Advertisement
ಚಂಡಮಾರುತ ಅಪ್ಪಳಿಸಲಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೋರಬಂದರ್ ಮತ್ತು ಭಾವ್ ನಗರದ ಮಹುವಾ ತಗ್ಗುಪ್ರದೇಶದಲ್ಲಿರುವ ಸುಮಾರು 25 ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ರಾಜ್ಯಾದ್ಯಂತ ಸುಮಾರ 1.5 ಲಕ್ಷ ಮಂದಿಯನ್ನು ಈವರೆಗೆ ಸ್ಥಳಾಂತರಿಸಲಾಗಿದೆ ಎಂದು ವರದಿ ತಿಳಿಸಿದೆ.
Related Articles
Advertisement
ಮುಂಬಯಿನಲ್ಲಿ ವಿಮಾನ ನಿಲ್ದಾಣ ಬಂದ್:ಸೋಮವಾರ ಬೆಳಗ್ಗೆ ಮುಂಬಯಿನಲ್ಲಿ ಸಾಧಾರಣ ಮಳೆಯಾಗಿದ್ದು, ವಿಮಾನ ನಿಲ್ದಾಣವನ್ನು 2ಗಂಟೆವರೆಗೆ ಬಂದ್ ಮಾಡಲಾಗಿದೆ. ಅಲ್ಲದೇ ಬಾಂದ್ರಾ-ವರ್ಲಿ ಸಂಪರ್ಕ ಸೇತುವೆಯನ್ನು ಬಂದ್ ಮಾಡಲಾಗಿದೆ. ನಗರದ 24 ವಾರ್ಡ್ ಗಳಲ್ಲಿ ಐದು ತಾತ್ಕಾಲಿಕ ಶೆಲ್ಟರ್ ನಿರ್ಮಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮೂರು ಎನ್ ಡಿಆರ್ ಎಫ್ ತಂಡವನ್ನು ನಿಯೋಜಿಸಲಾಗಿದೆ.