Advertisement

ಯಾಸ್ ಚಂಡಮಾರುತ : ಪ್ರಧಾನಿ ನೇತೃತ್ವದಲ್ಲಿ ಅಧಿಕಾರಿಗಳ ಪೂರ್ವಭಾವಿ ಸಭೆ

01:32 PM May 23, 2021 | Team Udayavani |

ನವ ದೆಹಲಿ : ಬಂಗಾಳಕೊಲ್ಲಿಯಲ್ಲಿ ಸಂಭವಿಸಲಿಕ್ಕಿರುವ ಯಾಸ್ ಚಂಡಮಾರುತದ ಪೂರ್ವ ಸಿದ್ಧತೆಯ ಕುರಿತಾಗಿ ಇಂದು(ಆದಿತ್ಯವಾರ, ಮೇ, 23) ಪ್ರಧಾನಿ ನರೇಂದ್ರ ಮೋದಿ ಅಧಿಕಾರಿಗಳ ಸಭೆ ಕರೆದು ಪರಿಶೀಲಿಸಿದ್ದಾರೆ.

Advertisement

ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಿರಿಯ ಅಧಿಕಾರಿಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್‌ ಡಿಎಂಎ) ಪ್ರತಿನಿಧಿಗಳು, ಟೆಲಿಕಾಂ, ವಿದ್ಯುತ್, ನಾಗರಿಕ ವಿಮಾನಯಾನ, ಭೂ ವಿಜ್ಞಾನ ಸಚಿವಾಲಯಗಳ ಕಾರ್ಯದರ್ಶಿಗಳು ಭಾಗವಹಿಸಿ ಯಾಸ್ ಚಂಡಮಾರುತದ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.

ಇದನ್ನೂ ಓದಿ : ಕೋವಿಡ್ ಓಡಿಸಲು ಗ್ರಾಮದ ನಾಲ್ಕು ದಿಕ್ಕಿಗೆ ಮಂತ್ರಿಸಿದ ತೆಂಗಿನಕಾಯಿ ಕಟ್ಟಿದ ಗ್ರಾಮಸ್ಥರು.!

ಏತನ್ಮಧ್ಯೆ, ಯಾಸ್ ಅತ್ಯಂತ ತೀವ್ರವಾದ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ ಮತ್ತು ಮೇ 26 ರಂದು ಒಡಿಶಾ ಮತ್ತು ಪಶ್ಚಿಮ ಬಂಗಾಳ ಕಡಲ ತೀರಗಳನ್ನು ದಾಟುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಶನಿವಾರ (ಮೇ 22, 2021) ಹೇಳಿದೆ.

ಇನ್ನು, ಯಾಸ್ ಚಂಡಮಾರುತಕ್ಕೆ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರತೀಯ ಸೇನೆಯು ಶನಿವಾರ (ಮೇ 22) ಎಲ್ಲಾ ರಕ್ಷಣಾ ಸಿದ‍್ದತೆಗಳನ್ನು ವ್ಯವಸ್ಥೆಗೊಳಿಸಿದೆ ಎಂದು ತಿಳಿಸಿದೆ ಮತ್ತು ಎಂಜಿನಿಯರ್ ಕಾರ್ಯಪಡೆಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗಾಗಿ ಸನ್ನದ್ಧವಾಗಿದೆ ಎಂದು ಮಾಹತಿ ನೀಡಿದೆ.

Advertisement

ಸೈನ್ಯದ ಹೊರತಾಗಿ, ಭಾರತೀಯ ನೌಕಾಪಡೆ ತನ್ನ ಸಿದ್ಧತೆಗಳನ್ನು ತಿಳಿಸಿತು ಮತ್ತು ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (ಎಚ್‌ಎಡಿಆರ್) ನೊಂದಿಗೆ ತುರ್ತು ಕಾರ್ಯಾಚರಣೆಗಾಗಿ ನಾಲ್ಕು ವಿಶೇಷ ನೌಕೆಗಳನ್ನು ಕೂಡು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಅಲ್ಲದೆ, ಮೇ 24 ಮತ್ತು ಮೇ 26 ರ ನಡುವೆ ಬಂಗಾಳ-ಒಡಿಶಾ ಕರಾವಳಿಯಲ್ಲಿ ಯಾಸ್ ಚಂಡ ಮಾರುತದ ಕಾಋಣದಿಂದಾಗಿ ಕೆಲವೆಡೆ ಭೂಕುಸಿತ ಸಂಭವಿಸುವ ಸಾದ‍್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇನ್ನು, ಈಶಾನ್ಯ ರೈಲ್ವೆ, ರಾಷ್ಟ್ರ ರಾಜಧಾನಿಯಿಂದ ಒಡಿಶಾದ ಭುವನೇಶ್ವರ ಮತ್ತು ಪುರಿಗೆ ಹೋಗುವ ಬಹುತೇಕ ಎಲ್ಲಾ ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ ಆದೇಶ ಹೊರಡಿಸಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ : ಭದ್ರತಾ ಪಡೆಯ ಭರ್ಜರಿ ಬೇಟೆ: ಅಸ್ಸಾಂನಲ್ಲಿ ಆರು ಮಂದಿ ಉಗ್ರರು ಎನ್ ಕೌಂಟರ್ ನಲ್ಲಿ ಹತ್ಯೆ

Advertisement

Udayavani is now on Telegram. Click here to join our channel and stay updated with the latest news.

Next