Advertisement
ಬಾಂಗ್ಲಾ ಮತ್ತು ಪ.ಬಂಗಾಲ ಕರಾವಳಿ ಯುದ್ದಕ್ಕೂ ಅಪಾರ ಪ್ರಮಾಣದ ಹಾನಿಯಾಗಿದೆ. ಅನೇಕ ಮನೆಗಳ ಛಾವಣಿಗಳು ಹಾರಿಹೋಗಿದ್ದು, ವಿದ್ಯುತ್ ಕಂಬಗಳು ಧರೆಗುರುಳಿವೆ. ಬಾಂಗ್ಲಾದಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡು, 1.50 ಕೋಟಿ ಮಂದಿ ಕಗ್ಗತ್ತಲಲ್ಲೇ ರಾತ್ರಿ ಕಳೆದಿದ್ದಾರೆ.ಪ.ಬಂಗಾಲದ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಸ್ಥಿತಿ ಉಂಟಾಗಿತ್ತು. ಮೆಟ್ರೋ, ರೈಲು, ವಿಮಾನ ಸೇವೆಗಳು ವ್ಯತ್ಯಯ ವಾಗಿವೆ. ಕೋಲ್ಕತಾ ಏರ್‌ಪೋರ್ಟ್‌ನಲ್ಲಿ 21 ಗಂಟೆಗಳ ಕಾಲ ವಿಮಾನಗಳ ಸಂಚಾರ ಸ್ಥಗಿತ ಗೊಂಡಿದ್ದವು. ಕೋಲ್ಕತಾದಲ್ಲಿ ರವಿವಾರ ಬೆಳಗ್ಗೆ 8.30ರಿಂದ ಸೋಮವಾರ ಬೆಳಗ್ಗೆ 5.30ರ ವರೆಗೆ 146 ಮಿ.ಮೀ. ಮಳೆಯಾಗಿದೆ. ಸೋಮವಾರ ಮುಂಜಾನೆ 5.30ರ ವೇಳೆಗೆ ಚಂಡಮಾರುತವು ತೀವ್ರತೆ ಕಳೆದುಕೊಂಡಿದ್ದು, ಕ್ರಮೇಣ ದುರ್ಬಲ ವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.