Advertisement
ಸಿಎನ್‌ಜಿ ರಿಕ್ಷಾ ಹಾಗೂ ಇತರ ವಾಹನಗಳ ಸವಾರರ ಈ ನಿತ್ಯದ ಗೋಳನ್ನು ಯಾರೂ ಕೇಳದಂತಾಗಿದೆ. ಇರುವ ಬಂಕ್‌ಗಳಿಗೆ ಬೇಡಿಕೆಯಷ್ಟು ಸಿಎನ್‌ಜಿ ಇಂಧನ ಪೂರೈಕೆಯಾಗುತ್ತಿಲ್ಲ. ಬಂದಷ್ಟೇ ವೇಗವಾಗಿ ಖಾಲಿಯಾಗುತ್ತಿದೆ. ಹೆಚ್ಚುವರಿ ಬಂಕ್‌ಗಳನ್ನು ಆರಂಭಿಸಲು ಯಾರೂ ಮುಂದಾಗುತ್ತಿಲ್ಲ.
ಉಡುಪಿಯಲ್ಲಿ 3 ಸಹಿತ ಕುಂದಾ ಪುರ ತಾಲೂಕಿನಲ್ಲಿ ಇರುವುದು ಕೇವಲ ಒಂದೇ ಒಂದು ಸಿಎನ್‌ಜಿ ಬಂಕ್. ಜಿಲ್ಲೆಯಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಸಿಎನ್‌ಜಿ ಆಧಾರಿತ ವಾಹನಗಳಿವೆ. ಅದರಲ್ಲೂ ಕೋಟೇಶ್ವರದಲ್ಲಿರುವ ಸಿಎನ್‌ಜಿ ಬಂಕ್‌ನಲ್ಲಿ ನಿತ್ಯವೂ ಬೆಳಗ್ಗೆ 4 ಗಂಟೆಯಿಂದ ಬಂದು ಸಿಎನ್‌ಜಿ ಇಂಧನ ಹಾಕಿಸಲು ನೂರಾರು ರಿಕ್ಷಾಗಳು, ಇತರ ವಾಹನಗಳು ಕಾಯುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ. 4ರಿಂಧ ಕೆಲವೊಮ್ಮೆ 8-9 ಗಂಟೆಯವರೆಗೂ ಕಾಯಬೇಕಾದ ಸ್ಥಿತಿಯಿದೆ. ಕಾದರೂ ಎಲ್ಲರಿಗೂ ಸಿಗುತ್ತದೆ ಅನ್ನುವ ಗ್ಯಾರಂಟಿಯೂ ಇಲ್ಲ. ಕೆಲವೇ ಕೆಲವು ಮಾತ್ರ
ಉಡುಪಿ ಜಿಲ್ಲೆಯಲ್ಲಿ ಕೋಟೇಶ್ವರ, ಉಡುಪಿ, ಬ್ರಹ್ಮಾವರ ಸೇರಿದಂತೆ ಕೆಲವೇ ಕೆಲವು ಕಡೆಗಳಲ್ಲಿ ಸಿಎನ್‌ಜಿ ಇಂಧನದ ಬಂಕ್‌ಗಳಿವೆ. ಇನ್ನು ಕಾರ್ಕಳದಲ್ಲಿ ಈಗಷ್ಟೆ ಆರಂಭವಾಗುತ್ತಿದೆ. ಆದರೆ ಇರುವಂತಹ ಬಹುತೇಕ ಎಲ್ಲ ಸಿಎನ್‌ಜಿ ಬಂಕ್‌ಗಳಲ್ಲಿ ಬೇಡಿಕೆಯಷ್ಟು ಪೂರೈಕೆಯಾಗದೇ ಇರುವುದು ಸಮಸ್ಯೆಯಾಗಿದೆ.
Related Articles
Advertisement
ಬಾಡಿಗೆಗಿಂತ ಕಾಯುವುದೇ ಕೆಲಸಉಡುಪಿ ಜಿಲ್ಲೆಯಲ್ಲಿ ರಿಕ್ಷಾ, ಕಾರು, ಬಸ್, ಟ್ರಕ್ ಸಹಿತ ಸಿಎನ್‌ಜಿ ಇಂಧನ ಆಧಾರಿತ ವಾಹನಗಳು ಅಂದಾಜು 5 ಸಾವಿರಕ್ಕೂ ಮಿಕ್ಕಿ ಇವೆ. ಈ ಪೈಕಿ ಬಹುಪಾಲು ರಿಕ್ಷಾಗಳೇ ಆಗಿವೆ. ಸಿಎನ್‌ಜಿ ಬಂಕ್‌ಗಳಿಗೆ ಪ್ರತಿ ದಿನ 2-3 ಲೋಡ್‌ಗಳು ಪೂರೈಕೆಯಾಗುತ್ತಿವೆಯಾದರೂ ಬಂದಷ್ಟೇ ಬೇಗ ಖಾಲಿಯಾಗುತ್ತಿದೆ. ಇದರಿಂದ ಬಂಕ್‌ಗಳಲ್ಲಿ ರಿಕ್ಷಾ ಚಾಲಕರು ಸಿಎನ್‌ಜಿ ಗ್ಯಾಸ್ ಲೋಡುಗಳು ಬರುವುದನ್ನೇ ಕಾಯುವಂತಾಗಿದೆ. ಬಂಕ್‌ಗಳ ಬಳಿ ರಿಕ್ಷಾಗಳ ಉದ್ದುದ್ದ ಸಾಲುಗಳು ಈಗ ಮಾಮೂಲಿಯಾಗಿವೆ. ಜೀವನಾಧಾರಕ್ಕಾಗಿ ರಿಕ್ಷಾವನ್ನೇ ನಂಬಿಕೊಂಡಿರುವ ಚಾಲಕರು ಬಹು ಸಮಯವನ್ನು ಬಂಕ್‌ಗಳಲ್ಲಿ ಕಳೆಯುವಂತಾಗಿದ್ದು, ಬಾಡಿಗೆ ಮಾಡುವುದಕ್ಕಿಂತ ಹೀಗೆ ಕಾಯುವುದರಲ್ಲಿ ಹೆಚ್ಚು ಕಾಲ ಕಳೆಯಬೇಕಾದ ಅನಿವಾರ್ಯ ಇವರದ್ದಾಗಿದೆ. ದ.ಕ: ಬೇಡಿಕೆ ಅಧಿಕ ಲಭ್ಯತೆ ಸಮಸ್ಯೆ
ದ.ಕನ್ನಡದ ವಿವಿಧ ಕಡೆಗಳಲ್ಲಿ ಸಿಎನ್‌ಜಿ ಸ್ಟೇಷನ್ ಇದೆ. ಇದರಲ್ಲಿ ಕೆಲವು ಕಡೆಗಳಲ್ಲಿ ಸಿಎನ್ ಜಿ ಸರಬರಾಜು ಸರಿಯಾಗಿ ಇಲ್ಲದೆ ಕೆಲವೊಮ್ಮೆ ಸಮಸ್ಯೆ ಆಗುತ್ತಿದೆ. ಬೇಡಿಕೆಯೂ ಅಧಿಕವಿದೆ. ಗೈಲ್ ಗ್ಯಾಸ್ ಕಂಪೆನಿ ಸಿಎನ್‌ಜಿ ಸರಬರಾಜು ಮಾಡುತ್ತಿದೆ.