Advertisement

DKS: ಆದಾಯ ಮೀರಿ ಆಸ್ತಿ ಗಳಿಕೆ ಕೇಸ್:‌ ಡಿಕೆಶಿ ಮೇಲ್ಮನವಿ ವಾಪಸ್‌ ಗೆ ಹೈಕೋರ್ಟ್‌ ಅನುಮತಿ

03:00 PM Nov 29, 2023 | Team Udayavani |

ಬೆಂಗಳೂರು:ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ ತನಿಖೆಗೆ ನೀಡಿದ್ದ  ಹಿಂದಿನ ಬಿಜೆಪಿ ಸರ್ಕಾರದ ಆದೇಶವನ್ನು ರದ್ದುಪಡಿಸಬೇಕೆಂದು ಕೋರಿ ಡಿಕೆಶಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್‌, ಮೇಲ್ಮನವಿ ಹಾಗೂ ರಿಟ್‌ ಅರ್ಜಿ ವಾಪಸ್‌ ಪಡೆಯಲು ಅನುಮತಿ ನೀಡುವ ಮೂಲಕ ಡಿಕೆಶಿಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಂತಾಗಿದೆ.

Advertisement

ಇದನ್ನೂ ಓದಿ:HDK: ಭ್ರೂಣಹತ್ಯೆ‌ ಪ್ರಕರಣ… ಆಡಳಿತ ವ್ಯವಸ್ಥೆಯ ವೈಫಲ್ಯವೂ ಎದ್ದು ಕಾಣುತ್ತಿದೆ: ಹೆಚ್ ಡಿಕೆ

ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಅನುಮತಿ ನೀಡಿದ್ದ ಹಿಂದಿನ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಹಾಗೂ ರಿಟ್‌ ಅನ್ನು ಡಿಕೆಶಿ ವಾಪಸ್‌ ಪಡೆದಿದ್ದಾರೆ.‌  ಏತನ್ಮಧ್ಯೆ ಸಿಬಿಐ ತನಿಖೆ ಅನುಮತಿ ವಾಪಸ್‌ ಪಡೆದ ಈಗಿನ ಸರ್ಕಾರದ ಕ್ರಮ ಆಕ್ಷೇಪಿಸಿ ಯತ್ನಾಳ್‌ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಪರಿಗಣಿಸಿಲ್ಲ.

ಇದೇ ವೇಳೆ ಸಿಬಿಐ ಅನುಮತಿ ಹಿಂಪಡೆದ ಸಚಿವ ಸಂಪುಟದ ನಿರ್ಧಾರವನ್ನು ಯಾರೂ ಬೇಕಾದರೂ ಕೋರ್ಟ್‌ ನಲ್ಲಿ ಪ್ರಶ್ನಿಸುವ ಮುಕ್ತ ಅವಕಾಶ ನೀಡಿದ ನ್ಯಾಯಪೀಠ ಮೇನ್ಮನವಿ ವಿಲೇವಾರಿ ಮಾಡಿತು.

ಹೈಕೋರ್ಟ್‌ ತೀರ್ಪಿನಲ್ಲೇನಿದೆ?

Advertisement

ಸರ್ಕಾರದಲ್ಲಿನ ಮೆಮೋದಲ್ಲಿನ ಅಂಶಗಳನ್ನು ಬರೆಯಿಸುತ್ತಿರುವ ಹೈಕೋರ್ಟ್‌ ಸಿಜೆ. ಸಿಬಿಐ ತನಿಖೆಗೆ ಹಿಂದೆ ನೀಡಿದ್ದ ಒಪ್ಪಿಗೆ ಹಿಂಪಡೆದಿದೆ. ಯತ್ನಾಳ್‌ ಈ ಕೇಸ್‌ ನಲ್ಲಿ ಪ್ರತಿವಾದಿಯಾಗಲು ಬಯಸಿಲ್ಲ. ಮಾಧ್ಯಮ ವರದಿ ಆಧರಿಸಿ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಇಲ್ಲಿಯವರೆಗೂ ಸರ್ಕಾರದ ಕ್ರಮವನ್ನು ಯಾರೂ ಪ್ರಶ್ನಿಸಿಲ್ಲ. ಸಿಬಿಐ, ಯತ್ನಾಳ್‌ ವಾದವನ್ನು ನಾವು ಒಪ್ಪಲು ಸಾಧ್ಯವಿಲ್ಲ. ಕಾಜಿ ಲೆಂಡಪ್‌ ದೋರ್ಜಿ ಕೇಸ್‌ ನಲ್ಲಿ ಸರ್ಕಾರದ ಕ್ರಮ ಪ್ರಶ್ನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮೇಲ್ಮನವಿ ವಾಪಸ್‌ ಗೆ ಅನುಮತಿ ನೀಡುವುದಾಗಿ ಹೈಕೋರ್ಟ್‌ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಪ್ರಕರಣದ ಅರ್ಹತೆ ಬಗ್ಗೆ ಯಾವುದೇ ತೀರ್ಪು ನೀಡುತ್ತಿಲ್ಲ. ಆದರೆ ಅರ್ಜಿದಾರರಿಗೆ ಮೇಲ್ಮನವಿ ಹಿಂಪಡೆಯಲು ಅವಕಾಶವಿದೆ ಎಂದು ಗುರುದೇವ್‌ ಸಿಂಗ್‌ ವರ್ಸಸ್‌ ಪಂಜಾಬ್‌ ಸರ್ಕಾರದ ಪ್ರಕರಣ ಉಲ್ಲೇಖಿಸಿ ಹೈಕೋರ್ಟ್‌ ಆದೇಶ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next