Advertisement

BIPARJOY ಚಂಡಮಾರುತ 24ಗಂಟೆಯಲ್ಲಿ ತೀವ್ರ ಸ್ವರೂಪ-ಕರಾವಳಿ ಭಾಗದಲ್ಲಿ ತೀವ್ರ ಮಳೆ ಸಾಧ್ಯತೆ

11:49 AM Jun 10, 2023 | Team Udayavani |

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಎದ್ದಿರುವ ಈ ವರ್ಷದ ಮೊದಲ ಚಂಡಮಾರುತ “ಬಿಪರ್‌ ಜಾಯ್” ಮುಂದಿನ 24 ಗಂಟೆಗಳಲ್ಲಿ ಭಾರೀ ತೀವ್ರಗತಿಯಲ್ಲಿ ಉತ್ತರ ಈಶಾನ್ಯ ಭಾಗದಲ್ಲಿ ಬಡಿದಪ್ಪಳಿಸುವ ಸಾಧ್ಯತೆ ಇದ್ದಿರುವುದಾಗಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.

Advertisement

ಇದನ್ನೂ ಓದಿ:Tokyo airport ರನ್ ವೇಯಲ್ಲಿ ಮುಖಾಮುಖಿಯಾದ ಎರಡು ಪ್ಯಾಸೆಂಜರ್ ವಿಮಾನಗಳು

ಮುಂದಿನ 24ಗಂಟೆಯಲ್ಲಿ ಬಿಪರ್‌ ಜಾಯ್‌ ಚಂಡಮಾರುತವು ಗಂಟೆಗೆ 145 ಕಿಲೋ ಮೀಟರ್‌ ವೇಗದಲ್ಲಿ ಚಲಿಸಲಿದ್ದು, ಇದರ ಪರಿಣಾಮ ಭಾರೀ ಮಳೆ ಸುರಿಯಲಿದೆ. ಅಲ್ಲದೇ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಕರಾವಳಿ ಪ್ರದೇಶದಲ್ಲಿ ಭಾರೀ ಗಾಳಿ ಬೀಸಲಿದೆ ಎಂದು ಐಎಂಡಿ ಮುನ್ನೆಚ್ಚರಿಕೆ ನೀಡಿದೆ.

ಪ್ರಬಲ ಚಂಡಮಾರುತ ಬೀಸಲಿರುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆಯಾಗಿ ಗುಜರಾತ್‌ ನ ಜನಪ್ರಿಯ ಪ್ರವಾಸಿ ತಾಣವಾದ ವಲ್ಸಾಡ್‌ ಅರಬ್ಬಿ ಸಮುದ್ರ ಪ್ರದೇಶದಲ್ಲಿನ ತಿಥಾಲ್‌ ಬೀಚ್‌ ಗೆ ಪ್ರವಾಸಿಗರು ತೆರಳದಂತೆ ಜೂನ್‌ 14ರವರೆಗೆ ನಿರ್ಬಂಧ ವಿಧಿಸಲಾಗಿದೆ.

ಕರಾವಳಿ ಪ್ರದೇಶದಲ್ಲಿರುವ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ ಎಂದು ಐಎಂಡಿ ತಿಳಿಸಿದೆ. ಒಂದು ವೇಳೆ ಅಗತ್ಯ ಬಿದ್ದರೆ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದು ವಲ್ಸಾಡ್‌ ತಹಸೀಲ್ದಾರ್‌ ಟಿಸಿ ಪಟೇಲ್‌ ಎಎನ್‌ ಐ ನ್ಯೂಸ್‌ ಏಜೆನ್ಸಿಗೆ ತಿಳಿಸಿದ್ದಾರೆ.

Advertisement

ಕರ್ನಾಟಕ, ಕೇರಳ, ಗುಜರಾತ್‌ ಮತ್ತು ಲಕ್ಷದ್ವೀಪ ಕರಾವಳಿ ಪ್ರದೇಶದಲ್ಲಿನ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದ್ದು, ಕೇರಳದ ಎಂಟು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಜಾರಿಗೊಳಿಸಲಾಗಿದೆ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next