Advertisement

ಅನಾವಶ್ಯಕವಾಗಿ ಕೋರ್ಟ್ ಗೆ ಹೋಗಿ ಮತ್ತಷ್ಟು ಗೋಜಲಾಗಿಸುವುದು ಒಳ್ಳೆಯದಲ್ಲ: ಸದಾನಂದ ಗೌಡ

12:07 PM Mar 06, 2021 | Team Udayavani |

ಬೆಂಗಳೂರು: ಅನಾವಶ್ಯಕವಾಗಿ ಕೋರ್ಟ್ ಗೆ ಹೋಗಿ ಮತ್ತಷ್ಟು ಗೋಜಲಾಗಿಸುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧ ಯಾವುದೇ ಆಕ್ಷೇಪಾರ್ಹ ಸುದ್ದಿಗಳನ್ನು ಪ್ರಸಾರ ಮಾಡದಿರುವಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕೆಂದು ರಾಜ್ಯದ ಆರು ಸಚಿವರು ಕೋರ್ಟ್ ಮೊರೆ ಹೋಗಿರುವ ವಿಚಾರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ವಾಭಾವಿಕವಾಗಿ ಇಂತಹ ಆರೋಪ ಬಂದಾಗ ತನಿಖೆಗೆ ಮಂತ್ರಿಗಳು ಸಹಕಾರ ನೀಡಬೇಕು. ವೈಯಕ್ತಿಕವಾಗಿ ಹಲವಾರು ಜನ ಅವರ ಭಾವನೆಗಳನ್ನು ಕೋರ್ಟ್ ನಲ್ಲಿ ವ್ಯಕ್ತಪಡಿಸಬಾರದು ಎಂದು ನಾವು ಮಧ್ಯಪ್ರವೇಶ ಮಾಡಲಾಗದು. ಪ್ರತಿಯೊಬ್ಬ ವ್ಯಕ್ತಿಗೆ ಕೂಡಾ ತನ್ನ ಭವಿಷ್ಯದ ಯೋಚನೆ ಇರುತ್ತದೆ, ಅದನ್ನು ನೋಡಿಕೊಂಡು ಅವರು ಹೆಜ್ಜೆ ಇಡುತ್ತಾರೆ. ಅದು ಅವರವರಿಗೆ ಬಿಟ್ಟ ವಿಚಾರ ಆದರೆ ಅನಾವಶ್ಯಕವಾಗಿ ಕೋರ್ಟ್ ಗೆ ಹೋಗುವುದು ಒಳ್ಳೆಯದಲ್ಲ ಎಂದರು.

ಇದನ್ನೂ ಓದಿ:ನಾವಷ್ಟೇ ಅಲ್ಲಾ, ಇನ್ನೂ ಐದಾರು ಮಂದಿ ನ್ಯಾಯಾಲಯಕ್ಕೆ ಹೋಗುತ್ತಾರೆ: ಸಚಿವ ಸುಧಾಕರ್

ಸಿಡಿ ವಿಚಾರ ಸ್ವಲ್ಪ ಮಟ್ಟಿಗೆ ಮುಜುಗರ ಮಾಡಿರುವುದು ಹೌದು. ರಾಜಕೀಯ ಡೊಂಬರಾಟದಲ್ಲಿ ಸಿಡಿಗಳು ತನ್ನದೇ ಪ್ರಭಾವ ಬೀರುವುದನ್ನು ನೋಡುತ್ತಿದ್ದೇವೆ. ಟೆಕ್ನಾಲಜಿ ಎಷ್ಟು ಮುಂದುವರಿದಿದೆ ಅಂದರೆ ಏನು ಬೇಕಾದರೂ ತಿರುಚಬಹುದು. ಹಾಗಂತ ಆಗಿದ್ದೆಲ್ಲವೂ ತಿರುಚಿದ್ದೆಂದು ಹೇಳುತ್ತಿಲ್ಲ, ತನಿಖೆ ತನ್ನದೇ ಕಾರ್ಯ ಮಾಡುತ್ತದೆ ಎಂದರು.

Advertisement

ನೈತಿಕತೆಗೆ ಪ್ರಾಮುಖ್ಯತೆ ಕೊಡುವುದು ನಮ್ಮೆಲ್ಲರ ಜವಾಬ್ದಾರಿ. ನೈತಿಕತೆಗೆ ತೊಂದರೆ ಬಂದಾಗ ಸಾಮಾಜಿಕ ವ್ಯವಸ್ಥೆ ಕೂಡಾ ಅಧಃಪತನದ ಅಂಚಿಗೆ ಹೋಗುತ್ತದೆ. ಇಂತಹ ವಿಚಾರ ಬಂದಾಗ ರಾಜಕೀಯ ಲಾಭ ಪಡೆಯುವುದರಿಂದ ಒಳ್ಳೆಯದಾಗುವುದಿಲ್ಲ. ಆಡಳಿತಕ್ಕೂ ಇದು ತೊಂದರೆ ಆಗುತ್ತದೆ ಎಂದು ಡಿವಿಎಸ್ ಹೇಳಿದರು.

ಇದನ್ನೂ ಓದಿ: ರಾಜಕೀಯ ಷಡ್ಯಂತ್ರ ನಡೆಯುತ್ತಿದೆ, ಅದಕ್ಕಾಗಿ ಕೋರ್ಟ್ ಮೊರೆ ಹೋಗಿದ್ದೇವೆ: ಸಚಿವ ಸುಧಾಕರ್

ಜಾರಕಿಹೊಳಿ ವಿಚಾರದಲ್ಲಿ ಕೇಂದ್ರದವರು ನಮ್ಮಲ್ಲಿ ಕೇಳಿದ್ದರು. ಅಂದು ರಾತ್ರಿ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ನಮ್ಮಲ್ಲಿ ಮಾಹಿತಿ ಕೇಳಿದ್ದರು. ಮಾಧ್ಯಮ ವರದಿ ಆಧಾರಿತವಾಗಿ ನಾವು ವರದಿ ಕೊಟ್ಟಿದ್ದೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next