತು. ಆದ್ರೆ ಇನ್ನೂ ಥಿಯೇಟರ್‌ಗಳಲ್ಲಿ 100% ಆಡಿಯನ್ಸ್ ಎಂಟ್ರಿಗೆ ಅವಕಾಶವಿಲ್ಲದಿರುವುದರಿಂದ, ರಿಲೀಸ್‌ಗೆ ರೆಡಿಯಾಗಿರುವ ಸಿನಿಮಾಗಳೂ ಮುಂದಕ್ಕೆ ಹೋಗುತ್ತಿವೆ. ಆದಷ್ಟು ಬೇಗ ಥಿಯೇಟರ್‌ಗಳಲ್ಲಿ ಮೊದಲಿನಂತೆ 100% ಆಡಿಯನ್ಸ್ ಎಂಟ್ರಿಯಾದರೆ, ಸಿನಿಮಾ ರಿಲೀಸ್ ಮಾಡೋದಕ್ಕೆ ಎಲ್ಲರಿಗೂ ಕ್ಲಾರಿಟಿ ಸಿಗುತ್ತದೆ’ ಇದು ನಟ ಡಾಲಿ ಧನಂಜಯ್ ಮಾತು.
ಅಂದ ಹಾಗೆ, ಧನಂಜಯ್ ಇಂಥದ್ದೊಂದು ಮಾತಾಡೋಕೆ ಕಾರಣ ಸದ್ಯ ಬಿಡುಗಡೆಗೆ ರೆಡಿಯಾಗಿರುವ ಅವರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು.
ಇದನ್ನೂ ಓದಿ:ಡಾಲಿಯ “ಹೆಡ್ ಆ್ಯಂಡ್ ಬುಷ್’ ಟೀಮ್ ಗೆ ರಘು ಮುಖರ್ಜಿ ಎಂಟ್ರಿ
ಹೌದು, ಧನಂಜಯ್ ಅಭಿನಯದ “ಸಲಗ’, “ಬಡವ ರಾಸ್ಕಲ್’, “ರತ್ನನ್ ಪ್ರಪಂಚ’ ಹೀಗೆ ಒಂದರ ಹಿಂದೊಂದು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದ್ದರೂ, ಥಿಯೇಟರ್‌ನಲ್ಲಿ 100% ಪ್ರವೇಶಾತಿಗೆ ಅನುಮತಿ ಸಿಗದೆ ಕಾರಣ ಈ ಎಲ್ಲ ಸಿನಿಮಾಗಳು ತಮ್ಮ ಬಿಡುಗಡೆಯನ್ನು ಮುಂದೂಡುವಂತಾಗಿದೆ.
“ಇದಕ್ಕೆಲ್ಲ ಉತ್ತರ ಸಿಗಬೇಕು ಅಂದ್ರೆ, ಮೊದಲು ಥಿಯೇಟರ್ ಗಳಲ್ಲಿ100% ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ಸಿಗಬೇಕು’ ಎನ್ನುವುದು ಧನಂಜಯ್ ಮಾತು.
“ಇದು ಕೇವಲ ನನ್ನ ಸಿನಿಮಾಕ್ಕೆ ಸಂಬಂಧಿಸಿದ ಸಮಸ್ಯೆಯಲ್ಲ. ನೂರಾರು ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿದ್ದು, ಅದರಲ್ಲಿ ಬಹುತೇಕ ಸಿನಿಮಾಗಳು ಯಾವಾಗ ಥಿಯೇಟರ್‌ಗಳಲ್ಲಿ 100% ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿವೆ. ಆದಷ್ಟು ಬೇಗ ಸರ್ಕಾರ ಈ ಬಗ್ಗೆ ನಿರ್ಧಾರ ತೆಗೆದು ಕೊಂಡರೆ, ಚಿತ್ರರಂಗದಲ್ಲಿ ಎಲ್ಲರಿಗೂ ಅನುಕೂಲವಾಗುತ್ತದೆ’ ಎನ್ನುತ್ತಾರೆ ಧನಂಜಯ್.