Advertisement

D.K. Shivakumar ಪಾದಯಾತ್ರೆ ದಿನ ಒಂದೊಂದು ಅಕ್ರಮ ಬಯಲು

12:13 AM Jul 27, 2024 | Team Udayavani |

ಬೆಂಗಳೂರು: ಮುಡಾ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಹಗರಣದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಬೆಂಗಳೂರಿನಿಂದ ಮೈಸೂರು ಪಾದಯಾತ್ರೆಗೆ ತಿರುಗೇಟು ನೀಡಲು ಸಜ್ಜಾಗಿರುವ ಆಡಳಿತಾರೂಢ ಕಾಂಗ್ರೆಸ್‌, ಪಾದಯಾತ್ರೆ ನಡೆಯುವ ಒಂದೊಂದು ದಿನ ವಿಪಕ್ಷಗಳ ಒಂದೊಂದು ಅಕ್ರಮಗಳನ್ನು ಜನತೆ ಮುಂದಿಡಲು ನಿರ್ಧರಿಸಿದೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಪಕ್ಷಗಳಾದ ಬಿಜೆಪಿ-ಜೆಡಿಎಸ್‌ ನಾಯಕರು ಪಾದಯಾತ್ರೆ ಹಮ್ಮಿಕೊಳ್ಳುವ ಮೂಲಕ ತಾವು ತೋಡಿದ ಬಾವಿಗೆ ತಾವೇ ಬೀಳಲು ಹೊರಟಿದ್ದಾರೆ. ಅವರು ಎಷ್ಟು ಬೇಕಾದರೂ ಪಾದಯಾತ್ರೆಗಳನ್ನು ನಡೆಸಲಿ. ಅದಕ್ಕೆ ತಕ್ಕ ಉತ್ತರ ನೀಡಲು ನಾವೂ ಸಿದ್ಧರಾಗಿದ್ದೇವೆ. ಯಾರ್ಯಾರ ಕಾಲದಲ್ಲಿ ಎಷ್ಟೆಷ್ಟು ನಿವೇಶನ ನೀಡಿದ್ದಾರೆ? ಯಾರಿಗೆ ಎಷ್ಟು ಪಾಲು ಹೋಗಿದೆ ಎಂಬುದನ್ನು ಬಿಚ್ಚಿಡುತ್ತೇವೆ. ಒಂದೊಂದು ದಿನವೂ ಒಂದು ಮಾಹಿತಿ ನೀಡಲಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಹಾಗೆ ನೋಡಿದರೆ ಬಿಜೆಪಿಯವರು ಹಗರಣಗಳ ಸರದಾರರು. ಈಗ ಅವರೇ ಪಾದಯಾತ್ರೆ ಮಾಡುವುದು ಆತ್ಮಹತ್ಯೆ ಪ್ರಯತ್ನವಾಗಿದೆ ಎಂದು ಆರೋಪಿಸಿದ ಡಿ.ಕೆ. ಶಿವಕುಮಾರ್‌, ಈ ವಿಚಾರವಾಗಿ ಸದನದಲ್ಲಿ ಚರ್ಚೆಗೆ ಸಾಕಷ್ಟು ಅವಕಾಶ ನೀಡಿದೆವು. ಆದರೆ ಮುಖ್ಯಮಂತ್ರಿಗೆ ಉತ್ತರ ನೀಡಲು ಅವಕಾಶವನ್ನೇ ನೀಡಲಿಲ್ಲ. ಅವರ ಅಕ್ರಮಗಳ ಬಗ್ಗೆ ಸಿಎಜಿ ವರದಿಗಳಿವೆ. ಇವುಗಳ ಬಗ್ಗೆ ಚರ್ಚೆ ಮಾಡಲು ವಿಪಕ್ಷಗಳು ಅವಕಾಶ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ಅಧಿಕಾರದಲ್ಲಿದ್ದಾಗ ಈ ನಿವೇಶನ ಹಂಚಿಕೆ ಮಾಡಲಾಗಿದೆ. ಬೇರೆಯವರ ನಿವೇಶನ ಹಂಚಿಕೆ ವಿಚಾರವಾಗಿ ಸಂಬಂಧಪಟ್ಟ ಮಂತ್ರಿಗಳು ಮಾತನಾಡುತ್ತಾರೆ. ನಾನು ಕೂಡ ಈ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ.

ಮುಖ್ಯಮಂತ್ರಿಗಳ ಕುಟುಂಬ ಕೇವಲ ಪರಿಹಾರ ಪಡೆದಿದ್ದಾ ರೆ. ಕಾನೂನು ಚೌಕಟ್ಟಿನಲ್ಲಿ ಈ ಪ್ರಕ್ರಿಯೆ ನಡೆದಿವೆ. ಈಗ ಮುಖ್ಯಮಂತ್ರಿಗಳ ಘನತೆಗೆ ಮಸಿ ಬಳಿಯಲು ವಿಪಕ್ಷದವರು ಪ್ರಯತ್ನ ಮಾಡುತ್ತಿದ್ದಾ ರೆ ಎಂದು ಹೇಳಿದರು.

Advertisement

ಸರಕಾರ ಅಸ್ಥಿರಗೊಳಿಸುವ ಷಡ್ಯಂತ್ರ
ಬಿಜೆಪಿಯವರು ಸಂಸತ್ತಿನಲ್ಲೂ ಈ ವಿಚಾರವಾಗಿ ಪ್ರತಿಭಟನೆ ನಡೆಸಲಿರುವ ಬಗ್ಗೆ ಕೇಳಿದಾಗ, ದೇಶದಲ್ಲೇ ಕಾಂಗ್ರೆಸ್‌ ಆಡಳಿತದಲ್ಲಿರುವ ಅತಿ ದೊಡ್ಡ ರಾಜ್ಯ ಕರ್ನಾಟಕ. ಆದ್ದರಿಂದ ಅದನ್ನು ಅಸ್ಥಿರಗೊಳಿಸಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾ ರೆ. ಕಾಂಗ್ರೆಸ್‌ ಯಾಕೆ ಪಾದಯಾತ್ರೆ ಮಾಡಬೇಕು? ಅಂತಹ ಯೋಚನೆ ಏನಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next