Advertisement

ಒಡಿಸ್ಸಾ ಕರಾವಳಿಗೆ ಅಪ್ಪಳಿಸಿದ ಫೋನಿ ; ಭಾರೀ ಮಳೆ

09:42 AM May 06, 2019 | Team Udayavani |

ಭುವನೇಶ್ವರ: ತೀವ್ರ ಆತಂಕಕ್ಕೆ ಕಾರಣವಾಗಿದ್ದ ‘ಫೋನಿ’ ಹೆಸರಿನ ಚಂಡಮಾರುತವು ಶುಕ್ರವಾರ ಬೆಳಗ್ಗೆ ಒಡಿಸ್ಸಾದ ಪುರಿ ಜಿಲ್ಲೆಯ ಕರಾವಳಿಗೆ ಅಪ್ಪಳಿಸಿದೆ.

Advertisement

ಚಂಡಮಾರುತದ ಪರಿಣಾಮದಿಂದ ಉಂಟಾಗುತ್ತಿರುವ ಭಾರೀ ಮಳೆಗೆ ಪುರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ತಲೆದೋರಿದೆ. ಯಾವುದೆ ಅಪಾಯಗಳನ್ನು ಸಮರ್ಥವಾಗಿ ಎದುರಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು ಸರ್ವಸನ್ನದ್ಧವಾಗಿ ಈ ಭಾಗದಲ್ಲಿ ಬೀಡುಬಿಟ್ಟಿವೆ.

13 ಜಿಲ್ಲೆ ಗಳ ಸೈಕ್ಲೋನ್‌ ಅಪಾಯ ಎದುರಾಗಿರುವ ಪ್ರದೇಶಗಳಲ್ಲಿನ 11.5 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಭಾರೀ ಗಾಳಿ ಮತ್ತು ಮಳೆ ಬೀಳುತ್ತಿದ್ದು, ಪುರಿಯ ಸಮೀಪದ ಗೋಪಾಲಪುರದಲ್ಲಿ ಭೂಕುಸಿತ ಸಂಭವಿಸಿದೆ. ಇನ್ನಷ್ಟು ಕಡೆ ಭೂಕುಸಿತ ಸಂಭವಿಸುವ ಆತಂಕ ಎದುರಾಗಿದೆ. ಹಲವೆಡೆ ಮರಗಳು ಮತ್ತು ವಿದ್ಯುತ್‌ ಕಂಬಗಳು ಧರಾಶಾಹಿಯಾಗಿವೆ.

83 ಪ್ಯಾಸೆಂಜರ್‌ ರೈಲುಗಳು ಸೇರಿ ಒಟ್ಟು 143 ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ಒಡಿಶಾ ಸಂಪೂರ್ಣ ಸ್ತಬ್ಧವಾಗಿದೆ. NDRF ತಂಡಗಳು ಸರ್ವ ಸನ್ನದ್ಧವಾಗಿದ್ದು, ಯವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ದವಾಗಿವೆ.

Advertisement

ಆಂಧ್ರದ ಕರಾವಳಿಯಲ್ಲೂ ಭಾರೀ ಮಳೆ ಸುರಿಯುತ್ತಿದ್ದು, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿಯೂ ಭಾರೀ ಮಳೆ ಬೀಳುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next