Advertisement

ಚುನಾವಣಾ ಪ್ರಚಾರದ ವೇಳೆ ಕಣ್ಣೀರಿಟ್ಟ ಸಚಿವ ಡಿ.ಕೆ.ಶಿವಕುಮಾರ್‌

09:48 AM May 10, 2019 | Vishnu Das |

ಹುಬ್ಬಳ್ಳಿ : ಕುಂದಗೋಳ ಉಪಚುನಾವಣಾ ಕಣದಲ್ಲಿ ಪ್ರಚಾರ ನಿರತರಾಗಿರುವ ಸಚಿವ ಡಿ.ಕೆ,ಶಿವಕುಮಾರ್‌ ಅವರು ಕಣ್ಣೀರಿಟ್ಟ ಘಟನೆ ಗುರುವಾರ ನಡೆಯಿತು.

Advertisement

ಇಂಗಳಗಿ ಗ್ರಾಮದಲ್ಲಿ ಪ್ರಚರ ಸಭೆಯಲ್ಲಿ ಸಿ.ಎಸ್‌.ಶಿವಳ್ಳಿ ಅವರನ್ನು ನೆನೆದು ಕಣ್ಣೀರಿಟ್ಟು, ನಾನು ಚುನಾವಣೆ ಬಂತೆಂದು ಕಣ್ಣೀರಿಡುತ್ತಿಲ್ಲ. ನಿಮ್ಮ ಪಾದಗಳಿಗೆ ನಮಿಸುತ್ತಾ ಹೇಳುತ್ತಿದ್ದೇನೆ ನನಗೆ ಗೆಳೆಯನನ್ನು ಕಳೆದುಕೊಂಡು ನೋವಾಗಿದೆ. ಇದು ಶಿವಳ್ಳಿ ಅವರ ಚುನಾವಣೆ ಅಲ್ಲ, ನಿಮ್ಮ ಚುನಾವಣೆ. ಶಿವಳ್ಳಿ ಅವರ ಪತ್ನಿ ಕುಸುಮಾ ಅವರನ್ನು ಗೆಲ್ಲಿಸಲೇ ಬೇಕು ಎಂದು ಮನವಿ ಮಾಡಿದರು.

ಡಿ.ಕೆ.ಶಿವಕುಮಾರ್‌ ಸೇರಿದಂತೆ ಸಚಿವರು ಕ್ಷೇತ್ರದಲ್ಲಿ ಭರ್ಜರಿ ಪ್ರಚಾರವನ್ನನಡೆಸುತ್ತಿದ್ದಾರೆ. ಬಿಜೆಪಿಯೂ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ಚಿಕ್ಕನಗೌಡ್ರ ಪರವಾಗಿ ರಾಜ್ಯದ ಪ್ರಮುಖ ನಾಯಕರೆಲ್ಲರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

ಮೇ 19 ರಂದು ಉಪಚುನಾವಣೆ ಮತದಾನ ನಡೆಯಲಿದ್ದು, 23 ರಂದು ಫ‌ಲಿತಾಂಶ ಹೊರ ಬೀಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next