ಲಕ್ನೋ: ಸಿಲಿಂಡರ್ ಸ್ಫೋಟಗೊಂಡು ಎಂಟು ಮಂದಿ ಸಾವನ್ನಪ್ಪಿದ್ದು, ಏಳು ಜನರು ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಮಂಗಳವಾರ(ಜೂನ್ 01) ರಾತ್ರಿ ನಡೆದಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:ಸೋಂಕು ಪ್ರಮಾಣ ಇಳಿಮುಖ : ಸರಕಾರಿ ಆಸ್ಪತ್ರೆಗಳಲ್ಲೇ ಖಾಲಿ ಇವೆ ಸಾವಿರಾರು ಹಾಸಿಗೆ
ಸ್ಫೋಟದ ತೀವ್ರತೆಗೆ ವಾಜಿರ್ ಗಂಜ್ ಪ್ರದೇಶದ ಟಿಕ್ರಿ ಗ್ರಾಮದಲ್ಲಿ ಸಮೀಪದಲ್ಲಿದ್ದ ಎರಡು ಮನೆಗಳು ಕುಸಿದು ಬಿದ್ದಿರುವುದಾಗಿ ವರದಿ ಹೇಳಿದೆ. ತಾಥೇರಿ ಪುರ್ವಾ ಪ್ರದೇಶದಲ್ಲಿನ ನೂರುಲ್ ಹಸನ್ ಕುಟುಂಬ ಅಡುಗೆ ಮಾಡುತ್ತಿದ್ದ ಸಂದರ್ಭದಲ್ಲಿ ಸಿಲಿಂಡರ್ ಸ್ಳೋಟಗೊಂಡ ಘಟನೆ ನಡೆದಿರುವುದಾಗಿ ವರದಿಯಾಗಿದೆ.
ಘಟನೆಯಲ್ಲಿ ಇಬ್ಬರು ಮಹಿಳೆಯರು, ನಾಲ್ಕು ಮಕ್ಕಳು ಹಾಗೂ ಇಬ್ಬರು ಪುರುಷರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದು ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ. ಸುಮಾರು 14 ಜನರನ್ನು ರಕ್ಷಿಸಲಾಗಿದ್ದು, ಏಳು ಮಂದಿ ಸಾವನ್ನಪ್ಪಿರುವುದಾಗಿ ಘೋಷಿಸಲಾಗಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, ರಕ್ಷಣಾ ತಂಡ ಹಾಗೂ ಫೋರೆನ್ಸಿಕ್ ತಜ್ಞರು ಕೂಡಾ ಭೇಟಿ ನೀಡಿರುವುದಾಗಿ ವರದಿ ತಿಳಿಸಿದೆ. ಅಲ್ಲದೇ ಪೊಲೀಸ್ ವರಿಷ್ಠಾಧಿಕಾರಿಗಳು, ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಹಾಜರಿರುವುದಾಗಿ ವರದಿ ತಿಳಿಸಿದೆ.