ಬೆಂಗಳೂರು: ಕೋವಿಡ್-9 ಹಿನ್ನಲೆಯಲ್ಲಿ ವಿಧಾನಮಂಡಲ ಅಧಿವೇಶನವನ್ನು ಕೇವಲ ಮೂರೇ ದಿನಕ್ಕೆ ಮೊಟಕುಗೊಳಿಸಲು ಸಿಎಂ ಯಡಿಯೂರಪ್ಪ ನಿರ್ಧರಿಸಿದ್ದು, ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಿಎಸ್ ಯಡಿಯೂರಪ್ಪ ನನಗೂ ಮತ್ತು ಸಿದ್ದರಾಮಯ್ಯ ಗೆ ಕರೆ ಮಾಡಿದ್ದರು. ಕೋವಿಡ್ ಆರ್ಭಟ ಹಿನ್ನೆಲೆ ಸದನದವನ್ನು ಮೂರು ದಿನಕ್ಕೆ ಮೊಟಕು ಮಾಡುತ್ತಿದ್ದೇವೆ. ಸಹಕಾರ ಕೊಡಬೇಕು ಅಂತ ಕೇಳಿದರು. ಬಿಜೆಪಿ ಪ್ರಜಾಪ್ರಭುತ್ವ ಮುಗಿಸಲು ಹೊರಟಿದೆ. ರಾಜ್ಯದಲ್ಲಿ ಬರ, ನೆರೆ ಕಾನೂನು ಸುವ್ಯವಸ್ಥೆ ಹದೆಗಟ್ಟಿದೆ. ಕೇಂದ್ರ ಪರಿಹಾರ ಕೊಡುತ್ತಿಲ್ಲ ಇದೆಲ್ಲ ಚರ್ಚೆ ಮಾಡಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಸೂಚನೆ ಕೊಟ್ಟಿದ್ದಾರಂತೆ ಎಂದರು.
ಇದನ್ನೂ ಓದಿ: ವರುಣನ ಆರ್ಭಟ: ಮಂಗಳೂರು ವಿ.ವಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆ ಮುಂದೂಡಿಕೆ !
ಜನರನ್ನು ರಕ್ಷಣೆ ಮಾಡುವುದು ಇವರ ಕೆಲಸ. ಇವರಿಂದಲೇ ಕೋವಿಡ್ ಬಂದಿದ್ದು. ಪ್ರಪಂಚದಲ್ಲಿ ಚರಿತ್ರೆ ಸೃಷ್ಟಿ ಮಾಡ್ತೀವಿ ಅಂತ ಹೇಳಿದವರು ಒಂದು ವಾರಕ್ಕೆ ಕೋವಿಡ್ ಕೇರ್ ಸೆಂಟರ್ ರೂಂ ಕ್ಲೂಸ್ ಮಾಡಿದ್ದಾರೆ. ಇದೆಲ್ಲವೂ ನಾವು ಸದನದಲ್ಲಿ ಚರ್ಚೆ ಮಾಡಬೇಕಿದೆ. ಸರ್ಕಾರದಲ್ಲಿ ನಡೆದಿರುವ ಬಾರಿ ಭ್ರಷ್ಟಾಚಾರಕ್ಕೆ ನಮ್ಮ ಸಹಕಾರ ಇಲ್ಲ. ಸದನ ಮೊಟಕುಗೊಳಿಸಲು ನಾವು ಬಿಡುವುದಿಲ್ಲ. ಇನ್ನೂ ಒಂದಷ್ಟು ದಿನ ಸದನ ಮುಂದುವರೆಸಿ ಎಂದು ಕೇಳುತ್ತೇವೆ. ಸದನ ನಡೆಸಿದರೆ ಇವರ ಭ್ರಷ್ಟಾಚಾರ ಹೊರಗೆ ಬರುತ್ತೆ. ಇವರು ಸಿಕ್ಕಿಹಾಕಿಕೊಂಡಿದ್ದಾರೆ ಹೀಗಾಗಿ ಸದನ ನಡೆಸುವುದು ಬೇಡ ಅಂತ ಚಿಂತನೆಯಲ್ಲಿ ಇದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಸಿಎಂ ಆಗಿದ್ದಾಗಲೇ ಕಾಂಗ್ರೆಸ್ ನಿರ್ನಾಮ ಮಾಡಿದ್ದ ಸಿದ್ದರಾಮಯ್ಯ: ಕಿಡಿಕಾರಿದ ಎಚ್ ಡಿಕೆ