Advertisement

ಕೋವಿಡ್ ಮಹಾಮಾರಿಗೆ ತುಮಕೂರು ಜಿಲ್ಲಾ ವಾರ್ತಾಧಿಕಾರಿ ಡಿ.ಮಂಜುನಾಥ್ ಬಲಿ

11:19 AM May 09, 2021 | Team Udayavani |

ತುಮಕೂರು: ಕಲ್ಪತರು ನಾಡಿನಲ್ಲಿ ಕೋವಿಡ್ ಅಟ್ಟಹಾಸ ಹೆಚ್ಚಳವಾಗುತ್ತಿದ್ದು ಭಾನುವಾರ ಇಲ್ಲಿಯ ವಾರ್ತಾ ಇಲಾಖೆಯ ಹಿರಿಯ ಸಹಾಯಕ  ನಿರ್ದೇಶಕ  ಡಿ.ಮಂಜುನಾಥ್ (40) ಮೃತಪಟ್ಟಿದ್ದಾರೆ.

Advertisement

ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಜಿಲ್ಲಾಡಳಿತದಿಂದ  ನಡೆಯುವ ಎಲ್ಲ ಸಭೆಗಳಲ್ಲಿ ಭಾಗವಹಿಸಿ ಮಾಧ್ಯಮಗಳಿಗೆ ಸಕಾಲದಲ್ಲಿ ಸುದ್ದಿ ನೀಡುತ್ತಾ ಪತ್ರಕರ್ತರ ನಡುವೆ  ಸ್ನೇಹ ಜೀವಿಯಾಗಿದ್ದ ಮಂಜುನಾಧ್ ಅವರಿಗೆ ಕಳೆದ ಒಂದು ವಾರದ ಹಿಂದೆ ಜ್ವರ ಕಾಣಿಸಿಕೊಂಡು ನಂತರ  ಕೋವಿಡ್ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನಲ್ಲಿ ಅವರ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು.

ತೀವ್ರ ಉಸಿರಾಟ ಸಮಸ್ಯೆಯಾದಾಗ ಸಮೀಪದ ಛಾಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು ನಂತರ  ಕೊಲಂಬಿಯಾ ಏಷಿಯ ಆಸ್ಪತ್ರೆಲ್ಲಿ  ಚಿಕಿತ್ಸೆ ಪಡೆಯುವಾಗ  ಚಿಕಿತ್ಸೆ ಫಲಿಸದೆ ಭಾನುವಾರ ಸಾವನ್ನಪ್ಪಿದ್ದಾರೆ.

ಪತ್ರಕರ್ತರ ಸಂಘದಿಂದ  ಸಂತಾಪ : ತುಮಕೂರು ಜಿಲ್ಲಾ ವಾರ್ತಾ ಇಲಾಖೆ ಅಧಿಕಾರಿ ಡಿ.ಮಂಜುನಾಥ್ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಸಂಘದ ಅಧ್ಯಕ್ಷ  ಚಿ.ನಿ.ಪುರುಷೋತ್ತಮ್ ಮತ್ತು ಪದಾಧಿಕಾರಿಗಳು ಜಿಲ್ಲೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಸಂತಾಪ  ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next