ಬೆಂಗಳೂರು: ‘ಆ ಜಮೀರ್ ಗೆ ಎಲ್ಲಾ ಉತ್ತರ ಕೊಡಲು ನಾನು ತಯಾರಿಲ್ಲ. ಇಂತಹವರು ನೂರಾರು ಜನ ಯಾರು ಏನು ಬೇಕಾದರು ಮಾತಾಡಿದರೂ ಕಾಂಗ್ರೆಸ್ ಪಕ್ಷ ನಿಭಾಯಿಸುತ್ತದೆ” ಇದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ.
ಒಂದೇ ಸಮುದಾಯವನ್ನು ನಂಬಿಕೊಂಡರೇ ಸಿಎಂ ಆಗಲ್ಲ ಎಂಬ ಜಮೀರ್ ಅಹಮದ್ ಖಾನ್ ಹೇಳಿಕೆಗೆ ಡಿಕೆ ಶಿವಕುಮಾರ್ ಅಸಮಾಧಾನದಿಂದ ಈ ರೀತಿ ಉತ್ತರಿಸಿದರು.
ಕಾಂಗ್ರೆಸ್ ಪಕ್ಷವು ಕಾಂಗ್ರೆಸ್ ದಾರಿಯಲ್ಲೇ ಹೋಗಬೇಕು. ಪ್ರತಿಯೊಬ್ಬರು ಕಾಂಗ್ರೆಸ್ ಪಾರ್ಟಿ ಲೈನ್ ನಲ್ಲಿ ಹೋಗಬೇಕು. ಯಾವ ರಾಜಕಾರಣ ಮಾಡಬೇಕು? ಕಾಂಗ್ರೆಸ್ ಪಕ್ಷಕ್ಕೆ ಎಲ್ಲಾ ಸಮುದಾಯ ಬೇಕು ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ:600 ಕೋಟಿ ರೂ. ಆಸ್ತಿಯನ್ನು ಉ.ಪ್ರದೇಶ ಸರ್ಕಾರಕ್ಕೆ ದಾನ ಮಾಡಿದ ವೈದ್ಯ!
ಸೋನಿಯಾ ಗಾಂಧಿ ಇಡಿ ವಿಚಾರಣೆ ಬಗ್ಗೆ ಮಾತನಾಡಿದ ಅವರು, ಗಾಂಧಿ ಪರಿವಾರದ ಮೇಲೆ ಅನಗತ್ಯವಾಗಿ ಕೇಸ್ ದಾಖಲಿಸಲಾಗಿದೆ. ರಾಹುಲ್ ಗಾಂಧಿಯವರನ್ನ ಐವತ್ತು ಗಂಟೆಗಳ ಕಾಲ ವಿಚಾರಣೆ ನಡೆಸಿದರು. ಅದರ ವಿಡಿಯೋ ಬಿಡಲಿ ನೋಡೋಣ. ಸುಳ್ಳು ಕೇಸ್ ದಾಖಲಿಸಿ ತನಿಖೆ ಮಾಡುತ್ತಿದಾರೆ. ಈ ಹಿಂದೆ ಅರುಣ್ ಜೇಟ್ಲಿ ಅವರೇ ಹೇಳಿರಲಿಲ್ವಾ? ಪ್ರಾಥಮಿಕ ತನಿಖೆಯಲ್ಲಾದರೂ ತಪ್ಪು ಕಂಡು ಬಂದಿದೆಯಾ? ಹೀಗಾಗಿ ನಾವು ಇದನ್ನು ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದರು.