Advertisement

ತೌಕ್ತೇ ರೌದ್ರಾವತಾರಕ್ಕೆ ನಡುಗಿದ ಮುಂಬೈ : 6 ಮಂದಿ ಸಾವು, ಮೂವರು ನಾಪತ್ತೆ

10:24 PM May 17, 2021 | Team Udayavani |

ಮುಂಬೈ: ಸೋಮವಾರ ಗಂಟೆಗೆ 185 ಕಿ.ಮೀ. ವೇಗದಲ್ಲಿ ತೌಕ್ತೇ ಚಂ ಡಮಾರುತವು ಗುಜರಾತ್‌ ಕರಾವಳಿಗೆ ಅಪ್ಪಳಿಸುವುದಕ್ಕೂ

Advertisement

ಮುಂಚೆ ಮಹಾರಾಷ್ಟ್ರ ಹಾಗೂ ಗೋವಾದ ಹಲವು ಭಾಗಗಳಲ್ಲಿ “ಮಳೆಯ ರೌದ್ರಾವತಾರ’ವನ್ನು ಪ್ರದರ್ಶಿಸಿತು.

ಚಂಡಮಾರುತ ಸಂಬಂಧಿ ಘಟನೆಗಳಿಂದ ಕೊಂಕಣ ಪ್ರದೇಶದಲ್ಲಿ 6 ಮಂದಿ ಸಾವಿಗೀಡಾಗಿದ್ದು, ಎರಡು ಬೋಟ್‌ ಗಳು ಸಮುದ್ರದಲ್ಲಿ ಮುಳುಗಿದ ಕಾರಣ ಮೂವರು ನಾಪತ್ತೆಯಾಗಿದ್ದಾರೆ. 9 ಮಂದಿ ಗಾಯಗೊಂಡಿದ್ದಾರೆ. ಬಿರುಗಾಳಿಯಿಂದ ಕೂಡಿದ ಧಾರಾಕಾರ ಮಳೆಗೆ ಮುಂಬೈ ಸೇರಿದಂತೆ ರಾಜ್ಯದ ಹಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ರೈಲು ಹಳಿಗಳಲ್ಲಿ ನೀರು ತುಂಬಿಕೊಂಡು ರೈಲುಗಳ ಸಂಚಾರಕ್ಕೂ ಅಡ್ಡಿಯಾಗಿದೆ.

ಇದನ್ನೂ ಓದಿ :ಮೈಕ್ರೋಸಾಫ್ಟ್ ಆಡಳಿತ ಮಂಡಳಿಯ ಸದಸ್ಯತ್ವಕ್ಕೆ ಬಿಲ್‌ ಗೇಟ್ಸ್‌ ರಾಜೀನಾಮೆ

ಹಾನಿ ಬಗ್ಗೆ ಪರಿಶೀಲನೆ:
ಮಧ್ಯಾಹ್ನದ ವೇಳೆಗೆ ಚಂಡಮಾರುತವು ಮುಂಬೈ ಕರಾವಳಿಯನ್ನು ಹಾದುಹೋಗಿದ್ದು, ಆ ಸಮಯದಲ್ಲಿ ಗಂಟೆಗೆ 114 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಳಿ-ಮಳೆಯ ತೀವ್ರತೆಗೆ ಹಲವು ಮರಗಳು ಧರೆಗುರುಳಿವೆ, ಹಲವು ಸ್ಥಳಗಳಲ್ಲಿ ಪ್ರವಾಹ ಸ್ಥಿತಿ ತಲೆದೋರಿದೆ. ಸಿಎಂ ಉದ್ಧವ್‌ ಠಾಕ್ರೆ ಅವರು ಚಂಡಮಾರುತದ ಹಾನಿ ಬಗ್ಗೆ ಪರಿಶೀಲಿಸಿದ್ದಾರೆ. ಪ್ರಧಾನಿ ಮೋದಿ ಅವರೂ ಉದ್ಧವ್‌ಗೆ ಕರೆ ಮಾಡಿ, ಎಲ್ಲ ರೀತಿಯ ನೆರವಿನ ಭರವಸೆ ನೀಡಿದ್ದಾರೆ.

Advertisement

ತೌಕ್ತೇ ಅಬ್ಬರದ ಹಿನ್ನೆಲೆಯಲ್ಲಿ ಮುಂಬೈನ ಛತ್ರಪತಿ ಶಿವಾಜಿ ಮಹರಾಜ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾತ್ರಿ 10ರವರೆಗೂ ವಿಮಾನಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. 12 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿತ್ತು. ಮುಂಬೈ ಕರಾವಳಿಯಾಚೆ 2 ಬಾರ್ಜ್‌ಗಳಲ್ಲಿ 410 ಮಂದಿ ಸಿಲುಕಿಕೊಂಡಿದ್ದ ಮಾಹಿತಿ ಬಂದ ಕಾರಣ, ಭಾರತೀಯ ನೌಕಾಪಡೆಯು ಮೂರು ಯುದ್ಧ ನೌಕೆಗಳನ್ನು ರಕ್ಷಣೆಗಾಗಿ ರವಾನಿಸಿದೆ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next