Advertisement

ಡಿ.09: ಏಕಕಾಲದಲ್ಲಿ ಎರಡು ಕಡೆ ಶ್ರೀಮಹಾಲಿಂಗೇಶ್ವರ ಮಂಡಳಿಯ ಯಕ್ಷಗಾನ ಪ್ರದರ್ಶನ

02:19 PM Dec 09, 2021 | Team Udayavani |

ಉಡುಪಿ: ಶ್ರೀಮಹಾಲಿಂಗೇಶ್ವರ ಯಕ್ಷಗಾನ ಕಲಾ ಮಂಡಳಿ(ರಿ)ಯ 35ನೇ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಗುರುವಾರ(ಡಿಸೆಂಬರ್ 9) ಒಂದೇ ದಿನ ಏಕಕಾಲದಲ್ಲಿ ಎರಡು ಕಡೆ ಮಂಡಳಿಯ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Advertisement

ಇದನ್ನೂ ಓದಿ:ಸಿಡಿಎಸ್ ರಾವತ್ ಹೆಲಿಕಾಪ್ಟರ್ ಪತನ; Black Box ಪತ್ತೆ, ಬಯಲಾಗಲಿದೆಯೇ ಪತನದ ನಿಗೂಢ ಕಾರಣ…

ಶ್ರೀಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯಿಂದ ಇಂದು ಸಂಜೆ 5.30ರಿಂದ ಮುಚ್ಚಿಲ್ ಕೋಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದ್ರುಪದ ಗರ್ವಭಂಗ ಯಕ್ಷಗಾನ ಪ್ರಸಂಗ ನಡೆಯಲಿದೆ.

ಹಾಗೆಯೇ ಸಂಜೆ 5.30ಕ್ಕೆ ಬಡಗುಪೇಟೆ ಶ್ರೀವಾಸುಕಿ ಅನಂತಪದ್ಮನಾಭ ದೇವಸ್ಥಾನದಲ್ಲಿ ಬೇಡರ ಕಣ್ಣಪ್ಪ ಯಕ್ಷಗಾನ ಪ್ರದರ್ಶನಗೊಳ್ಳಲಿದ್ದು, ಅತಿಥಿ ಭಾಗವತರಾಗಿ ಜಿ.ರಾಘವೇಂದ್ರ ಮಯ್ಯ ಪಾಲ್ಗೊಳ್ಳಲಿದ್ದಾರೆ. ಮಂಡಳಿಯ ಎರಡು ಕಡೆಯ ಯಕ್ಷಗಾನ ಪ್ರದರ್ಶನಕ್ಕೆ ಸರ್ವರಿಗೂ ಆದರದ ಸ್ವಾಗತ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next