Advertisement
ಸಿಆರ್‌ಝಡ್‌ನಲ್ಲಿ ಮರಳು ದಿಬ್ಬಗಳ ಸಮೀಕ್ಷೆ ನಡೆದು ವರದಿ ಸಿದ್ಧವಾಗಿದೆ. ಅದನ್ನು ತಾಂತ್ರಿಕ ವರದಿಗಾಗಿ ಎನ್‌ಐಟಿಕೆಗೆ ಕಳುಹಿಸಿ ಕೊಡಲಾಗಿದೆ. ಅದು ಒಂದೆರಡು ದಿನಗಳಲ್ಲಿ ಜಿಲ್ಲಾಧಿ ಕಾರಿ ಅಧ್ಯ ಕ್ಷತೆಯ ಜಿಲ್ಲಾ ಮರಳು ಉಸ್ತುವಾರಿ ಸಮಿತಿಗೆ ಸಲ್ಲಿಕೆಯಾಗಲಿದೆ. ಸಮಿತಿಯು ಅದರ ಪರಿ ಶೀಲನೆ ನಡೆಸಿ ಕರ್ನಾಟಕ ಕರಾವಳಿ ವಲಯ ನಿರ್ವಹಣೆ ಸಮಿತಿ (ಕೆಸಿಝಡ್‌ಎಂ)ಗೆ ಅನುಮೋದನೆಗಾಗಿ ರವಾನಿಸಲಿದೆ. ಕೆಸಿಝಡ್‌ಎಂ ಸಭೆ 3 ತಿಂಗಳುಗಳಿಗೆ ಒಮ್ಮೆ ನಡೆಯುತ್ತದೆ. ಡಿ. 26ರ ಸಭೆಯಲ್ಲಿ ಅನುಮತಿ ಸಿಗದೆ ಇದ್ದರೆ ಮತ್ತೆ 3 ತಿಂಗಳು ಕಾಯಬೇಕು. ಹೀಗಾಗಿ ಮುಂಬರುವ ಸಭೆಯಲ್ಲೇ ವರದಿ ಪರಿಶೀಲನೆಯಾಗಿ ಅನುಮತಿ ಲಭ್ಯ ವಾಗುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಪ್ರಯತ್ನಗಳನ್ನು ನಡೆಸುತ್ತಿದೆ.
Related Articles
Advertisement
ನಾನ್ ಸಿಆರ್‌ಝಡ್ ಆಸರೆಪ್ರಸ್ತುತ ನಾನ್ ಸಿಆರ್‌ಝಡ್ ವಲಯದ 17 ಬ್ಲಾಕ್‌ಗಳಲ್ಲಿ ಮರಳುಗಾರಿಕೆ ನಡೆಯುತ್ತಿದೆ. ಪ್ರಸ್ತುತ ನಿರ್ಮಾಣ ಕಾಮಗಾರಿಗಳಿಗೆ ಆಸರೆಯಾಗಿರುವ ಮರಳು ಇಲ್ಲಿನದು. ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಪ್ರಕಾರ ನಾನ್‌ಸಿಆರ್‌ಝಡ್ ವಲಯದಲ್ಲಿ 50 ಸಾವಿರ ಮೆಟ್ರಿಕ್ ಟನ್ ಮರಳು ಲಭ್ಯವಿದ್ದು, ಸಿಆರ್‌ಝಡ್ ವಲಯ ದಲ್ಲಿ ಮರಳುಗಾರಿಕೆ ಪ್ರಾರಂಭ ವಾಗುವವರೆಗೆ ಮರಳು ಪೂರೈಸಬಹು ದಾಗಿದೆ. ಆದರೆ ನಾನ್‌ಸಿಆರ್‌ಝಡ್ ವಲಯದಿಂದ ಮರಳು ಪಡೆಯಲು ವೆಚ್ಚ ಅಧಿಕ. ಅಲ್ಲದೆ ಇದು ಗಾರೆ ಕೆಲಸಕ್ಕೆ ಸೂಕ್ತವಲ್ಲ. ಆದುದರಿಂದ ಸಿಆರ್‌ಝಡ್ ವಲಯದಲ್ಲಿ ಮರಳುಗಾರಿಕೆ ಶೀಘ್ರ ಆರಂಭವಾಗ ಬೇಕು ಎಂಬುದು ಜಿಲ್ಲಾ ಸಿವಿಲ್ ಕಂಟ್ರಾಕ್ಟರ್‌ಗಳ ಒಕ್ಕೂಟದ ಆಗ್ರಹ. ಉಡುಪಿ ಜಿಲ್ಲೆ: ಕೆಲವೆಡೆ ಆರಂಭ
ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು ಸಹಿತ ಕೆಲವೆಡೆ ಸಿಆರ್‌ಝಡ್‌ನಲ್ಲಿ ಈಗಾಗಲೇ ಮರಳುಗಾರಿಕೆ ಆರಂಭವಾಗಿದೆ. ವಾರಾಹಿ ನದಿಯಲ್ಲಿ 2019ರ ಸೆಪ್ಟಂಬರ್‌ನಿಂದ 2024ರ ಸೆಪ್ಟಂಬರ್‌ವರೆಗೆ ಮರಳುಗಾರಿಕೆ ನಡೆಸಲು ಇಬ್ಬರಿಗೆ ಅನುಮತಿ ಇದ್ದು, ಅ. 15ರಿಂದ ಆರಂಭವಾಗಿದೆ. ಕುಂದಾಪುರದಲ್ಲಿಯೂ ಪರವಾನಿಗೆ 2024ರ ವರೆಗೆ ಇದ್ದು, ಕೆಲವೆಡೆ ಮರಳುಗಾರಿಕೆ ಆರಂಭಗೊಂಡಿದೆ. ಎನ್‌ಐಟಿಕೆಯಿಂದ ತಾಂತ್ರಿಕ ವರದಿ ಒಂದೆರಡು ದಿನಗಳಲ್ಲಿ ಲಭ್ಯವಾಗಲಿದೆ. ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಇದನ್ನು ರಾಜ್ಯ ಸರಕಾರಕ್ಕೆ ಕೂಡಲೇ ಕಳುಹಿಸಿಕೊಡಲಿದ್ದು, ಡಿ. 26ರಂದು ನಡೆಯುವ ಕೆಸಿಝಡ್‌ಎಂ ಸಭೆಯಲ್ಲಿ ಮಂಡನೆಯಾಗಲಿದೆ.
– ಡಾ| ಕೆ.ವಿ. ರಾಜೇಂದ್ರ, ಜಿಲ್ಲಾಧಿಕಾರಿ