Advertisement

Cyclone Fengal: ತಮಿಳುನಾಡಿನ 15 ಜಿಲ್ಲೆಯಲ್ಲಿ ಪ್ರವಾಹ: 721 ಮನೆ ನೆಲಸಮ

03:52 AM Dec 04, 2024 | Team Udayavani |

ಚೆನ್ನೈ: ಫೈಂಜಾಲ್‌ ಚಂಡಮಾರುತದ ತೀವ್ರತೆ ಕುಗ್ಗಿದ್ದರೂ ಸಹ ತಮಿಳುನಾಡು ಮತ್ತು ಪುದು ಚೆರಿಯಲ್ಲಿ ಮಳೆ ಮುಂದುವರಿದಿದೆ. ಸತತ 3 ದಿನದಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ದಿನನಿತ್ಯದ ಬಳಕೆಯ ವಸ್ತುಗಳನ್ನು ಪಡೆದುಕೊಳ್ಳಲು ಸಹ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

ತಮಿಳುನಾಡು ಮತ್ತು ಪುದುಚೆರಿಯಲ್ಲಿ ಇನ್ನೂ ಹಲವು ಪ್ರದೇಶಗಳು ಮುಳುಗಡೆಯಾಗಿದ್ದು, ರಸ್ತೆ ಸಂಪರ್ಕ ಕಳೆದುಕೊಂಡು ದ್ವೀಪದಂತಾಗಿವೆ. ತಮಿಳು ನಾಡಿ ನಲ್ಲಿ ಕನಿಷ್ಠ 15 ಜಿಲ್ಲೆಗಳು ಪ್ರವಾಹ ಪರಿಸ್ಥಿತಿಗೆ ತುತ್ತಾಗಿದ್ದು, ಈ ಜಿಲ್ಲೆಗಳಲ್ಲಿ ಬುಧವಾರವೂ ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ. 2 ರಾಜ್ಯಗಳಲ್ಲಿ ಮಳೆ ಸಂಬಂಧಿತ ಅವಘಡಗಳಿಗೆ 12 ಮಂದಿ ಮೃತಪಟ್ಟಿದ್ದು, 2,416 ಗುಡಿಸಲು ಹಾಗೂ 721 ಮನೆಗಳು ನಾಶವಾ ಗಿವೆ. ಎನ್‌ಡಿಆರ್‌ಎಫ್ ಹಾಗೂ ರಾಜ್ಯ ವಿಪತ್ತು ಪರಿಹಾರ ತಂಡಗಳು ರಕ್ಷಣ ಕಾರ್ಯಾಚರಣೆ ನಡೆಸುತ್ತಿವೆ.

2000 ರೂ. ಪರಿಹಾರ:
ಫೈಂಜಾಲ್‌ ಚಂಡಮಾರುತದಿಂದ ಸಮಸ್ಯೆಗೆ ತುತ್ತಾಗಿರುವ ವಿಲ್ಲುಪುರಂ, ಕಡಲೂರು ಮತ್ತು ಕಲ್ಲಕುರಿಚಿ ಜಿಲ್ಲೆಗಳಲ್ಲಿ ಪ್ರವಾಹದಿಂದ ತೊಂದರೆಗೊಳಗಾದವರಿಗೆ ಸಿಎಂ ಎಂ.ಕೆ.ಸ್ಟಾಲಿನ್‌ 2,000 ರೂ. ತುರ್ತು ಪರಿಹಾರ ಘೋಷಣೆ ಮಾಡಿದ್ದಾರೆ.

ಕರೆ ಮಾಡಿ ಪರಿಹಾರದ ಭರವಸೆ ನೀಡಿದ ಮೋದಿ
ಪ್ರವಾಹ ಪರಿಸ್ಥಿತಿ ಸಂಬಂಧ ಎಂ.ಕೆ.ಸ್ಟಾಲಿನ್‌ಗೆ ಕರೆ ಮಾಡಿ ಮಾತನಾಡಿರುವ ಪ್ರಧಾನಿ ಮೋದಿ ಅವರು ಸೂಕ್ತ ಪರಿಹಾರದ ಭರವಸೆ ನೀಡಿ­ದ್ದಾರೆ. ಕೇಂದ್ರ ತಂಡ ಕಳುಹಿಸಿ ಪರಿಶೀಲನೆ ನಡೆಸಬೇಕು ಎಂದು ಸ್ಟಾಲಿನ್‌ ಮನವಿ ಮಾಡಿದ್ದಾರೆ.

Advertisement

ಡಿಎಂಕೆ ಸಚಿವನಿಗೆ ಕೆಸರಿನ ಸ್ವಾಗತ
ಪ್ರವಾಹ ಪೀಡಿತ ಪ್ರದೇಶವೊಂದಕ್ಕೆ ಭೇಟಿ ನೀಡಿದ ಡಿಎಂಕೆ ಸಚಿವ ಕೆ.ಪೊನ್ಮುಡಿ ಅವರಿಗೆ ಕೆಸರು ಎರಚುವ ಮೂಲಕ ಜನ ಸ್ವಾಗತ ಕೋರಿದ ಘಟನೆ ವಿಲ್ಲುಪುರಂ ನಲ್ಲಿ ನಡೆದಿದೆ. ತತ್‌ಕ್ಷಣ ಮಧ್ಯಪ್ರವೇಶಿಸಿದ ಪೊಲೀಸರು ಸಚಿವರನ್ನು ರಕ್ಷಿಸಿ ಕಳುಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಣ್ಣಾಮಲೈ, ಇದು ತಮಿಳುನಾಡಿನ ಸದ್ಯದ ಸ್ಥಿತಿಯಾಗಿದೆ. ಚೆನ್ನೈ ನಗರದಾಚೆಗೆ ಏನಾಗುತ್ತಿದೆ ಎಂಬುದು ಸರಕಾರಕ್ಕೆ ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next