ನನ್ನ ಮೊದಲ ಹುಟ್ಟುಹಬ್ಬಕ್ಕೆ ಕೇಸರಿ ಬಣ್ಣದ ಮೂರು ಚಕ್ರದ ಸೈಕಲ್ ಒಂದನ್ನು ನನ್ನ ಮಾಮ ಉಡುಗೊರೆಯಾಗಿ ನೀಡಿದ್ದನು. ಅದನ್ನು ನಾನು, ನನ್ನ ತಮ್ಮ ಕಿತ್ತಾಡಿಕೊಂಡು ಓಡಿಸುತ್ತಿದ್ದೆವು. ಇನ್ನು 5-6ನೇ ತರಗತಿಗೆ ಹೋಗುತ್ತಲೇ, ಬೇಸಿಗೆ ರಜೆಯಲ್ಲಿ ನನಗೆ ಸೈಕಲ್ ಕಲಿಸಲೆಂದು ನನ್ನ ಅಪ್ಪ ಬಾಡಿಗೆ ಸೈಕಲ್ ತಂದಿದ್ದರು. ಅವರ ಬಿಡುವಿನ ವೇಳೆಯಲ್ಲಿ ನನಗೆ ಮನೆಯ ಪಕ್ಕದ ಆಟದ ಮೈದಾನದಲ್ಲಿ ಕಲಿಸುತ್ತಿದ್ದರು. ಆದರೆ, ನನ್ನ ತಮ್ಮ ಸೈಕಲ್ ಓಡಿಸಲು ಕಲಿತನು. ಆಮೇಲೆ ನನ್ನ ತಮ್ಮನೇ ನನ್ನ ಗುರು!
Advertisement
ಸೈಕಲ್ ಕಲಿತ ಮೇಲೆ ಶಾಲೆಗೆ ಹೋಗಲು ನನಗೆ ಸಂಬಂಧಿಕರ ಸೈಕಲ್ ದೊರೆಯಿತು, ತಮ್ಮನಿಗೆ ಚಿಕ್ಕಪ್ಪ ಬೈಕು ಕೊಂಡರೆಂದು ಉಪಯೋಗಿಸದೇ ಇಟ್ಟ ಹೊಸ ಸೈಕಲ್ ಸೈಕಲ್‌ನಲ್ಲಿ ಹೋಗುತ್ತಿದ್ದೇವೆಂಬ ಮಹಾ ಅಭಿಮಾನ ನಮಗೆ. ಅವನ ಸೈಕಲನ್ನು ತೊಳೆದು, ನನ್ನ ಸೈಕಲನ್ನು ತೊಳೆಯಲು ಸಹಾಯ ಮಾಡುತ್ತಿದ್ದನು ನನ್ನ ತಮ್ಮ. ಇಷ್ಟರಲ್ಲಿ ಒಂದು ದಿನ ಶಾಲೆಯಲ್ಲಿ ನನ್ನ ತಮ್ಮನ ಸೈಕಲ್ ಕಳೆದು ಹೋಯಿತು, ಎರಡು ದಿನ ಅದರದೇ ಕನಸು. ನಂತರದ ದಿನಗಳಲ್ಲಿ ಇಬ್ಬರೂ ಸೇರಿ ಡಬ್ಬಲ್ ರೈಡ್ ಶುರು ಹಚ್ಚಿಕೊಂಡೆವು.5ನೇ ವರ್ಷದ ಹುಟ್ಟುಹಬ್ಬದ ದಿನ ನನ್ನ ಮಾಮ ಅವನ ಸೈಕಲ್ಲಿನ ಎದುರುಗಡೆ ಕೂರಿಸಿಕೊಂಡು ದೇವಸ್ಥಾನಕ್ಕೆ ಹೋದದ್ದು ಇನ್ನೂ ನೆನಪಿದೆ. ವಾಪಸ್ ಬರುವುದನ್ನು ಕಂಡ ಅವನ ಮಗಳು ಅವಳ ಹಕ್ಕಿನ ಸೀಟಿನಲ್ಲಿ ನಾನು ಕುಳಿತೆನೆಂದು ಹಠ ಮಾಡಿ ಮಾಮನ ಜೊತೆ ದೇವಸ್ಥಾನಕ್ಕೆ ಹೋಗಿ ಬಂದಿದ್ದಳು.
Related Articles
Advertisement
ಪೆಟ್ರೋಲ್ ಡಿಸೇಲ್ ಈ ಜಗದಲ್ಲಿ ಕಡಿಮೆಯಾಗಿ, ಬೆಲೆ ಜಾಸ್ತಿಯಾಗಿರುವ ಕಾಲದಲ್ಲಿ ಹಿತಮಿತವಾಗಿ ಕಾರು, ಬೈಕು ಓಡಿಸಿ, ಸೈಕಲ್ ಬಳಸಿದರೆ ನಮ್ಮ ಮುಂದಿನ ಪೀಳಿಗೆಯು ನಮ್ಮಂತೆ ಏನಾದರೂ ಸಾಧಿಸಬಹುದು, ಇಲ್ಲವಾದರೆ ಪೆಟ್ರೋಲ್ ಪಂಪಿನ ಜಾಗದಲ್ಲಿ ನಮ್ಮ ಮಕ್ಕಳು ಸೈಕಲ್ ಅಂಗಡಿ ತೆಗೆಯಬೇಕಾಗಬಹುದು !
– ಸಾವಿತ್ರಿ ಶ್ಯಾನುಭಾಗ