ಬೆಂಗಳೂರು: 2019ರಲ್ಲಿ ನಡೆಸಿದ್ದ ದಾಳಿ ಸಂಬಂಧ ಇಡಿ ಅಧಿಕಾರಿಗಳು ಹೊಸದಾಗಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿರುವ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದು, ನಾನು ಅವರಿಗೆ ಶುಭ ಕೋರುತ್ತೇನೆ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಅವರು ಚಾರ್ಜ್ ಶೀಟ್ ಫೈಲ್ ಮಾಡಿರುವುದು ಮಾಧ್ಯಮದಲ್ಲಿ ಗೊತ್ತಾಯಿತು.
ನಮಗೆ ಇನ್ನೂ ಕಾಪಿ ಸಿಕ್ಕಿಲ್ಲ. ಸಾಮಾನ್ಯವಾಗಿ 6 ತಿಂಗಳಲ್ಲಿ ಚಾರ್ಜ್ ಶೀಲ್ ಫೈಲ್ ಮಾಡುತ್ತಾರೆ. ರೆಬಹಳ ದೊಡ್ಡ ತನಿಖೆ ಮಾಡಿದ್ದಾರೆ. ಅವರು ಹೊಸದಾಗಿ ಸೃಷ್ಠಿ ಮಾಡಲು ಸಾಧ್ಯವಿಲ್ಲ. ಕಾಪಿ ಬರಲಿ, ಕಾನೂನಿದೆ ದೇಶದಲ್ಲಿ. ಸತ್ಯ ಧರ್ಮ ಇದೆ. ನಾನೇನೂ ತಪ್ಪು ಮಾಡಿಲ್ಲ ಅನ್ನುವುದು ರಾಜ್ಯಕ್ಕೆ, ದೇಶಕ್ಕೆ ಗೊತ್ತಿದೆ ಎಂದರು.
ಅವರ ಪಾರ್ಟಿಯನ್ನೇ ಬಿಡುವುದಿಲ್ಲ, ಇನ್ನು ನಮ್ಮ ಬಿಡುತ್ತಾರಾ? ಅಹಮದ್ ಪಟೇಲ್ ಗೆ ಸಹಾಯ ಮಾಡಿದ್ದಕ್ಕೆ ಇದೆಲ್ಲ ಮಾಡುತ್ತಿದ್ದಾರೆ. ರಾಜಕೀಯವಾಗಿ ಎಲ್ಲಾ ಅಸ್ತ್ರ ಉಪಯೋಗಿಸುತ್ತಿದ್ದಾರೆ. ಅವರು ನಮಗೆ ಮುಂದೆ ನೋಟಿಸ್ ಕೊಡುತ್ತಾರೆ. ಆಗ ಖಂಡಿತ ಪರಿಶೀಲಿಸುತ್ತೇವೆ. ನಾವು ಕಾನೂನು ಪರಿಪಾಲನೆ ಮಾಡುವವರು ಎಂದರು.
ಇದನ್ನೂ ಓದಿ : ಪರಮೇಶ್ವರ್ ರನ್ನು ಸೋಲಿಸಲು ಸಿದ್ದರಾಮಯ್ಯ ಜೊತೆ ಡಿಕೆಶಿ ಕೈಜೋಡಿಸಲಿದ್ದಾರೆ: ಬಿಜೆಪಿ
ಬಿಜೆಪಿಗೆ ರಾಜಕೀಯವಾಗಿ ಎದುರಿಸುವವರಿಗೆಲ್ಲ ಹೀಗೆ ಮಾಡುತ್ತಾ ಇದೆ. ಒಂದು ಅವರಿಗೆ ಶರಣಾಗ ಬೇಕು. ಇಲ್ಲ ಅವರ ಜತೆ ಸೇರಿಕೊಳ್ಳ ಬೇಕು. ಐ ವಿಶ್ ದೆಮ್ ಆಲ್ ದಿ ಬೆಸ್ಟ್ ಎಂದು ವ್ಯಂಗ್ಯವಾಗಿ ಆಕ್ರೋಶ ಹೊರ ಹಾಕಿದರು.
ಇಡಿ ಅಧಿಕಾರಿಗಳು ದೆಹಲಿ ವಿಶೇಷ ಕೋರ್ಟ್ ಗೆ ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ.