Advertisement

ಪ್ರಧಾನಿಯವರಿಗೆ ಜನರ ಆರೋಗ್ಯ ಬೇಕಿಲ್ಲ, ಚುನಾವಣೆಯೇ ಮುಖ್ಯವಾಗಿದೆ: ಡಿಕೆಶಿ ವಾಗ್ದಾಳಿ

01:13 PM Apr 18, 2021 | Team Udayavani |

ಬೆಂಗಳೂರು: ಪ್ರಧಾನಿಯವರಿಗೆ ಜನರ ಆರೋಗ್ಯ ಬೇಕಿಲ್ಲ. ವೋಟ್ ಕೊಡಿ ಎಂದು ಪ್ರಚಾರಕ್ಕೆ ಒತ್ತು ಕೊಡುತ್ತಾರೆ. ಇವರಿಗೆ ಚುನಾವಣೆಯೇ ಮುಖ್ಯವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

Advertisement

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಘೋಷಣೆ ಮಾಡಿದೆ. ಇಲ್ಲಿಯವರೆಗೆ ಯಾರಿಗೆ ಆ ಹಣ ಸಿಕ್ಕಿದೆ. ಜಿಎಸ್ ಟಿ ಕಟ್ಟುವ ದುಡ್ಡಿಗೂ ಪೆನಾಲ್ಟಿ ಹಾಕ್ತಿದ್ದಾರೆ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗಿದೆ. ಸಿಮೆಂಟ್, ಗೊಬ್ಬರದ ಬೆಲೆ ಗಗನಕ್ಕೆ ಹೋಗಿದೆ. ರೈತರು ಇವತ್ತು ಪರದಾಡುತ್ತಿದ್ದಾರೆ. ಹೆಣ್ಣುಮಕ್ಕಳು ಉದ್ಯೋಗ ಕಳೆದುಕೊಂಡಿದ್ದಾರೆ. ಅವರಿಗೆ ಯಾವ ಸಹಾಯಧನ ಸರ್ಕಾರ ನೀಡುತ್ತಿದೆ ಎಂದು ಪ್ರಶ್ನಿಸಿದರು.

ಸರ್ಕಾರ ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಲು ಹೊರಟಿದೆ. ಇಲಾಖೆಗಳ ಅಧಿಕಾರಿಗಳನ್ನ ಬಳಸಿಕೊಳ್ಳಿ. ಕೋವಿಡ್ ನಿಯಂತ್ರಣಕ್ಕೆ ಅವರನ್ನು ಬಳಸಿಕೊಳ್ಳಿ. ಅಭಿವೃದ್ಧಿ ಕೆಲಸ ನಿಲ್ಲಿಸಿ,ಆರೋಗ್ಯಕ್ಕೆ ಒತ್ತು ಕೊಡಿ. ಕೋವಿಡ್ ಗೆ ಸದ್ಯಕ್ಕೆ 300 ಕೋಟಿ ಹಣ ಮೀಸಲಿಡಿ ಎಂದರು.

ಹೆಣ ಸುಡುವವರಿಗೆ ವೇತನ ಕೊಡುತ್ತಿಲ್ಲ. ಹೆಣ ಹೂಳಲು ಜಾಗವಿಲ್ಲ. ಹೆಣ ಸುಡುವುದಕ್ಕೂ ‌ಕ್ಯೂ ನಿಲ್ಲಬೇಕಾಗಿದೆ. ಕಂದಾಯ ಭೂಮಿಯನ್ನು ಗುರುತಿಸಿ ಅವಕಾಶ ಮಾಡಿಕೊಡಬೇಕು ಎಂದು ಡಿಕೆಶಿ ಸಲಹೆ ನೀಡಿದರು.

ಅಧಿಕಾರಿಗಳನ್ನು ಕೇಳಿದರೆ ನಮಗೇನು ನಿರ್ದೇಶನ ಬಂದಿಲ್ಲ ಎನ್ನುತ್ತಾರೆ. ಅವರು ವೇತನ ಪಡೆಯುತ್ತಿಲ್ವಾ? ಬರೀ ಮೀಟಿಂಗ್ ಮಾಡಿದರೆ ಸಾಲದು, ಜನರನ್ನು ಬದುಕಿಸುವ ಕೆಲಸ ಮಾಡಲಿ. ಸರ್ಕಾರ ಅಧಿಕಾರಿಗಳಿಗೆ ನಿರ್ದೇಶನ ಕೊಡಬೇಕು ಸಿಎಂ ಒಬ್ಬರೇ ಅಲ್ಲ, ಸಚಿವರು, ಸರ್ಕಾರ ವ್ಯಾಕ್ಸಿನ್ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Advertisement

ಲಾಕ್ ಡೌನ್ ನಿಂದ ಏನು ಪ್ರಯೋಜನ? ರಾತ್ರಿ ಮಾಡಿದರೆ ಮಾತ್ರ ಉಪಯೋಗವಾಗುತ್ತದೆಯೇ? ಹಗಲು ಹೊತ್ತು ಕೊರೊನಾ ಬರಲ್ವಾ? ಜನರ ಜೀವದ ಜೊತೆ ಬದುಕು ಮುಖ್ಯ. ಅದಕ್ಕೆ ನಾವು ಲಾಕ್ ಡೌನ್ ಗೆ ವಿರೋಧವಿದ್ದೇವೆ ಎಂದರು.

ಸಾರಿಗೆ ನೌಕರರ ಮುಷ್ಕರ ವಿಚಾರವಾಗಿ ಮಾತನಾಡಿದ ಅವರು, ಸಾರಿಗೆ ನೌಕರರನ್ನು ಕರೆದು ಮಾತನಾಡಲು ಸಮಸ್ಯೆಯೇನು? ಸರ್ಕಾರಕ್ಕೆ ಪ್ರತಿಷ್ಠೆ ಯಾಕೆ? ಖಾಸಗಿಯವರಿಗೆ ಕೊಡಲು ಹೊರಟಿದ್ದೀರಾ? ನೌಕರರದ್ದು ಸರಿಯೋ, ತಪ್ಪೋ ಗೊತ್ತಿಲ್ಲ. ಆದರೆ ಮೊದಲು ಅವರನ್ನು ಕರೆದು ಮಾತುಕತೆ ನಡೆಸಿ ಎಂದು ಡಿ ಕೆ ಶಿವಕುಮಾರ್ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next