Advertisement

ಒಡಿಶಾಗೆ ಚಂಡಮಾರುತ ಮುನ್ಸೂಚನೆ 

10:18 PM Jul 25, 2023 | Team Udayavani |

ನವದೆಹಲಿ: ಉತ್ತರಾಖಂಡ, ಮಹಾರಾಷ್ಟ್ರ, ಜಮ್ಮು-ಕಾಶ್ಮೀರ ಸೇರಿದಂತೆ ದೇಶದ ವಿವಿಧೆಡೆ ಮಂಗಳವಾರವೂ ವರುಣಾರ್ಭಟ ಮುಮದುವರಿದಿದೆ. ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರಚನೆಯ ಸೂಚನೆ ಪ್ರಬಲವಾಗಿರುವ ಹಿನ್ನೆಲೆಯಲ್ಲಿ ಒಡಿಶಾದ ಹಲವು ಭಾಗಗಳಲ್ಲಿ ಹಾಗೂ ಆಂಧ್ರಪ್ರದೇಶದಲ್ಲಿ ಮುಂದಿನ 2 ದಿನಗಳು ಭಾರೀ ಮಳೆಯಾಗುವ ಸಾಧ್ಯತೆಗಳಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

Advertisement

ಮಹಾರಾಷ್ಟ್ರದ ಮುಂಬೈನ ಹಲವು ಭಾಗಗಳಲ್ಲೂ ಭಾರೀ ಮಳೆಯಾಗಿದೆ. ಆದಾಗ್ಯೂ, ಕಳೆದ ವಾರಕ್ಕೆ ಹೋಲಿಸಿದರೆ ಮಳೆಯ ಪ್ರಮಾಣ ಕಡಿಮೆಯಾಗಿದೆ. ದೆಹಲಿಯ ಯಮುನಾ ನದಿ ಹರಿವಿನ ಪ್ರಮಾಣವೂ ಕಡಿಮೆಯಾಗಿದೆ ಎಂದು ಐಎಂಡಿ ತಿಳಿಸಿದೆ. ಏತನ್ಮಧ್ಯೆ ಹರ್ಯಾಣದಲ್ಲೂ ಭಾರೀ ಮಳೆಯಾಗಲಿದೆ ಎಂದು ಸೂಚನೆ ನೀಡಿದ್ದು, ತೆಲಂಗಾಣಕ್ಕೆ ರೆಡ್‌ ಅಲರ್ಟ್‌ ಮತ್ತು ಕೇರಳದ 4 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next