Advertisement
ಭಾರತೀಯ ಹವಾಮಾನ ಇಲಾಖೆ ಮಾಹಿತಿಯ ಪ್ರಕಾರ, ಈ ಬಾರಿಯ ಮುಂಗಾರು ವಿಳಂಬವಾಗಿ ಜೂನ್ 5ಕ್ಕೆ ಕೇರಳ ಕರಾವಳಿ ತೀರ ವನ್ನು ಪ್ರವೇಶಿಸುವ ಸಾಧ್ಯತೆ ಇದೆ. ಬಳಿಕ ಒಂದೆರಡು ದಿನಗಳಲ್ಲಿ ರಾಜ್ಯ ಕರಾವಳಿ ತೀರ ಪ್ರವೇಶಿಸಿ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆ ಸಹಿತ ದಕ್ಷಿಣ ಒಳನಾಡಿನಲ್ಲಿ ನೀರಿಕ್ಷೆಯಂತೆ ಮಳೆಗಾಲ ಪ್ರಾರಂಭವಾಗುವ ಮುನ್ಸೂಚನೆಯಿದೆ. ಆದರೆ ಚಂಡಮಾರುತ ಪ್ರಭಾವ ಈ ತಿಂಗಳಾಂತ್ಯದವರೆಗೆ ಇದ್ದರೆ ಮುಂಗಾರು ಪ್ರವೇಶಿಸುವಲ್ಲಿ ವಿಳಂಬವಾಗಬಹುದು ಎನ್ನುತ್ತಾರೆ ಹವಾಮಾನ ತಜ್ಞರು.
Related Articles
ಉತ್ತಮ ಮುಂಗಾರು
ಕಳೆದ ಬಾರಿ ರಾಜ್ಯ ಕರಾವಳಿಗೆ ವಾಡಿಕೆಗಿಂತ ತಡವಾಗಿ ಅಂದರೆ ಜೂನ್ 14ರಂದು ಮುಂಗಾರು ಪ್ರವೇಶ ಪಡೆದಿತ್ತು. ಎರಡು ವರ್ಷಗಳಿಂದ ಕರಾವಳಿಯಲ್ಲಿ ಮುಂಗಾರು ಉತ್ತಮವಾಗಿತ್ತು. 2018ರಲ್ಲಿ ಶೇ.3ರಷ್ಟು ಮತ್ತು 2019ರಲ್ಲಿ ಶೇ.24ರಷ್ಟು ಮಳೆ ಪ್ರಮಾಣ ಹೆಚ್ಚಳವಾಗಿತ್ತು.
Advertisement
ವಿಳಂಬ ಸಾಧ್ಯತೆಬಂಗಾಲಕೊಲ್ಲಿಯಲ್ಲಿ ಚಂಡ ಮಾರುತ ಮತ್ತು ಅರಬ್ಬಿ ಸಮುದ್ರ ದಲ್ಲಿ ನಿಮ್ನ ಒತ್ತಡ ಪರಿಣಾಮ ಕರಾವಳಿ ಭಾಗದಲ್ಲಿ ಉತ್ತಮ ಮಳೆ ಸಾಧ್ಯತೆ ಇದೆ. ಮೇ ಅಂತ್ಯಕ್ಕೆ ಕೇರಳ ಕರಾವಳಿ ತೀರಕ್ಕೆ ಮುಂಗಾರು ಪ್ರವೇಶ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ ಬಂಗಾಲಕೊಲ್ಲಿಯಲ್ಲಿ ಪ್ರಭಾವ ಬೀರುತ್ತಿರುವ ಚಂಡಮಾರುತದ ಪರಿ ಣಾಮ ಜೂನ್ 4ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ. ಬಳಿಕ ಒಂದೆರಡು ದಿನಗಳಲ್ಲಿ ರಾಜ್ಯಕ್ಕೆ ಪ್ರವೇಶ ಪಡೆಯಬಹುದು.
-ಸುನಿಲ್ ಗವಾಸ್ಕರ್
ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ