Advertisement
ಮುಂಬೈನ ಜನಪ್ರಿಯ ಸ್ತ್ರೀರೋಗ ತಜ್ಞೆ ಅನಹಿತ ಪಂಡೋಲ್ ಈ ಸಮಯದಲ್ಲಿ ಕಾರು ಚಲಾಯಿಸುತ್ತಿದ್ದು, ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ. ಜತೆಗೆ ಚಕೋಟಿ ಚೆಕ್‌ಪೋಸ್ಟ್‌ನಿಂದ ಅಪಘಾತ ನಡೆದ ಸ್ಥಳಕ್ಕೆ ಇರುವ 20 ಕಿಮೀ ದೂರವನ್ನು 9 ನಿಮಿಷಗಳಲ್ಲಿ ಕ್ರಮಿಸಿದ್ದ ಅಂಶವೂ ತನಿಖೆಯಿಂದ ಗೊತ್ತಾಗಿದೆ. ಅಪಘಾತಕ್ಕೆ ವೇಗವಾಗಿ ವಾಹನ ಚಲಾಯಿಸಿದ್ದೇ ಕಾರಣ ಎಂದೂ ಅವರು ಹೇಳಿದ್ದಾರೆ.
Related Articles
ಅಪಘಾತದಲ್ಲಿ ಮಡಿದ ಸೈರಸ್ ಮಿಸ್ತ್ರಿ ಅವರ ಅಂತ್ಯಕ್ರಿಯೆಯು ಮುಂಬೈನ ವರ್ಲಿ ಸ್ಮಶಾನದಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಗೆ ಜರುಗಲಿದೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.
Advertisement
ಸೀಟ್ ಬೆಲ್ಟ್ ಧರಿಸಿ ಪ್ರಯಾಣಿಸಿ ಸೈರಸ್ ಮಿಸ್ತ್ರಿ ಅವರ ಅಪಘಾತದ ಹಿನ್ನೆಲೆಯಲ್ಲಿ ಜಾಲತಾಣದಲ್ಲಿ “ಸೀಟ್ ಬೆಲ್ಟ್ ಧರಿಸಿ ಪ್ರಯಾಣಿಸಿ’ ಎಂಬ ಪ್ರಚಾರ ಶುರುವಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಉದ್ಯಮಿ ಆನಂದ್ ಮಹೀಂದ್ರಾ, “ನಾನು ಕಾರಿನ ಹಿಂಬದಿ ಸೀಟ್‌ನಲ್ಲಿ ಪ್ರಯಾಣಿಸುತ್ತಿರುವಾಗಲೂ ಸದಾ ಸೀಟ್ ಬೆಲ್ಟ್ ಧರಿಸುತ್ತೇನೆ. ಎಲ್ಲರೂ ದಯವಿಟ್ಟು ಸೀಲ್ಟ್ ಬೆಲ್ಟ್ ಧರಿಸುವ ಪ್ರತಿಜ್ಞೆ ಮಾಡಿ. ನಮ್ಮೆಲ್ಲರಿಗೂ ಕುಟುಂಬಗಳಿದ್ದು, ಅವರು ನಮ್ಮ ನಿರೀಕ್ಷೆಯಲ್ಲಿರುತ್ತಾರೆ,’ ಎಂದು ಟ್ವೀಟ್ ಮಾಡಿದ್ದಾರೆ. ಅವರ ಟ್ವೀಟ್‌ಗೆ ಭಾರೀ ಬೆಂಬಲ ವ್ಯಕ್ತವಾಗಿದೆ.