Advertisement

ಚಂಡ ಮಾರುತ ಭೀತಿ : ಕರಾವಳಿಯಲ್ಲಿ ವಿಸ್ತಾರಗೊಂಡ‌ ಕಡಲು ; ತೀರ ವಾಸಿಗಳಲ್ಲಿ ಆತಂಕ

06:55 PM May 14, 2021 | Team Udayavani |

ಕಾಪು : ಅರಬ್ಬಿ ಸಮುದ್ರದಲ್ಲಿ ಚಂಡ ಮಾರುತದ ಭೀತಿಯಿಂದಾಗಿ ಕಡಲು ರೌದ್ರಾವತಾರ ತಾಳಿದ್ದು, ಕಾಪು ಲೈಟ್ ಹೌಸ್ ಸಮೀಪದಲ್ಲಿ ಕಡಲು ವಿಸ್ತಾರಗೊಂಡಿದ್ದು ಸಮುದ್ರ ತೀರದ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.

Advertisement

ಸಮುದ್ರ ವಿಸ್ತಾರಗೊಂಡ ಪರಿಣಾಮ ಕೆಲವೆಡೆ ಸಮುದ್ರ ಕೊರೆತದ ಭೀತಿ ಎದುರಾಗಿದ್ದು, ಲೈಟ್ ಹೌಸ್ ನ್ನು ‌ಮೂರು ಸುತ್ತಲಿನಿಂದಲೂ ಸಮುದ್ರ ಆವರಿಸಿಕೊಂಡಿದೆ.

ಕಾಪು, ಪೊಲಿಪು, ಉಳಿಯಾರಗೋಳಿ, ಮೂಳೂರು ಮತ್ತು ಉಚ್ಚಿಲ ಪರಿಸರದಲ್ಲಿ ಮೀನುಗಾರರು ತಮ್ಮ ದೋಣಿಗಳನ್ನು ದಡಕ್ಕೆ ತಂದು ಸುರಕ್ಷಿತವಾಗಿ ಹಗ್ಗದಿಂದ ಕಟ್ಟಿ ಜೋಡಿಸಿಡುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.

ಕರಾವಳಿ ಕಾವಲು ಪಡೆ ಪೊಲೀಸರು, ಪೊಲೀಸ್ ಇಲಾಖೆ, ಸ್ಥಳೀಯಾಡಳಿತ ಸಂಸ್ಥೆಯ ಅಧಿಕಾರಿಗಳು ಮತ್ತು ಜನಪ್ರಿತಿನಿಧಿಗಳು ಕರಾವಳಿ ಪ್ರದೇಶದಲ್ಲಿ ಜನರು ಎಚ್ಚರ ವಹಿಸುವಂತೆ‌ ಸೂಚನೆ ನೀಡಿದ್ದಾರೆ.

Advertisement

ಇದನ್ನೂ ಓದಿ :ವದಂತಿಗೆ ಕಿವಿಗೊಡಬೇಡಿ: CBSE 12ನೇ ತರಗತಿ ಪರೀಕ್ಷೆ ರದ್ದು ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ

ಗ್ರಾಮೀಣ ಪ್ರದೇಶಗಳಲ್ಲಿ ಗಾಳಿ ರಭಸವಾಗಿ ಬೀಸುತ್ತಿದ್ದು, ಜನರು ಎಚ್ಚರದಿಂದ ಇರುವಂತೆ ಮತ್ತು ಮರಮುಟ್ಟುಗಳು, ವಿದ್ಯುತ್ ಕಂಬಗಳ ಬಳಿಯ ಅಪಾಯವನ್ನು ಗಮನಿಸಿಕೊಂಡು ಓಡಾಡುವಂತೆ ತಾಲೂಕು ಆಡಳಿತ, ಪುರಸಭೆ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳು ಜನರಿಗೆ ಮುನ್ನೆಚ್ಚರಿಕೆ ನೀಡಿವೆ.

 

Advertisement

Udayavani is now on Telegram. Click here to join our channel and stay updated with the latest news.

Next