Advertisement
ಸುಮಾರು 60 ಕಿಮೀ ವೇಗದಲ್ಲಿ ಅಲಿಬಾಗ್ ಪ್ರದೇಶಕ್ಕೆ ನಿಸರ್ಗ ಚಂಡಮಾರುತ ಬಡಿದಪ್ಪಳಿಸಿದ್ದು, ದಕ್ಷಿಣ ಮುಂಬೈಗೆ 110 ಕಿಲೋ ಮೀಟರ್ ನಷ್ಟು ವೇಗದಲ್ಲಿ ಹಾಗೂ ದಕ್ಷಿಣ ಗುಜರಾತ್ ಪ್ರದೇಶಕ್ಕೆ 340 ಕಿಮೀ ವೇಗದಲ್ಲಿ ಚಂಡಮಾರುತ ಬಡಿದಪ್ಪಳಿಸಲಿದೆ ಎಂದು ವರದಿ ವಿವರಿಸಿದೆ.
*ನಿಸರ್ಗ ಚಂಡಮಾರುತ ಬಂದಪ್ಪಳಿಸುವ ಪ್ರಕ್ರಿಯೆ ಸುಮಾರು ಮೂರು ಗಂಟೆ ತೆಗೆದುಕೊಳ್ಳಲಿದೆ’
*ಮಹಾರಾಷ್ಟ್ರ ಹಾಗೂ ಗುಜರಾತ್ ಕರಾವಳಿ ಪ್ರದೇಶದಲ್ಲಿನ ಸುಮಾರು 1 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.
*ಜನರ ಸುರಕ್ಷತೆಯ ದೃಷ್ಟಿಯಿಂದ ಮುಂಬೈಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
*ನಿಸರ್ಗ ಚಂಡಮಾರುತ ಮುಂಬೈ ಕರಾವಳಿ ಪ್ರದೇಶಕ್ಕೆ 120 ಕಿಲೋ ಮೀಟರ್ ವೇಗದಲ್ಲಿ ಬಡಿದಪ್ಪಳಿಸಲಿದೆ. ಅಂದಾಜು 1.5 ಮೀಟರ್ ಎತ್ತರಕ್ಕೆ ಅಲೆಗಳು ಮೇಲಕ್ಕೇಳಲಿದೆ.