Advertisement
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು. ಪ್ರಸ್ತುತ ಜನರಿಗೆ ಬೇಕಾಗಿರುವುದು ಆರ್ಥಿಕ ಭದ್ರತೆ, ಉದ್ಯೋಗ, ನೆಮ್ಮದಿಯ ಬದುಕು. ಜನತೆಯ ಈ ಆಶೋತ್ತರಗಳನ್ನು ಈಡೇರಿಸುವುದೇ ಕಾಂಗ್ರೆಸ್‌ನ ಗುರಿ. ನಾವು ಆದ್ಯತೆ ನೀಡುವುದು ಇದಕ್ಕೆ. ಆದರೆ ಬಿಜೆಪಿಗೆ ಈ ಆದ್ಯತೆಗಳು ಬೇಕಾಗಿಲ್ಲ . ಅವರ ಗಮನ ಇರುವುದು ಮತೀಯ ಭಾವನೆಗಳನ್ನು ಕೆರಳಿಸಿ ಅರಾಜಕತೆ ಸೃಷ್ಟಿಸುವುದು. ವಿದ್ಯಾರ್ಥಿಗಳಲ್ಲಿ, ಜನರಲ್ಲಿ ಮತೀಯ ಭಾವನೆಯ ವಿಷಬೀಜವನ್ನು ಬಿತ್ತುವ ಷಡ್ಯಂತ್ರ ಆನೇಕರಿಂದ ನಡೆಯುತ್ತಿದ್ದು ಕಾಂಗ್ರೆಸ್ ಇದನ್ನು ಖಂಡಿಸುತ್ತದೆ ಎಂದವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
Related Articles
Advertisement
ಪ್ರತಿಕ್ಷೇತ್ರಕ್ಕೆ ನೇಮಕ ಮಾಡಿರುವ ವೀಕ್ಷಕರು ಇದರ ಬಗ್ಗೆ ನಿಗಾ ವಹಿಸುತ್ತಾರೆ . ಸದಸ್ಯತ್ವ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮುಂದಿನ ಹಂತದಲ್ಲಿ ಬೂತ್, ತಾಲೂಕು, ಜಿಲ್ಲಾಮಟ್ಟಗಳಲ್ಲಿ ಪಕ್ಷದ ಅಧ್ಯಕ್ಷತೆಗೆ ಅಂತರಿಕ ಚುನಾವಣೆ ನಡೆಯಲಿರುವುದು. ಈ ಕುರಿತು ಎಐಸಿಸಿ ವತಿಯಿಂದ ಈಗಾಗಲೇ ಚುನಾವಣಾಧಿಕಾರಿಯನ್ನು ನೇಮಕಗೊಳಿಸಲಾಗಿದೆ ಎಂದವರು ವಿವರಿಸಿದರು.
ಇದನ್ನೂ ಓದಿ : ಕುಡಗೋಲು ತಾಗಿ ವಿದ್ಯಾರ್ಥಿನಿ ಸಾವು ಪ್ರಕರಣ : ಆರೋಪಿ ಸೈಕಲ್ ಸವಾರನಿಗೆ 2 ವರ್ಷ ಜೈಲು
ಮೇಕೆದಾಟು ಪಾದಯಾತ್ರೆಗೆ ಅನುಮತಿ ಕೋರಿಕೆರಾಜ್ಯದಲ್ಲಿ ಇದೀಗ ಸರಕಾರ ಎಲ್ಲಾ ಚಟುವಟಿಕೆಗಳಿಗೆ ಅವಕಾಶ ನೀಡಿದೆ. ಆದರೆ ನಮ್ಮ ಮೇಕೆದಾಟು ಪಾದಯಾತ್ರೆಯನ್ನು ಮಾತ್ರ ಸರಕಾರ ತಡೆಹಿಡಿದಿದೆ. ಪಾದಯಾತ್ರೆ ಮುಂದುವರಿಸಲು ಅನುಮತಿ ನೀಡುವಂತೆ ಶೀಘ್ರದಲ್ಲೆ ರಾಜ್ಯಸರಕಾರಕ್ಕೆ ಕೋರಿಕೆ ಸಲ್ಲಿಸಲಾಗುವುದು ಎಂದು ಡಿ.ಕೆ.ಶಿವಕುಮಾರ್ ಅವರು ಈ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ,ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ಶಾಸಕರಾದ ವಸಂತ ಬಂಗೇರ, ಶಕುಂತಾಳ ಶೆಟ್ಟಿ, ಜೆ.ಆರ್.ಲೋಬೋ, ಮೊದೀನ್ ಬಾವಾ,ವಿಧಾನಪರಿಷತ್ ಮಾಜಿ ಸದಸ್ಯ ಬಿ.ಎಲ್.ಶಂಕರ್, ರಾಜ್ಯಸಭಾ ಮಾಜಿ ಸದಸ್ಯ ಇಬ್ರಾಹಿಂ, ಮುಖಂಡರಾದ ಕೋಡಿಜಾಲ್ ಇಬ್ರಾಹಿಂ, ಮಿಥುನ್ ರೈ, ಡಾ| ರಘು,ಶಶಿಧರ ಹೆಗ್ಡೆ, ಲುಕಾ¾ನ್ ಬಂಟ್ವಾಳ್ ಮತ್ತಿತರರು ಉಪಸ್ಥಿತರಿದ್ದರು.