ಶುಕ್ರವಾರ ಕರಾವಳಿ ಕರ್ನಾಟಕ, ಗೋವಾ, ಕೊಂಕಣ ಕಡಲತೀರಗಳಲ್ಲಿ ಭಾರೀ ಮಳೆ ಸಾಧ್ಯತೆ ಇದೆ ಎಂದು ಅದು ಹೇಳಿದೆ.
Advertisement
ಅಲ್ಲದೇ ಒಂದು ವೇಳೆ ಚಂಡಮಾರುತದ ಸಾಧ್ಯತೆಗಳು ತೀವ್ರಗೊಂಡಿದ್ದೇ ಆದಲ್ಲಿ ಅದು ಅ.23ರಿಂದ ನ.5ರ ವರೆಗಿನ ದಿನಗಳಲ್ಲಿ ಒಮಾನ್ ಅಥವಾ ಯೆಮೆನ್ ತೀರದತ್ತ ಸಾಗಲಿದೆ ಎಂದು ಊಹಿಸಲಾಗಿದೆ. ಉತ್ತರ ಭಾಗದಿಂದ ಹೆಚ್ಚಿನ ಒತ್ತಡ ಉಂಟಾಗುತ್ತಿದ್ದು, ಇದರಿಂದಾಗಿ ಈ ಸನ್ನಿವೇಶ ಸೃಷ್ಟಿಯಾಗಿದೆ ಎಂದು ಹೇಳಲಾಗಿದೆ.ಇದರೊಂದಿಗೆ ಮಳೆ ತುಸು ಉತ್ತರಕ್ಕೆ ಸಾಗುವ ಸಾಧ್ಯತೆಯಿದ್ದು, ಒಡಿಶಾ, ಆಂಧ್ರ ಕರಾವಳಿಯಲ್ಲೂ ಮಳೆ ಸಾಧ್ಯತೆಯನ್ನು ಹೇಳಲಾಗಿದೆ.